ಬೆಂಗಳೂರು: ಕನ್ನಡದ ಖ್ಯಾತ ಬಾಲನಟಿ ನಿಶಿತಾಗೆ ತೆಲುಗು ಸಿರೀಯಲ್ ತಂಡ ವಂಚಿಸಿರುವುದಾಗಿ ನಿಶಿತಾ ತಾಯಿ ಆರೋಪ ಮಾಡಿದ್ದಾರೆ.
ಬಾಲನಟಿ ನಿಶಿತಾ ತೆಲುಗಿನ ‘ಲಕ್ಷ್ಮೀ ನಿವಾಸಂ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಕನ್ನಡದಲ್ಲಿ ‘ಲಕ್ಷ್ಮೀ ನಿವಾಸ’ ಹೆಸರಲ್ಲಿ ಬರುತ್ತಿದ್ದು, ಕನ್ನಡದಲ್ಲಿ ಕೂಡ ನಿಶಿತಾ ನಟಿಸಿದ್ದಾರೆ. ಬಾಲನಟಿ ನಿಶಿತಾ ತೆಲುಗು ಲಕ್ಷ್ಮೀ ನಿವಾಸಂ ಧಾರಾವಾಹಿಯಲ್ಲಿ ಕಷ್ಟಪಟ್ಟು ಅಭಿನಯಿಸಿದ್ದರು, ಆಕೆಗೆ ಕೆಲ ತಿಂಗಳಿಂದ ಸಂಬಳವನ್ನೂ ನೀಡಿದೇ ಏಕಾಏಕಿ ತೆಗೆದು ಹಾಕಿದ್ದಾರಂತೆ.
ಈ ಬಗ್ಗೆ ನಿಶಿತಾ ತಾಯಿ ಪ್ರಿಯಾ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮೂಲಕ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಮಾಧ್ಯಮಗಳ ಮುಂದೆಯೂ ಅಳಲು ತೋಡಿಕೊಂಡಿದ್ದಾರೆ. ನಿಶಿತಾ ತೆಲುಗು ಧಾರಾವಾಹಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದಾಳೆ. ತಡ ರಾತ್ರಿವರೆಗೂ ಶೂಟಿಂಗ್ ಇದ್ದರೂ ಅಭಿನಯಿಸಿದ್ದಾಳೆ. ಕ್ಯಾಬ್ ವ್ಯವಸ್ಥೆ ಕೂಡ ಇರಲಿಲ್ಲ. ಆದಾಗ್ಯೂ ಶೂಟಿಂಗ್ ಗೆ ಹೋಗಿದ್ದಾಳೆ. ಧಾರಾವಹಿ ಶೂಟಿಂಗ್ ವೇಳೆ ಆಕೆಗೆ ಕರೆಂಟ್ ಶಾಕ್ ಹೊಡೆದಿತ್ತು. ಹಲವು ಬಾರಿ ಅನಾರೋಗ್ಯವಿದ್ದರೂ ಅದರ ಮಧ್ಯೆಯೂ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾಳೆ. ಕಲೆದ ಏಪ್ರಿಲ್ ನಿಂದ ನಿಶಿತಾಳಿಗೆ ಸಂಬಳವನ್ನೂ ಕೊಡದೇ ದುಡಿಸಿಕೊಂಡಿದ್ದಾರೆ. ಇಷ್ಟಾಗ್ಯೂ ಚಿತ್ರೀಕರಣದಲ್ಲಿ ಭಾಗವಹಿಸಿದ್ದರೂ ಹೇಳದೇ ಕೇಳದೇ ಏಕಾಏಕಿ ನಿಶಿತಾಳನ್ನು ಸೀರಿಯಲ್ ನಿಂದ ತೆಗೆದಿದ್ದಾರೆ. ಬೇರೆ ಬಾಲನಟಿಗೆ ಅವ್ಕಾಶ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
‘ಲಕ್ಷ್ಮೀ ನಿವಾಸಂ’ ಧಾರಾವಾಹಿಯ ನಿರ್ಮಾಪಕಿ ಪ್ರಶಾಂತಿ ನಿಶಿತಾಗೆ ಕೆಲ ತಿಂಗಳಿಂದ ಸಂಬಳ ನೀಡಿಲ್ಲ. ಇದು ಕೇವಲ ಸ್ಯಾಂಪಲ್ ಅಷ್ಟೇ. ಇನ್ನೂ ಹಲವು ರೀತಿಯ ಟಾರ್ಚರ್ ನೀಡಲಾಗಿದೆ. ಒಂದು ವಾರದ ಬಳಿಕ ಎಲ್ಲವನ್ನೂ ವಿವರಿಸುತ್ತೇನೆ ಎಂದು ಪ್ರಿಯಾ ಹೇಳಿಕೊಂಡಿದ್ದಾರೆ.