HomeAgricultureಕೃಷಿ ಮಾಡಲು ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ರಾಜೀನಾಮೆ!

ಕೃಷಿ ಮಾಡಲು ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ರಾಜೀನಾಮೆ!

ಕೃಷಿ ಮಾಡಲು ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಒಬ್ಬರು ರಾಜೀನಾಮೆ ನೀಡಿದ್ದಾರೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್ ರಾಜೀನಾಮೆಯನ್ನು ಕೊಡಗು ಎಸ್‌ಪಿ ಅಂಗೀಕರಿಸಿದ್ದಾರೆ.

ಪೊಲೀಸ್ ಕಾನ್ಸ್‌ಟೇಬಲ್ ರಾಜೀನಾಮೆಗೆ ನೀಡಿರುವ ಕಾರಣ, ರಾಜೀನಾಮೆ ಪತ್ರ ಅಂಗೀಕಾರ ಮಾಡಿರುವ ಎಸ್‌ಪಿ ಅವರ ಆದೇಶದ ಪ್ರತಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಮೆಂಟ್‌ಗಳನ್ನು ಜನರು ಈ ತೀರ್ಮಾನವನ್ನು ಸ್ವಾಗತಿಸುತ್ತಿದ್ದಾರೆ.

ಕುಶಾಲನಗರ ಸಂಚಾರಿ ಪೊಲೀಸ್ ಠಾಣೆ ಸಿ.ಪಿ.ಸಿ ತೇಜಸ್ವಿ ಬಿ.ಕೆ. ರಾಜೀನಾಮೆಯನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅಂಗೀಕಾರ ಮಾಡಿದ್ದಾರೆ. ಈ ಆದೇಶ ಶ್ರೀ ತೇಜಸ್ವಿ, ಬಿ.ಕೆ. ಸಿಪಿಸಿ: 272 ಕುಶಾಲನಗರ ಸಂಚಾರ ಪೊಲೀಸ್ ಠಾಣೆ ರವರು ಸಿ.ಪಿ.ಸಿ ಹುದ್ದೆಗೆ ರಾಜೀನಾಮೆ ಎಂಬ ವಿಷಯವನ್ನು ಒಳಗೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದೇಶದ ವಿವರ: ಶ್ರೀ ತೇಜಸ್ವಿ ಬಿ.ಕೆ. ಸಿ.ಪಿ.ಸಿ. 272 ರವರ ಮನವಿ ದಿನಾಂಕ 25-01-2026 ಉಲ್ಲೇಖಿಸಿ ಈ ರಾಜೀನಾಮೆಯನ್ನು ಅಂಗೀಕಾರ ಮಾಡಿ ಎಸ್‌ಪಿ ಆದೇಶವನ್ನು ಹೊರಡಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಂತೆ ಶ್ರೀ ತೇಜಸ್ವಿ, ಬಿ.ಕೆ. ಸಿಪಿಸಿ: 272 ಕುಶಾಲನಗರ ಸಂಚಾರ ಠಾಣೆ ರವರ ಉಲ್ಲೇಖಿತ ಮನವಿಯಲ್ಲಿ ತನ್ನ ಸ್ವಂತ ಊರಾದ ಶಿವಮೊಗ್ಗ, ಜಿಲ್ಲೆಯ ಸಿರಿಗೆರೆಯಲ್ಲಿ ಪಿತ್ರಾರ್ಜಿತ ಜಮೀನು ಇದ್ದು, ವ್ಯವಸಾಯ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ವಾಸವಾಗಿರುವ ಇಚ್ಚೆ ಇರುವುದರಿಂದ ನಾನು ಸಿವಿಲ್ ಕಾನ್ಸ್‌ಟೇಬಲ್ ಹುದ್ದೆಗೆ ರಾಜಿನಾಮೆ ನೀಡುತ್ತಿದ್ದು, ನನ್ನ ರಾಜೀನಾಮೆಯನ್ನು ದಿನಾಂಕ 28/02/2026ರಿಂದ ಅನ್ವಯವಾಗುವಂತೆ ಪರಿಗಣಿಸಿ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕೆಂದು ವಿನಂತಿಸಿಕೊಂಡಿರುತ್ತಾರೆ.

ಶ್ರೀ ತೇಜಸ್ವಿ, ಬಿ.ಕೆ. ಸಿಪಿಸಿ: 272 ಕುಶಾಲನಗರ ಸಂಚಾರ ಠಾಣೆ ರವರು ಸಿ.ಪಿ.ಸಿ ಹುದ್ದೆಗೆ ರಾಜೀನಾಮೆ ಕೋರಿ ಸಲ್ಲಿಸಿದ ಉಲ್ಲೇಖಿತ ಮನವಿಯನ್ನು ಪರಿಶೀಲಿಸಿ ಇವರನ್ನು ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಯ ರಾಜೀನಾಮೆಯನ್ನು, ಅಂಗೀಕರಿಸಿ ದಿನಾಂಕ 28/02/2026ರ ಅವರಾಹ್ನದಿಂದ ಅನ್ವಯವಾಗುವಂತೆ ಪೊಲೀಸ್ ಇಲಾಖೆಯ ಕರ್ತವ್ಯದಿಂದ ಬಿಡುಗಡೆಗೊಳ್ಳಲು ಅನುಮತಿ ನೀಡಲಾಗಿದೆ.

ಪಿ.ಎಸ್.ಐ, ಕುಶಾಲನಗರ ಸಂಚಾರ ಪೊಲೀಸ್ ಠಾಣೆ ರವರು ಶ್ರೀ ತೇಜಸ್ವಿ ಬಿ.ಕೆ ಸಿಪಿಸಿ: 272 ರವರನ್ನು ದಿನಾಂಕ 28/02/2025ರ ಅಪರಾಹ್ನದಿಂದ ಅನ್ವಯವಾಗುವಂತೆ ಸಿ.ಪಿ.ಸಿ. ಹುದ್ದೆಯ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಸೂಚಿಸಿದೆ.

ಶ್ರೀ ತೇಜಸ್ವಿ, ಬಿ.ಕೆ., ಸಿಪಿಸಿ: 272 ರವರನ್ನು ಬಿಡುಗಡೆಗೊಳಿಸಿದ ಬಗ್ಗೆ ಈ ಕಚೇರಿಗೆ ಪಾಲನಾ ವರದಿ ಸಲ್ಲಿಸುವಂತೆ ಸೂಚಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪಿ.ಎಸ್‌.ಐ, ಕುಶಾಲನಗರ ಸಂಚಾರ ಪೊಲೀಸ್ ಠಾಣೆ ರವರು ಶ್ರೀ ತೇಜಸಿ, ಬಿ.ಕೆ. ಸಿಪಿಸಿ 272 ಅವರಿಗೆ ಇಲಾಖೆಯಿಂದ ವಿತರಿಸಲಾದ ಎಲ್ಲಾ ಸಾಮಾಗ್ರಿಗಳನ್ನು ಮರಳಿ ಪಡೆದುಕೊಳ್ಳುವುದು ಹಾಗೂ ಇದನ್ನು ಸರ್ಕಾರಕ್ಕೆ ಜಮೆ ಮಾಡಿಕೊಳ್ಳುವುದು ಎಂದು ಸೂಚಿಸಲಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular