ಮಕ್ಕಳಿಗೆ ಚೆನ್ನಾಗಿ ಓದಲು ನೆರವಾಗುತ್ತೆ ಚಾಕೋಲೆಟ್

ಚಾಕಲೇಟ್‌ ಬಹುತೇಕ ಎಲ್ಲರ ಫೇವರಿಟ್‌. ಮಕ್ಕಳು ಮಾತ್ರವಲ್ಲ ವಯಸ್ಕರು ಕೂಡ ಚಾಕಲೇಟ್‌ ಇಷ್ಟಪಡ್ತಾರೆ. ಚಾಕಲೇಟ್‌ ಫ್ಲೇವರ್‌ನ ಬಹುತೇಕ ಎಲ್ಲಾ ತಿನಿಸುಗಳನ್ನು ಮಕ್ಕಳು ಖುಷಿಯಿಂದ ತಿನ್ನುತ್ತಾರೆ. ಅತಿಯಾದ ಚಾಕಲೇಟ್‌ ಆರೋಗ್ಯಕ್ಕೆ ಹಾನಿಕರ ಅನ್ನೋದು ನಮಗೆಲ್ಲಾ ಗೊತ್ತು. ಆದ್ರೆ ಚಾಕಲೇಟ್‌ ಅನ್ನು ಮಿತವಾಗಿ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳೂ ಇವೆ.

ಚಾಕೊಲೇಟ್ ತಿನ್ನುವುದರಿಂದ ತರಗತಿಗಳಲ್ಲಿ ಮಕ್ಕಳು ಒಳ್ಳೆ ಅಂಕ ತೆಗೆದುಕೊಳ್ಳಬಹುದು, ಅವರ ಅಧ್ಯಯನ ಸಾಮರ್ಥ್ಯ ಸುಧಾರಿಸುತ್ತದೆ. ಏಕೆಂದರೆ ಚಾಕಲೇಟ್‌ ನಮ್ಮ ಮನಸ್ಸನ್ನು ಆರೋಗ್ಯವಾಗಿಡಬಲ್ಲದು. ಚಾಕಲೇಟ್ ಶೇಕ್ ಕುಡಿಯುವುದರಿಂದ ಮೆದುಳಿನ ರಕ್ತ ಕಣಗಳು ಚೆನ್ನಾಗಿ ಕೆಲಸ ಮಾಡಲು ಸಹಾಯವಾಗುತ್ತದೆ.

ಚಾಕಲೇಟ್ ಒತ್ತಡ ನಿವಾರಣೆಗೂ ಸಹಕಾರಿಯಾಗಿದೆ. ತೀವ್ರ ಒತ್ತಡ ಅಥವಾ ಟೆನ್ಷನ್‌ ಎನಿಸಿದಾಗ ಒಂದು ತುಂಡು ಡಾರ್ಕ್‌ ಚಾಕಲೇಟ್‌ ಸವಿಯಿರಿ. ಇದರಿಂದ ಒತ್ತಡ ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳು ಆರಾಮಾಗಿ ಓದಿನಲ್ಲಿ ಗಮನ ಕೇಂದ್ರೀಕರಿಸಬಹುದು.

ಚಾಕಲೇಟ್‌ ಮಕ್ಕಳ ಜ್ಞಾಪಕಶಕ್ತಿಯನ್ನು ಕೂಡ ಹೆಚ್ಚಿಸಬಲ್ಲದು. ಹಾಗಾಗಿ ಇದು ಕೂಡ ವಿದ್ಯಾರ್ಥಿಗಳಿಗೆ ಸಹಾಯಕವಾಗುತ್ತದೆ. ಓದುವ ಸಂದರ್ಭದಲ್ಲಿ ಡಾರ್ಕ್‌ ಚಾಕಲೇಟ್‌ ಅನ್ನು ಮಕ್ಕಳು ಅಲ್ಪ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಆದರೆ ಚಾಕಲೇಟ್ ಅನ್ನು ಅತಿಯಾಗಿ ತಿನ್ನುವುದು ಹಲ್ಲುಗಳಿಗೆ ಹಾನಿಕಾರಕ. ಜೊತೆಗೆ ಅದರಲ್ಲಿ ಸಕ್ಕರೆ ಪ್ರಮಾಣ ಜಾಸ್ತಿ ಇರುವುದರಿಂದ ಇತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read