HomeKarnatakaಕೆಂಡ ಹಾಯುವಾಗಲೇ ಅವಘಡ: ಆಯತಪ್ಪಿ ಬಿದ್ದು ತಾತ, ಮೊಮ್ಮಗನಿಗೆ ಗಾಯ

ಕೆಂಡ ಹಾಯುವಾಗಲೇ ಅವಘಡ: ಆಯತಪ್ಪಿ ಬಿದ್ದು ತಾತ, ಮೊಮ್ಮಗನಿಗೆ ಗಾಯ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಬೊಮ್ಮೇನಹಳ್ಳಿಯಲ್ಲಿ ಮೊಹರಂ ಕೆಂಡಾರ್ಚನೆ ವೇಳೆ ಆಯತಪ್ಪಿ ಬಿದ್ದು ತಾತ, ಮೊಮ್ಮಗ ಗಾಯಗೊಂಡಿದ್ದಾರೆ.

ಸಂಪ್ರದಾಯದಂತೆ ಗ್ರಾಮದ ರಮೇಶ್ ಅವರು ಮೊಹರಂ ಆಚರಣೆ ವೇಳೆ ಕೆಂಡ ಹಾಯುವ ಸಂದರ್ಭದಲ್ಲಿ ಎರಡು ವರ್ಷದ ಮೊಮ್ಮಗ ರವಿಯನ್ನು ಎತ್ತಿಕೊಂಡು ಕೆಂಡ ಹಾಯುವಾಗ ಆಯತಪ್ಪಿ ಬಿದ್ದಿದ್ದಾರೆ. ಅಲ್ಲೇ ಇದ್ದ ಭಕ್ತರು ಕೂಡಲೇ ಇಬ್ಬರನ್ನು ರಕ್ಷಿಸಿದ್ದು, ಗಾಯಗೊಂಡಿದ್ದ ತಾತ, ಮೊಮ್ಮಗನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾನುವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಿದ್ದರೂ ಮಧ್ಯಾಹ್ನದವರೆಗೂ ಅವರಿಗೆ ಚಿಕಿತ್ಸೆ ನೀಡದೆ ಆಸ್ಪತ್ರೆಯ ವೈದ್ಯರು ನಿರ್ಲಕ್ಷ ತೋರಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಕೆಂಡ ಹಾಯುವಾಗ ತಾತ, ಮೊಮ್ಮಗ ಗಾಯಗೊಂಡ ಸುದ್ದಿ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಶಾಸಕರಾದ ಕೆ.ಸಿ. ವೀರೇಂದ್ರ, ಟಿ. ರಘುಮೂರ್ತಿ ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಸೂಕ್ತ ಚಿಕಿತ್ಸೆ ನೀಡುವಂತೆ ಆಸ್ಪತ್ರೆಯ ವೈದ್ಯರಿಗೆ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular