HomeKarnatakaBIG NEWS: ಕಲುಷಿತ ನೀರಿಗೆ ನಾಲ್ವರು ಬಲಿ; AEE ಸೇರಿ ಮೂವರು ಅಮಾನತು

BIG NEWS: ಕಲುಷಿತ ನೀರಿಗೆ ನಾಲ್ವರು ಬಲಿ; AEE ಸೇರಿ ಮೂವರು ಅಮಾನತು

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ನಾಲ್ವರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಎಇಇ ಸೇರಿ ಮೂವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಚಿತ್ರದುರ್ಗದ ನಗರಸಭೆಯ ಎಇಇ, ಜೆಇ ಹಾಗೂ ವಾಲ್ವ್ ಮ್ಯಾನ್ ಸೇರಿದಂತೆ ಮೂವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ದಿವ್ಯಪ್ರಭು ಆದೇಶ ಹೊರಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಗರಸಭೆಯ ಎಇಇ ಮಂಜುನಾಥ್ ಗಿರಡ್ದಿ, ಜೆಇ ಕಿರಣ್, ವಾಲ್ವ್ ಮ್ಯಾನ್ ಪ್ರಕಾಶಬಾಬು ಅಮಾನತುಗೊಂಡವರು. ಇನ್ನು ಗುತ್ತಿಗೆ ಆಧಾರಿತ ನೌಕರ ನೀರಗಂಟಿ ಸುರೇಶ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular