HomeKarnatakaಸೇನಾ ವಾಹನ ಹಿಂದಿಕ್ಕಿದ್ದಕ್ಕೆ CISF ಸಿಬ್ಬಂದಿಯಿಂದ ಬಸ್‌ ಚಾಲಕನಿಗೆ ಕಪಾಳಮೋಕ್ಷ

ಸೇನಾ ವಾಹನ ಹಿಂದಿಕ್ಕಿದ್ದಕ್ಕೆ CISF ಸಿಬ್ಬಂದಿಯಿಂದ ಬಸ್‌ ಚಾಲಕನಿಗೆ ಕಪಾಳಮೋಕ್ಷ

ಸೇನಾ ಉಪಕರಣಗಳನ್ನು ಸಾಗಿಸುತ್ತಿದ್ದ ಭದ್ರತಾ ಬೆಂಗಾವಲು ಪಡೆಯನ್ನು ಹಿಂದಿಕ್ಕಿದ ಬಸ್ ಡ್ರೈವರ್ ಗೆ ACISF (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ಸಿಬ್ಬಂದಿ ಕಪಾಳಮೋಕ್ಷ ಮಾಡಿದ್ದಾರೆ. ಕರ್ನಾಟಕ- ತಮಿಳುನಾಡಿನ ಹೊಸೂರು ಹೆದ್ದಾರಿಯಲ್ಲಿ ಬಸ್ ಚಾಲಕನಿಗೆ ಕಪಾಳಮೋಕ್ಷ ಮಾಡಿರೋ ಘಟನೆ ನಡೆದಿದೆ.

ಕೃಷ್ಣಗಿರಿಯಲ್ಲಿ ಸಿಐಎಸ್‌ಎಫ್ ಬೆಂಗಾವಲು ಪಡೆಯು ಸೇನಾ ವಾಹನಕ್ಕೆ ಭದ್ರತೆ ಒದಗಿಸುತ್ತಿದ್ದಾಗ ವಾಗ್ವಾದ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯ ಸಾರಿಗೆ ಬಸ್ ಅತಿವೇಗದಲ್ಲಿದ್ದು ಬೆಂಗಾವಲು ಪಡೆಯನ್ನು ಹಿಂದಿಕ್ಕಿತು. ನಂತರ ಸಿಐಎಸ್ಎಫ್ ವಾಹನವು ಬಸ್ ಅನ್ನು ನಿಲ್ಲಿಸಿದೆ. ಬಸ್ ಚಾಲಕನಿಗೆ ಕಪಾಳಮೋಕ್ಷ ಮಾಡಿದ ಭದ್ರತಾ ಸಿಬ್ಬಂದಿಯನ್ನ ತಮಿಳರಸು ಎಂದು ಗುರುತಿಸಲಾಗಿದೆ.

ಗ್ರಾಮಸ್ಥರು ಮತ್ತು ಇತರ ಬಸ್ ಚಾಲಕರು ಭದ್ರತಾ ಸಿಬ್ಬಂದಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದ ನಂತರ ಭಾರೀ ಗದ್ದಲವೆದ್ದಿತು.

ಗುರುಬರಪಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು. ಚಾಲಕನಿಗೆ ಕಪಾಳಮೋಕ್ಷ ಮಾಡಿದವರ ಪರವಾಗಿ ಸಿಐಎಸ್‌ಎಫ್ ಸಬ್‌ಇನ್‌ಸ್ಪೆಕ್ಟರ್ ಪ್ರತಾಪ್ ಕ್ಷಮೆ ಯಾಚಿಸಿದ ನಂತರ ಬೆಂಗಾವಲು ಪಡೆ ಸಾಗಲು ಅನುವು ಮಾಡಿಕೊಡಲಾಯಿತು

For Latest News Updates, Join Our Whatsapp Community🚩
RELATED ARTICLES

Most Popular