ಚೀನಾದ ಎಂಜಿನಿಯರ್‌ಗಳ ಕೈಚಳಕ: ವಿಶ್ವದ ಅತಿ ಎತ್ತರದ ಸೇತುವೆ ನಿರ್ಮಾಣ…!

ಚೀನಾ ಮತ್ತೊಮ್ಮೆ ತನ್ನ ಅದ್ಭುತ ಎಂಜಿನಿಯರಿಂಗ್ ಕೌಶಲ್ಯವನ್ನು ಜಗತ್ತಿಗೆ ತೋರಿಸಿದೆ. ಹುವಾಜಿಯಾಂಗ್ ಗ್ರ್ಯಾಂಡ್ ಕಣಿವೆಯಲ್ಲಿ ವಿಶ್ವದ ಅತಿ ಎತ್ತರದ ಸೇತುವೆಯನ್ನು ನಿರ್ಮಿಸುವ ಮೂಲಕ ಚೀನಾದ ಎಂಜಿನಿಯರ್‌ಗಳು ಅಸಾಧಾರಣ ಸಾಧನೆ ಮಾಡಿದ್ದಾರೆ. ಈ ಬೃಹತ್ ಸೇತುವೆಯ ನಿರ್ಮಾಣದ ರೋಮಾಂಚಕ ಡ್ರೋನ್ ದೃಶ್ಯಗಳು ಇದೀಗ ಬಹಿರಂಗಗೊಂಡಿದ್ದು, ಈ ವರ್ಷವೇ ಇದು ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಿದೆ.

ಈ ಸೇತುವೆಯ ಎತ್ತರ ಲಂಡನ್‌ನ ಪ್ರಸಿದ್ಧ ಗೋಲ್ಡನ್ ಗೇಟ್ ಸೇತುವೆಗಿಂತ ಬರೋಬ್ಬರಿ 9 ಪಟ್ಟು ಹೆಚ್ಚಾಗಿದ್ದು, ಪ್ಯಾರಿಸ್‌ನ ಐಫಲ್ ಟವರ್‌ನ ಎತ್ತರಕ್ಕಿಂತ ದುಪ್ಪಟ್ಟು! ನಿರ್ಮಾಣ ಹಂತದಲ್ಲಿರುವ ಈ ಸೇತುವೆಯ ಮೇಲೆ ಮೋಡಗಳು ಹಾದುಹೋಗುವ ದೃಶ್ಯಗಳು ವಿಸ್ಮಯ ಮೂಡಿಸುತ್ತವೆ. ಬೈಪಾನ್ ನದಿಯ ಮೇಲೆ ನಿರ್ಮಿಸಲಾಗಿರುವ ಈ ಸೇತುವೆಯು ಸುಮಾರು 2.9 ಕಿಲೋಮೀಟರ್ ಉದ್ದವಿದ್ದು, ನದಿಯಿಂದ 2050 ಅಡಿ ಎತ್ತರದಲ್ಲಿದೆ. ಇದರ ಮಧ್ಯ ಭಾಗವು 93 ವಿಭಾಗಗಳನ್ನು ಹೊಂದಿದ್ದು, ಒಟ್ಟು 22,000 ಟನ್‌ಗಳಷ್ಟು ತೂಕವನ್ನು ಹೊಂದಿದೆ. ಇದು ಐಫಲ್ ಟವರ್‌ನ ಒಟ್ಟು ತೂಕದ ಮೂರು ಪಟ್ಟು ಹೆಚ್ಚು.

ಈ ಸೇತುವೆ ಉದ್ಘಾಟನೆಯೊಂದಿಗೆ ವಿಶ್ವದ ಅತಿ ಎತ್ತರದ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸದ್ಯಕ್ಕೆ ಈ ದಾಖಲೆ ಚೀನಾದ ಬೈಪಾಂಜಿಯಾಂಗ್ ಸೇತುವೆಯ ಹೆಸರಿನಲ್ಲಿದೆ. ಹುವಾಜಿಯಾಂಗ್ ಸೇತುವೆ ಕಾರ್ಯಾರಂಭ ಮಾಡಿದ ನಂತರ, ಸ್ಥಳೀಯ ಜನರು ಕಣಿವೆಯನ್ನು ದಾಟಲು ಕೇವಲ 2-3 ನಿಮಿಷಗಳನ್ನು ತೆಗೆದುಕೊಳ್ಳಲಿದ್ದು, ಪ್ರಸ್ತುತ ಬೇಕಾಗುವ ಒಂದು ಗಂಟೆಯ ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ. ಸುಮಾರು 292 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸೇತುವೆಯ ಕಾಮಗಾರಿ 2022 ರಲ್ಲಿ ಪ್ರಾರಂಭವಾಗಿ ಕೇವಲ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳುವ ಹಂತ ತಲುಪಿರುವುದು ವಿಶೇಷ. ಈ ಸೇತುವೆಯು ಆ ಪ್ರದೇಶದ ಸಂಪರ್ಕ ವ್ಯವಸ್ಥೆಯಲ್ಲಿ ಕ್ರಾಂತಿಯನ್ನುಂಟು ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read