HomeLatest Newsಸಿಗರೇಟ್ ಹೊಗೆಯ ಕಿರಿಕಿರಿಯಿಂದ ಉದ್ಯೋಗ ತೊರೆದ ಯುವತಿ: ವೈರಲ್ ಆಯ್ತು ರಾಜೀನಾಮೆ ಪತ್ರ

ಸಿಗರೇಟ್ ಹೊಗೆಯ ಕಿರಿಕಿರಿಯಿಂದ ಉದ್ಯೋಗ ತೊರೆದ ಯುವತಿ: ವೈರಲ್ ಆಯ್ತು ರಾಜೀನಾಮೆ ಪತ್ರ

ಸಹೋದ್ಯೋಗಿಗಳ ಸಿಗರೇಟ್ ಹೊಗೆಯ ಕಿರಿಕಿರಿ ತಾಳಲಾರದೆ ಯುವತಿಯೊಬ್ಬಳು ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿರುವ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಚೇರಿಯ ವಾತಾವರಣದಲ್ಲಿ ಸಿಗರೇಟ್ ವಾಸನೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಜಾನ್ಹವಿ ಎಂಬ ಯುವತಿ ಈ ನಿರ್ಧಾರ ತೆಗೆದುಕೊಂಡಿದ್ದು, ತಾವು ಕಳುಹಿಸಿದ ರಾಜೀನಾಮೆ ಇಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆಗಸ್ಟ್ 25 ತಮ್ಮ ಕೊನೆಯ ಕೆಲಸದ ದಿನ ಎಂದು ಇಮೇಲ್‌ನಲ್ಲಿ ಉಲ್ಲೇಖಿಸಿರುವ ಅವರು, ಕೆಲಸದ ಜಾಗದಲ್ಲಿ ಧೂಮಪಾನದ ವಾಸನೆಯನ್ನು ನಿಯಂತ್ರಿಸುವುದು ತಮಗೆ ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆರಂಭದಲ್ಲಿ ಈ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದೆ, ಆದರೆ ಸಿಗರೇಟ್ ಹೊಗೆಯನ್ನು ಸಹಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಈ ವಿಷಯದಲ್ಲಿ ಬದಲಾಗಬೇಕಿರುವುದು ನಾನಲ್ಲ ಎಂದು ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಪರೋಕ್ಷ ಧೂಮಪಾನದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತ ಮಾಹಿತಿಯನ್ನೂ ಅವರು ಹಂಚಿಕೊಂಡಿದ್ದಾರೆ. ಕಡಿಮೆ ಪ್ರಮಾಣದ ಸಿಗರೇಟ್ ಹೊಗೆಯೂ ಸಹ ಉಸಿರಾಟದ ತೊಂದರೆ, ಎದೆಗೂಡಿನ ಕಿರಿಕಿರಿ ಹಾಗೂ ಗಂಟಲಿನ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉದ್ಯೋಗ ತೊರೆದ ಯುವತಿಯ ನಿರ್ಧಾರವನ್ನು ಹಲವರು ಸಮರ್ಥಿಸಿಕೊಂಡಿದ್ದು, ಕೆಲಸದ ಅವಧಿಯಲ್ಲಿ ಸಂಪೂರ್ಣವಾಗಿ ಧೂಮಪಾನ ನಿಷೇಧಿಸುವ ನಿಯಮಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಕೆಲವರು ರಾಜೀನಾಮೆ ನೀಡುವ ಮುನ್ನ ಆಡಳಿತ ಮಂಡಳಿಯ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“>

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular