HomeIndiaಕುಟುಂಬ ರಾಜಕೀಯ: ಬಿಹಾರ ಸಿಎಂ ನಿತೀಶ್ ಕುಮಾರ್ ಪುತ್ರನಿಗೆ ಮಹತ್ವದ ಹುದ್ದೆ

ಕುಟುಂಬ ರಾಜಕೀಯ: ಬಿಹಾರ ಸಿಎಂ ನಿತೀಶ್ ಕುಮಾರ್ ಪುತ್ರನಿಗೆ ಮಹತ್ವದ ಹುದ್ದೆ

2025ರ ನವೆಂಬರ್‌ನಲ್ಲಿ ದಾಖಲೆಯ 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್‌ ಪ್ರಮಾಣ ವಚನ ಸ್ವೀಕರಿಸಿದ್ದರು. ಈಗ ಪುತ್ರ ನಿಶಾಂತ್ ಕುಮಾರ್‌ನನ್ನು ರಾಜಕೀಯಕ್ಕೆ ಕರೆತಂದು ಕುಟುಂಬ ರಾಜಕಾರಣ ಮಾಡಲು ಹೊರಟಿದ್ದಾರೆ ನಿತೀಶ್ ಕುಮಾರ್.

ಬಿಹಾರ ವಿಧಾನಸಭೆಯಿಂದ ರಾಜ್ಯಸಭೆಗೆ 5 ಸದಸ್ಯರನ್ನು ನಾಮ ನಿರ್ದೇಶನ ಮಾಡಬೇಕಿದೆ. ಅದರಲ್ಲಿ ಒಬ್ಬರು ಬಿಹಾರ ಸಿಎಂ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್. ರಾಜ್ಯ ರಾಜಕೀಯದಲ್ಲಿ ಈ ಚರ್ಚೆಗೆ ಭಾರೀ ಜೋರಾಗಿ ನಡೆಯುತ್ತಿದೆ.

ಜೆಡಿಯು ಪಕ್ಷದ ಹಿರಿಯ ನಾಯಕ, ಸಚಿವ ಶ್ರವಣ್ ಕುಮಾರ್ ಸೋಮವಾರ, “ನಿಶಾಂತ್ ಕುಮಾರ್‌ಗೆ ಪಕ್ಷ ಮಹತ್ವದ ಜವಾಬ್ದಾರಿ ನೀಡಲಿದೆ” ಎಂದು ಹೇಳಿಕೆ ನೀಡಿದ್ದರು. ಮಂಗಳವಾರ ನಿಶಾಂತ್ ರಾಜ್ಯಸಭೆ ಪ್ರವೇಶಿಸುವ ಸುದ್ದಿಗಳು ಹಬ್ಬಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ನಿಶಾಂತ್ ಕುಮಾರ್ ಸಕ್ರಿಯ ರಾಜಕೀಯಕ್ಕೆ ಬರಲಿದ್ದಾರೆ. ಒಂದೆರಡು ದಿನಗಳಲ್ಲಿ ಈ ಕುರಿತು ಪಕ್ಷ ಅಂತಿಮ ತೀರ್ಮಾನ ಮಾಡಲಿದೆ. ಹಲವು ವರ್ಷಗಳಿಂದ ಕಾರ್ಯಕರ್ತರು ನಿಶಾಂತ್ ರಾಜಕೀಯಕ್ಕೆ ಬರಬೇಕು ಎಂದು ಬೇಡಿಕೆ ಇಟ್ಟಿದ್ದರು. ಈಗ ಅದು ಈಡೇರುತ್ತಿದೆ” ಎಂದು ಹೇಳಿದ್ದರು.

ಬಿಹಾರ ವಿಧಾನಸಭೆಯಿಂದ ರಾಜ್ಯಸಭೆಗೆ 5 ಸದಸ್ಯರ ನಾಮ ನಿರ್ದೇಶನವಾಗಬೇಕಿದೆ. ಇದರಲ್ಲಿ ಜೆಡಿಯು ಪಕ್ಷಕ್ಕೆ 2 ಸೀಟು ಸಿಗಲಿದೆ. ಪಕ್ಷ ರಾಮನಾಥ್ ಠಾಕೂರ್ ಅವರನ್ನು ಪುನರಾಯ್ಕೆ ಮಾಡಲಿದ್ದು, ಮತ್ತೊಬ್ಬ ಅಭ್ಯರ್ಥಿಯಾಗಿ ನಿಶಾಂತ್ ಕುಮಾರ್ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ.

ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಮಾರ್ಚ್ 5 ಕೊನೆಯ ದಿನವಾಗಿದೆ. “ನಿಶಾಂತ್ ಕುಮಾರ್ ನಮ್ಮ ನಾಯಕ ಅವರು ನಿತೀಶ್ ಕುಮಾರ್ ಅವರಂತೆಯೇ. ಅವರ ಆಗಮನದಿಂದ ಪಕ್ಷಕ್ಕೆ ಬಹುದೊಡ್ಡ ಶಕ್ತಿ ಬರಲಿದೆ” ಎಂದು ಗ್ರಾಮೀಣಾಭಿವೃದ್ಧಿ ಸಚಿವ ಅಶೋಕ್ ಚೌಧರಿ ಹೇಳಿದ್ದಾರೆ.

ನಿಶಾಂತ್ ಕುಮಾರ್ ಬಿಟೆಕ್ ಪದವೀಧರರು. ತಂದೆ ನಿತೀಶ್ ಕುಮಾರ್ 10 ಬಾರಿ ರಾಜ್ಯದ ಮುಖ್ಯಮಂತ್ರಿಯಾದರೂ ಸಹ ನಿಶಾಂತ್ ರಾಜಕೀಯದಿಂದ ದೂರವಿದ್ದರು. ಆದರೆ ಈಗ ಜೆಡಿಯು ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲು ಹೊರಟಿದೆ.

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರದಲ್ಲಿದೆ. ಜೆಡಿಯು ನಿಶಾಂತ್ ಕುಮಾರ್ ನಾಮ ನಿರ್ದೇಶನ ಮಾಡುವುದನ್ನು ಮೈತ್ರಿಕೂಟದ ಪಕ್ಷಗಳು ಸ್ವಾಗತಿಸಿವೆ. ಆದ್ದರಿಂದ ಯಾವುದೇ ಅಡಚಣೆ ಇಲ್ಲದೇ ನಿಶಾಂತ್ ರಾಜ್ಯಸಭೆ ಪ್ರವೇಶ ಮಾಡಲಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular