Shocking: 12 ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದ ಯುವತಿ ಆತ್ಮಹತ್ಯೆಗೆ ಶರಣು…!

ಇತ್ತೀಚಿನ ದಿನಗಳಲ್ಲಿ ಯುವಜನತೆ ಸಣ್ಣಪುಟ್ಟ ಕಾರಣಕ್ಕೆಲ್ಲ ದುಡುಕಿನ ನಿರ್ಧಾರ ಕೈಗೊಳ್ಳುತ್ತಿದ್ದು, ಆತ್ಮಹತ್ಯೆಗೆ ಮುಂದಾಗುತ್ತಾರೆ. ಆದರೆ ಇದರಿಂದ ತಮ್ಮ ಕುಟುಂಬಸ್ಥರು ಸಾಯುವವರೆಗೂ ಅದೆಷ್ಟು ನೋವು ತಿನ್ನುತ್ತಾರೆ ಎಂಬ ಕಿಂಚಿತ್ತು ಯೋಚನೆಯನ್ನೂ ಮಾಡುವುದಿಲ್ಲ. ಸಂಕಷ್ಟದ ಪರಿಸ್ಥಿತಿ ಎದುರಾದಾಗ ಹತ್ತಿರದವರೊಂದಿಗೆ ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಬಹುದು ಅಥವಾ ಆಪ್ತ ಸಮಾಲೋಚನೆ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಆದರೆ ಇದ್ಯಾವುದನ್ನು ಮಾಡದೆ ತಕ್ಷಣ ನಿರ್ಧಾರ ಕೈಗೊಳ್ಳುವುದು ಸೂಕ್ತವಲ್ಲ.

ಇದೀಗ ಮಧ್ಯಪ್ರದೇಶದಲ್ಲಿ ನಡೆದಿರುವ ಘಟನೆಯೊಂದು ನಿಜಕ್ಕೂ ಆತಂಕಕಾರಿಯಾಗಿದೆ. 2020 ರ 12ನೇ ತರಗತಿ ಪರೀಕ್ಷೆಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದ ಯುವತಿಯೊಬ್ಬಳು ರಕ್ಷಾ ಬಂಧನದ ದಿನವೇ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಪೋಷಕರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. 22 ವರ್ಷದ ಖುಷಿ ಸಿಂಗ್ ಮಧ್ಯಪ್ರದೇಶದ ರೇವಾ ಜಿಲ್ಲೆಯ ಚುನೌರಿ ಗ್ರಾಮದಲ್ಲಿನ ತನ್ನ ಮನೆಯಲ್ಲಿ ಇಂತಹ ದುಡುಕು ನಿರ್ಧಾರ ಕೈಗೊಂಡಿದ್ದಾಳೆ.

ಈಕೆ ಕಳೆದ 15 ದಿನಗಳಿಂದ ಅನ್ಯಮನಸ್ಕಗಳಾಗಿ ಇರುತ್ತಿದ್ದಳೆಂದು ಹೇಳಲಾಗಿದ್ದು, ಪೋಷಕರು ಕೂಡ ಹೆಚ್ಚಿನ ಗಮನ ಹರಿಸಿಲ್ಲ. ಸೋಮವಾರದಂದು ಕುಟುಂಬಸ್ಥರು ಮನೆಯಲ್ಲಿ ಇದ್ದ ವೇಳೆಯೇ ತನ್ನ ಕೊಠಡಿಯಲ್ಲಿ ಸಾವಿಗೆ ಶರಣಾಗಿದ್ದಾಳೆ. 2020ರಲ್ಲಿ ಈಕೆ 12ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಸಂದರ್ಭದಲ್ಲಿ ಮಾಧ್ಯಮಗಳಿಗೆ ಸಂದರ್ಶನ ನೀಡಿದ ವೇಳೆ ತಾನು ಶಿಕ್ಷಕಿಯಾಗಬೇಕೆಂಬ ಬಯಕೆ ಹೊಂದಿರುವುದಾಗಿ ತಿಳಿಸಿದ್ದಳು. ಆದರೆ ಇದೀಗ ತನ್ನ ದುಡುಕಿನ ನಿರ್ಧಾರದ ಪರಿಣಾಮ ಬಾರದ ಲೋಕಕ್ಕೆ ತೆರಳಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read