HomeLatest Newsಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ; ಐವರ ಮೇಲೆ ಆಸಿಡ್ ದಾಳಿ ನಡೆಸಿ ವ್ಯಕ್ತಿ ಪರಾರಿ

ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ; ಐವರ ಮೇಲೆ ಆಸಿಡ್ ದಾಳಿ ನಡೆಸಿ ವ್ಯಕ್ತಿ ಪರಾರಿ

ಚಿತ್ರದುರ್ಗ: ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಬಳಿಕ ಮನೆ ಮಂದಿಯ ಮೇಲೆ ಆ್ಯಸಿಡ್ ದಾಳಿ ಮಾಡಿ ವ್ಯಕ್ತಿಯೋರ್ವ ಪರಾರಿ ಆಗಿರುವಂತಹ ಘಟನೆ ಚಿತ್ರದುರ್ಗದ ಮಾಳಪ್ಪನಹಟ್ಟಿಯಲ್ಲಿ ನಡೆದಿದೆ.

ಸುಹೈಲ್ ಭಾಷಾ ಈ ಕೃತ್ಯವೆಸಗಿರುವ ಆರೋಪಿ. ಘಟನೆಯಲ್ಲಿ ಮಹಿಳೆ ತಾಸಿನಾ ಬಾನು ಸೇರಿದಂತೆ ಆಕೆಯ ಸಹೋದರಿ ನೇಹಾ, ಪುತ್ರಿ ಇಕ್ರಾ, ನಗ್ಮಾ ನಾಯ್ಕ್ ಸೇರಿ ಐವರ ಮೇಲೆ ಆ್ಯಸಿಡ್ ದಾಳಿನಡೆಸಲಾಗಿದೆ

ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ತಾಸಿನಾ ಬಾನು ಮತ್ತು ಸುಹೈಲ್ ಭಾಷಾ ಪ್ರೀತಿಸಿ ಮದುವೆಯಾಗಿದ್ದರು. ಚಿತ್ರದುರ್ಗದ ನೆಹರು ನಗರದ ನಿವಾಸಿ ಸುಹೈಲ್ ಭಾಷಾ ಆಟೋ ಚಾಲಕ. ಆದರೆ ಪತಿಯ ಕಿರುಕುಳದಿಂದ ಬೇಸತ್ತು ತಾಸಿನಾ ಕೆಲವು ತಿಂಗಳ ಹಿಂದೆ ಪತಿಯನ್ನ ತೊರೆದು ಬೆಂಗಳೂರಿಗೆ ಬಂದಿದ್ದರು. ರಂಜಾನ್​​ ಹಬ್ಬಕ್ಕೆಂದು ಇತ್ತ ಚಿತ್ರದುರ್ಗದಲ್ಲಿರುವ ತನ್ನ ಸಹೋದರಿಯ ಮನೆಗೆ ಹೋಗಿದ್ದರು. ಈ ವೇಳೆ ಸುಹೈಲ್ ಭಾಷಾ ತಾಸಿನ ಅಮೇಲೆ ಹಲ್ಲೆ ನಡೆಸಿದ್ದಲ್ಲದೇ ಆಕೆಯ ಸಂಬಂಧಿಕರ ಮೇಲೂ ಆಸಿಡ್ ದಾಳಿ ನಡೆಸಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular