ಬೆಂಗಳೂರು: ರಾಜ್ಯದಲ್ಲಿ ಪರವಾನಗಿ (ಲೈಸೆನ್ಸ್) ಇಲ್ಲದೆ ಹೊಂದಿರುವ ಗನ್‌ಗಳನ್ನು ಕೂಡಲೇ ಸರ್ಕಾರಕ್ಕೆ ಒಪ್ಪಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ ನೀಡಿದ್ದಾರೆ. ನವೆಂಬರ್ 1ರೊಳಗೆ ಅಕ್ರಮವಾಗಿ ಹೊಂದಿರುವ ಗನ್‌ಗಳನ್ನು ಅರಣ್ಯ ಇಲಾಖೆಗೆ ಸರೆಂಡರ್ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ನವೆಂಬರ್ 1ರೊಳಗೆ ಗನ್‌ಗಳನ್ನು ಒಪ್ಪಿಸಿದರೆ ಕ್ಷಮಾಪಣಾ ಪತ್ರ ನೀಡಿ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಬಿಡಲಾಗುವುದು. ಆದರೆ ನಿಗದಿತ ಗಡುವಿನ ಬಳಿಕವೂ ಲೈಸೆನ್ಸ್ ಇಲ್ಲದ ಗನ್‌ಗಳನ್ನು ಹೊಂದಿರುವುದು ಪತ್ತೆಯಾದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳ ಬಳಕೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಅಧಿಕಾರಿಗಳು ಮುಂದಿನ ದಿನಗಳಲ್ಲಿ ಶೋಧ ಕಾರ್ಯ ನಡೆಸಲಿದ್ದು, ಈ ವೇಳೆ ಲೈಸೆನ್ಸ್ ಇಲ್ಲದ ಗನ್‌ಗಳು ಪತ್ತೆಯಾದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ, ಲೈಸೆನ್ಸ್ ಇಲ್ಲದ ಗನ್‌ಗಳನ್ನು ಹೊಂದಿರುವವರು ಯಾವುದೇ ವಿಳಂಬ ಮಾಡದೆ ನವೆಂಬರ್ 1ರೊಳಗೆ ಅರಣ್ಯ ಇಲಾಖೆಗೆ ಒಪ್ಪಿಸುವಂತೆ ಸೂಚಿಸಲಾಗಿದೆ.
ಅರಣ್ಯ ಇಲಾಖೆಯ ಹುತಾತ್ಮರಿಗೆ ಪುಷ್ಪ ನಮನ
ಬೆಂಗಳೂರಿನ ಅರಣ್ಯ ಭವನದಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ವತಿಯಿಂದ ಆಯೋಜಿಸಿದ್ದ ‘ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ – 2026’ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಾಡಿನ ವನ್ಯಜೀವಿ ಹಾಗೂ ಪ್ರಕೃತಿ ಸಂಪತ್ತನ್ನು ಸಂರಕ್ಷಿಸುವ ಕರ್ತವ್ಯದಲ್ಲಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಅರಣ್ಯ ಇಲಾಖೆಯ ಹುತಾತ್ಮರ ಸ್ಮಾರಕಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪುಷ್ಪನಮನ ಸಲ್ಲಿಸಿದರು.
ನಮ್ಮ ಕಾಡುಗಳು, ವನ್ಯಜೀವಿಗಳು ಮತ್ತು ನೈಸರ್ಗಿಕ ಸಂಪತ್ತು ಸುರಕ್ಷಿತವಾಗಿರುವುದರ ಹಿಂದೆ ಅರಣ್ಯ ರಕ್ಷಕರ ಅಪಾರ ತ್ಯಾಗ, ಧೈರ್ಯ ಮತ್ತು ಕರ್ತವ್ಯನಿಷ್ಠೆ ಅಡಗಿದೆ. ತಮ್ಮ ಜೀವದ ಹಂಗು ತೊರೆದು ಅರಣ್ಯವನ್ನು ಕಾಪಾಡಿದ ವೀರರ ತ್ಯಾಗ ಚಿರಸ್ಮರಣೀಯ.
ಈ ಕಾರ್ಯಕ್ರಮದಲ್ಲಿ ಅರಣ್ಯ ಸಚಿವರಾದ ಶ್ರೀ ರಾಮಲಿಂಗಾ ರೆಡ್ಡಿ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ಅಂಜುಂ ಪರ್ವೇಝ್ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪೋಸ್ಟ್ ಹಂಚಿಕೊಂಡಿದ್ದಾರೆ.
ಮಾದಕ ವ್ಯಸನಮುಕ್ತ ಸಮಾಜದಿಂದ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯ: ಡಾ. ವೀರೇಂದ್ರ ಕುಮಾರ್ ಕರೆ
ಯುವಸಮುದಾಯವು ಯಾವುದೇ ರೀತಿಯ ಮಾದಕ ವ್ಯಸನಗಳಿಗೆ ಬಲಿಯಾಗದೆ, ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಂಡಾಗ ಮಾತ್ರ ಸದೃಢ ದೇಶವನ್ನು ಕಟ್ಟಲು ಸಾಧ್ಯ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಆದ ಡಾ. ವೀರೇಂದ್ರ ಕುಮಾರ್ ಅವರು ಹೇಳಿದರು.
ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಮೇರಾ ಯುವ ಭಾರತ (ಮೈ ಭಾರತ್) ಕೇಂದ್ರ ಬಳ್ಳಾರಿ, ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (ಸ್ವಾಯತ್ತ)ರಾಷ್ಟ್ರೀಯ ಸೇವಾ ಯೋಜನೆ ಘಟಕ, ನಾಟಕ ವಿಭಾಗ ಹಾಗೂ ಸಿರುಗುಪ್ಪದ ನೇತ್ರ ಕಲಾ ಸಂಘದ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ನಶಾ ಮುಕ್ತ ಯುವ ವಿಕಸಿತ ಭಾರತ’ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವಜನತೆ ಒತ್ತಡ, ಖಿನ್ನತೆ ಅಥವಾ ತಪ್ಪು ಹವ್ಯಾಸಗಳಿಂದಾಗಿ ಮಾದಕ ವಸ್ತುಗಳ ದಾಸರಾಗುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಇದು ವ್ಯಕ್ತಿಯ ಆರೋಗ್ಯವನ್ನು ಕೆಡಿಸುವುದು ಮಾತ್ರವಲ್ಲದೆ, ಇಡೀ ಕುಟುಂಬ ಮತ್ತು ಸಮಾಜದ ಸ್ವಾಸ್ಥö್ಯವನ್ನು ಹಾಳುಮಾಡುತ್ತದೆ ಎಂದು ತಿಳಿಸಿದರು.
ಯುವಜನರು ಇಂತಹ ದುಶ್ಚಟಗಳಿಂದ ದೂರವಿದ್ದು, ತಮ್ಮಲ್ಲಿರುವ ಸೃಜನಶೀಲತೆ ಮತ್ತು ಪ್ರತಿಭೆಯನ್ನು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಮೂಲಕ ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯುವ ಉದ್ಯಮಿ ಹಾಗೂ ವಾಗ್ಮಿ ಎಂ. ಚಂದ್ರಶೇಖರ ಗೌಡ ಅವರು ಮಾತನಾಡಿ, ವಿದ್ಯಾರ್ಥಿ ದೆಸೆಯು ಜೀವನದ ಅತ್ಯಂತ ಅಮೂಲ್ಯವಾದ ಘಟ್ಟ. ಇಂದಿನ ಯುವಶಕ್ತಿಯೇ ನಾಳಿನ ಭಾರತದ ಭವಿಷ್ಯ. ಯುವ ಭಾರತದ ಕನಸು ನನಸಾಗಬೇಕಾದರೆ ಉತ್ತಮ ಆರೋಗ್ಯ ಮತ್ತು ಶಿಸ್ತುಬದ್ಧ ಜೀವನಶೈಲಿ ಅನಿವಾರ್ಯ. ಎಂತಹದ್ದೇ ಸವಾಲುಗಳು ಎದುರಾದರೂ ಧೃತಿಗೆಡದೆ, ಸಕಾರಾತ್ಮಕ ಯೋಚನೆಗಳೊಂದಿಗೆ ದೇಶದ ಪ್ರಗತಿಯಲ್ಲಿ ಭಾಗಿಯಾಗಬೇಕು. ಶ್ರಮ ಮತ್ತು ಆರೋಗ್ಯವಂತ ಸಮಾಜದ ಚಿಂತನೆಯೇ ನವ ಭಾರತ ನಿರ್ಮಾಣಕ್ಕೆ ಭದ್ರ ಅಡಿಪಾಯ ಎಂದು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು.
15 ರಿಂದ 29 ವರ್ಷದೊಳಗಿನ ಯುವಜನರಿಗಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರತಿಭಾವಂತರಿಗೆ ಪ್ರಶಸ್ತಿ ವಿತರಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿಜೇತರನ್ನು ಶೀಘ್ರದಲ್ಲೇ ರಾಜ್ಯ ಮಟ್ಟದ ಸ್ಪರ್ಧೆಗೆ ಮೈ ಭಾರತ್ ವತಿಯಿಂದ ಕಳುಹಿಸಿಕೊಡಲಾಗುವುದು ಎಂದು ಮೇರಾ ಯುವ ಭಾರತದ ಜಿಲ್ಲಾ ಯುವ ಅಧಿಕಾರಿ ರಮೇಶ್ ಮಡ್ಡೆಪ್ಪ ತೊಳಿನವರ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ. ಪೂಜಾರ್, ಹಿರಿಯ ಜಾನಪದ ಕಲಾವಿದ ಯಲ್ಲನಗೌಡ ಶಂಕರಬAಡೆ, ಕಾಲೇಜಿನ ನಾಟಕ ವಿಭಾಗದ ಮುಖ್ಯಸ್ಥ ಡಾ. ದಸ್ತಗೀರಸಾಬ್ ದಿನ್ನಿ, ಎನ್‌ಎಸ್‌ಎಸ್ ಸಂಯೋಜಕ ಕೆ. ಬಸಪ್ಪ, ಉಪನ್ಯಾಸಕರಾದ ಡಾ. ಶಶಿಕಾಂತ್ ಬಿಲ್ಲವ್, ಬಸವರಾಜ, ಆರ್.ಪಿ. ಮಂಜುನಾಥ್, ಬಿ.ಜಿ. ದಿನ್ನೆ ಹಾಗೂ ಕಾರ್ಯದರ್ಶಿ ವಿರೇಶ ದಳವಾಯಿ ಭಾಗವಹಿಸಿದ್ದರು.

