ತೆಲಂಗಾಣ ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನವೇ ‘BRS’ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ಬಿಡುಗಡೆ ಮಾಡಿದ್ದಾರೆ.
ನಂತರ ಮಾತನಾಡಿದ ಅವರು ಒಟ್ಟು 119 ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಬದಲಾಯಿಸಲಾಗುವುದು ಎಂದು ಸಿಎಂ ಕೆಸಿಆರ್ ಹೇಳಿದರು. ಸಿಎಂ ಕೆಸಿಆರ್ ಕಾಮರೆಡ್ಡಿ ಮತ್ತು ಗಜ್ವೆಲ್ನಿಂದ ಮತ್ತು ಸಚಿವ ಕಲ್ವಕುಂಟ್ಲಾ ತಾರಕ ರಾಮರಾವ್ (ಕೆಟಿಆರ್) ಸಿರ್ಸಿಲ್ಲಾದಿಂದ ಸ್ಪರ್ಧಿಸಲಿದ್ದಾರೆ.
ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ಕೆಸಿಆರ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಒಟ್ಟು 119 ಸ್ಥಾನಗಳಲ್ಲಿ 95-105 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದರು. ಎಐಎಂಐಎಂ ಜೊತೆಗಿನ ನಮ್ಮ ಸ್ನೇಹ ಮುಂದುವರಿಯುತ್ತದೆ ಎಂದು ಕೆಸಿಆರ್ ಹೇಳಿದ್ದಾರೆ. ಅಕ್ಟೋಬರ್ 16 ರಂದು ವಾರಂಗಲ್ನಲ್ಲಿ ಪಕ್ಷವು ತನ್ನ ಪ್ರಣಾಳಿಕೆಯನ್ನು ಅನಾವರಣಗೊಳಿಸಲು ಯೋಜಿಸುತ್ತಿದೆ ಎಂದು ಹೇಳಿದರು.
Telangana CM and BRS chief K Chandrasekhar Rao releases a list of candidates for the upcoming State Elections.
CM to contest from Kamareddy and Gajwel and minister Kalvakuntla Taraka Rama Rao (KTR) from Sircilla. pic.twitter.com/sfYVwJ8ICF
— ANI (@ANI) August 21, 2023