HomeKarnatakaBREAKING: ಸಿಎಂ ಡಿ.ಕೆ.ಶಿವಕುಮಾರ್ ರಕ್ತದೊತ್ತಡದಲ್ಲಿ ಏರುಪೇರು

BREAKING: ಸಿಎಂ ಡಿ.ಕೆ.ಶಿವಕುಮಾರ್ ರಕ್ತದೊತ್ತಡದಲ್ಲಿ ಏರುಪೇರು

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ರಕ್ತದೊತ್ತಡದಲ್ಲಿ ಏರುಪೇರಾಗಿದ್ದು, ಕೊಂಚ ಅಸ್ವಸ್ಥರಾದ ಘಟನೆ ನಡೆದಿದೆ.

ವಿಧಾನಸೌಧದ ಸಿಎಂ ಕಚೇರಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರ ರಕ್ತದೊತ್ತಡದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ತೀವ್ರ ಸುಸ್ತಿನಿಂದ ಬಳಲಿದ್ದಾರೆ. ತಕ್ಷಣವೇ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿನ್ನೆಯಿಂದ ನಿರಂತರವಾಇ ಓಡಾಟ ನಡೆಸುತ್ತಿದ್ದ ಸಿಎಂ ಡಿ.ಕೆ..ಶಿವಕುಮಾರ್ ಸರಿಯಾಗಿ ವಿಶ್ರಾಂತಿ ಪಡೆಯದೇ ಕೆಲಸದಲ್ಲಿ ನಿರತರಾಗಿದ್ದಾರೆ. ಇಂದು ಬೆಳ್ಳಂಬೆಳಿಗ್ಗೆ ಕೂಡ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬೆಳಿಗ್ಗೆಯಿಂದಲೂ ಓಡಾಟದಿಂದ ಕೊಂಚ ಬಳಲಿದ್ದರು.

ಇದೇ ಕಾರಣಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಬಿಪಿಯಲ್ಲಿ ಏರುಪೇರಾಗಿದೆ ಎನ್ನಲಾಗಿದೆ. ಸದ್ಯ ವೈದ್ಯರ ಚಿಕಿತ್ಸೆ ಬಳಿಕ ಡಿ.ಕೆ.ಶಿವಕುಮಾರ್ ಬಿಪಿ ಸಹಜ ಸ್ಥಿತಿಗೆ ಬಂದಿದೆ ಎಂದು ತಿಳಿದುಬಂದಿದೆ.

ಇ-ಕಾಮರ್ಸ್ ಔಷಧಿ ಮಳಿಗೆಗಳ ಮೇಲೆ ದಾಳಿ: ಒಂದು ವಾರದಲ್ಲಿ ಬರೋಬ್ಬರಿ 3 ಕೋಟಿ ಮೌಲ್ಯದ ಆಹಾರ ವಸ್ತುಗಳು, ಔಷಧಿಗಳು ಸೀಜ್

ಬೆಂಗಳೂರು: ಆರೋಗ್ಯ ಸಚಿವ ಯು.ಟಿ.ಖಾದರ್ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ಕಳೆದ ವಾರ ಆಹಾರ ಇಲಾಖೆ ನಡೆಸಿದ ದಾಳಿಗಳಲ್ಲಿ ಬರೋಬ್ಬರಿ 3 ಕೋಟಿ ರೂ. ಮೌಲ್ಯದ ಆಹಾರ ವಸ್ತುಗಳು, ಔಷಧಗಳನ್ನು ವಶಕ್ಕೆ ಪಡೆಯಲಾಗಿದೆ.

ಅಮೆಜಾನ್ ಡಾರ್ಕ್ ಸ್ಟೋರ್, ಲಿಯೋ ಸಂಸ್ಥೆಯ ಡಾರ್ಕ್ ಸ್ಟೋರ್ ಗಳು ಸೇರಿದಂತೆ ವಿವಿಧ ಇ-ಕಾಮರ್ಸ್ ಸಂಸ್ಥೆಗಳ ಸ್ಟೋರ್ ಮೇಲೆ ದಾಳಿ ನಡೆಸಲಾಗಿದ್ದು, ಈ ವೇಳೆ ಅಪಾರ ಪ್ರಮಾಣದ ಎಕ್ಸ್ ಪೈರಿ ವಸ್ತುಗಳು ಲಭ್ಯವಾಗಿವೆ.

ಈ ಬಗ್ಗೆ ಸ್ವತಃ ಆರೋಗ್ಯ ಸಚಿವ ಯು.ಟಿ ಖಾದರ್ ಮಾಹಿತಿ ನೀಡಿದ್ದಾರೆ.ಇ-ಕಾಮರ್ಸ್ ಮೂಲಕ ಔಷಧ ಮಾರಾಟದ ಮೇಲೆ ನಡೆಸಿದ ದಾಳಿಯ ವೇಳೆ, ಡಾರ್ಕ್ ಸ್ಟೋರ್‌ಗಳಲ್ಲಿ 45 ಲಕ್ಷ ರೂ. ಮೌಲ್ಯದ ಎಕ್ಸ್​ಪೈರಿ ಔಷಧ ಸಂಗ್ರಹ ಪತ್ತೆಯಾಗಿದೆ. ಹೊಸಕೋಟೆಯಲ್ಲಿ ಈ ಔಷಧಗಳಿಗೆ ರಿಲೇಬಲಿಂಗ್ ಮಾಡಲಾಗುತ್ತಿತ್ತು. ಅಧಿಕಾರಿಗಳು ಈ ಔಷಧಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಪೆಪ್​ ಟೈಡ್​​​​ ಪಾರ್ಟಿ ಬಗ್ಗೆಯೂ ಮಾಹಿತಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಮಾಹಿತಿ ಬಂದ ನಂತರ, ಇಲಾಖೆಯು ತನಿಖೆ ನಡೆಸಿತು. ಸಂಘಟಕರು ತಾವು ಎಲೈಟ್ ವರ್ಗಕ್ಕೆ ಹೊಸ ಪೌಷ್ಟಿಕಾಂಶ ಮತ್ತು ಫಾರ್ಮಾಸ್ಯುಟಿಕಲ್ ಐಟಂಗಳನ್ನು ಪರಿಚಯಿಸುತ್ತಿರುವುದಾಗಿ ತಿಳಿಸಿದರು. ಈ ಐಟಂಗಳು ಅಮೆಜಾನ್‌ನ ಡಾರ್ಕ್ ಸ್ಟೋರ್‌ಗಳಿಂದ ಬಂದಿವೆ ಎಂದು ಅವರು ಒಪ್ಪಿಕೊಂಡರು. ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಕರ್ನಾಟಕ ಸರ್ಕಾರವು ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular