ಪದವೀಧರೆಯಾಗುವ ಸಂಭ್ರಮದಲ್ಲಿ ಸಮರ್ಸಾಲ್ಟ್‌ ಮಾಡಿದ ವಿದ್ಯಾರ್ಥಿನಿ

ಪದವೀಧರೆಯಾದ ಸಂಭ್ರಮದಲ್ಲಿ ಚೀನೀ ವಿದ್ಯಾರ್ಥಿನಿಯೊಬ್ಬಳು ಸಮರ್ಸಾಲ್ಟ್‌ ಮಾಡಿ ಖುಷಿ ವ್ಯಕ್ತ ಪಡಿಸಿದ ಘಟನೆ ಇಂಗ್ಲೆಂಡ್‌ನ ರೋಹಂಪ್ಟನ್ ವಿವಿಯಲ್ಲಿ ಜರುಗಿದೆ.

ಚೆನ್ ಯಿನಿಂಗ್ ಹೆಸರಿನ 24 ವರ್ಷ ವಯಸ್ಸಿನ ಈ ವಿದ್ಯಾರ್ಥಿನಿ ನೃತ್ಯಾಭ್ಯಾಸದಲ್ಲಿ ಸ್ನಾತಕೋತ್ತರ ಡಿಗ್ರೀ ಪಡೆದ ಸಂಭ್ರಮದಲ್ಲಿ, ಇನ್ನೇನು ಡಿಗ್ರೀ ಪ್ರಮಾಣಪತ್ರ ಪಡೆಯಬೇಕೆನ್ನುವಷ್ಟರಲ್ಲಿ ಸಮರ್ಸಾಲ್ಟ್‌ ಮಾಡಿದ್ದಾಳೆ.

ಯೂಟ್ಯೂಬ್‌ನಲ್ಲಿ ಬೀಜಿಂಗ್‌ ನ್ಯೂಸ್ ಬಿತ್ತರಿಸಿದ ಈ ಕ್ಲಿಪ್‌ನಲ್ಲಿ ಪದವೀಧರೆಯಾಗುವ ಮುನ್ನ ಗೌನ್ ಧರಿಸಿಕೊಂಡು ಬಂದ ಈಕೆ ಜನಜಂಗುಳಿಯತ್ತ ಕೈಬೀಸುತ್ತಿರುವುದನ್ನು ನೋಡಬಹುದಾಗಿದೆ. ಪದವಿ ಪತ್ರ ಪಡೆಯಲು ಹೋಗುತ್ತಿದ್ದ ಈಕೆಯನ್ನು ವ್ಯಕ್ತಿಯೊಬ್ಬರು ಕರೆಯುತ್ತಲೇ ಮುಮ್ಮುಖವಾಗಿ ಜಿಗಿದು ಬದಿಗೆ ಫ್ಲಿಪ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

ಚೆನ್‌ಳ ಈ ಅಮೋಘ ಸಮರ್ಸಾಲ್ಟ್‌ ಕಂಡು ದಂಗುಬಡಿದ ಜನಜಂಗುಳಿ ಭಾರೀ ಕರತಾಡನದೊಂದಿಗೆ ಆಕೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಬೀಜಿಂಗ್ ನೃತ್ಯ ಅಕಾಡೆಮಿಯಲ್ಲಿ ದಿನಗಳಲ್ಲಿ ವೃತ್ತಿಪರ ನೃತ್ಯಗಾತಿಯೆಂಬ ಪ್ರಮಾಣ ಪತ್ರವನ್ನು ಪಡೆದ ಈ ಯುವತಿ, ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ ಪಡೆಯಲಿದ್ದ ಸಂಭ್ರಮದಲ್ಲಿ ಹಾಗೆ ಸಮರ್ಸಾಲ್ಟ್‌ ಮಾಡಿದ್ದಾಗಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read