‘ಒಲಂಪಿಕ್ಸ್’ ನಲ್ಲಿ ‘ಬೆಳ್ಳಿ’ ಗೆದ್ದ ಚೀನಾ ಯುವತಿ ಮನೆಗೆ ತೆರಳಿದಾಗ ಮಾಡಿದ್ದೇನು ಅಂತ ತಿಳಿದ್ರೆ ನಿಬ್ಬೆರಗಾಗ್ತೀರಾ…!

ಒಲಂಪಿಕ್ಸ್ ಕ್ರೀಡಾಕೂಟ ಬಹುತೇಕ ಪೂರ್ಣಗೊಂಡಿದ್ದು ಚಿನ್ನ, ಬೆಳ್ಳಿ, ಕಂಚು ಗೆದ್ದ ಕ್ರೀಡಾಪಟುಗಳು ತಮ್ಮ ತಮ್ಮ ತವರಿಗೆ ತೆರಳಿದ್ದಾರೆ. ವಿಜೇತರಿಗೆ ಅವರವರ ದೇಶಗಳಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದ್ದು, ಅಪೂರ್ವ ಸಾಧನೆಗೆ ಎಲ್ಲೆಡೆಯಿಂದ ಅಭಿನಂದನೆ ವ್ಯಕ್ತವಾಗುತ್ತಿದೆ. ಇದರ ಮಧ್ಯೆ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಚೀನಾ ಯುವತಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೋಡುಗರನ್ನು ನಿಬ್ಬೆರಗಾಗಿಸಿದೆ.

ಹೌದು, ಈ ಬಾರಿಯ ಪ್ಯಾರಿಸ್ ಒಲಂಪಿಕ್ಸ್ ನ ಜಿಮ್ನಾಸ್ಟಿಕ್ ವಿಭಾಗದಲ್ಲಿ ಚೀನಾದ Zhou Yoqin ಬೆಳ್ಳಿ ಪದಕ ಗೆದ್ದಿದ್ದು, ಕ್ರೀಡಾಕೂಟ ಮುಗಿದ ಬಳಿಕ ವಾಪಸ್ ತಮ್ಮ ದೇಶಕ್ಕೆ ತೆರಳಿದ್ದಾರೆ. ಸಹಜವಾಗಿಯೇ ಅವರಿಗೆ ಅಭಿನಂದನೆ ಸಿಕ್ಕಿದೆ. ಆದರೆ ಅವರ ವಿಡಿಯೋ ವೈರಲ್ ಆಗಿರುವುದು ಬೇರೆಯದ್ದೇ ಕಾರಣಕ್ಕೆ. ಈ ವಿಡಿಯೋ ಈಗ ಚೀನಾದ ಸಾಮಾಜಿಕ ಜಾಲತಾಣದ ಫ್ಲಾಟ್ ಫಾರ್ಮ್ ಗಳಲ್ಲಿ ಮಾತ್ರವಲ್ಲದೆ ವಿಶ್ವದ ಇತರ ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲೂ ಹರಿದಾಡುತ್ತಿದೆ.

Zhou Yoqin ಪ್ಯಾರಿಸ್ ಒಲಂಪಿಕ್ಸ್ ನ ಜಿಮ್ನಾಸ್ಟಿಕ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ತಮ್ಮ ತಂದೆ – ತಾಯಿ ವಾಸಿಸುತ್ತಿರುವ ಊರಿಗೆ ತೆರಳಿದ್ದಾರೆ. ಅಲ್ಲಿ ಜೀವನ ನಿರ್ವಹಣೆಗಾಗಿ 18 ವರ್ಷದ Zhou Yoqin ಕುಟುಂಬ ರೆಸ್ಟೋರೆಂಟ್ ಒಂದನ್ನು ನಡೆಸುತ್ತಿದ್ದು, ಹೋದ ತಕ್ಷಣವೇ ತಮ್ಮ ತಂದೆ – ತಾಯಿಯ ನೆರವಿಗೆ ನಿಂತಿದ್ದಾರೆ. ರೆಸ್ಟೋರೆಂಟ್ ಗೆ ಆಗಮಿಸಿದ್ದ ಗ್ರಾಹಕರಿಗೆ Zhou Yoqin ಆಹಾರ ತಿನಿಸುಗಳನ್ನು ಸರ್ವ್ ಮಾಡುತ್ತಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ. ತಾನು ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದೇನೆ ಎಂಬ ಯಾವ ಹಮ್ಮು ಬಿಮ್ಮು ಇಲ್ಲದೆ ಈಕೆ ರೆಸ್ಟೋರೆಂಟ್ ನ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಗರು Zhou Yoqin ‘ಡೌನ್ ಟು ಅರ್ಥ್’ ಎಂದು ಕೊಂಡಾಡುತ್ತಿದ್ದಾರೆ.

 

https://twitter.com/thinking_panda/status/1823347503405617195?ref_src=twsrc%5Etfw%7Ctwcamp%5Etweetembed%7Ctwterm%5E1823347503405617195%7Ctwgr%5E1b121e90fa1cd7b8d74db9e1afa34a244bc7f3d2%7Ctwcon%5Es1_&ref_url=https%3A%2F%2Findianexpress.com%2Farticle%2Ftren

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read