ತೆಲಂಗಾಣ: ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ತಾಯಿಯೊಬ್ಬರು ತನ್ನ ಮಗನ ಕಾಲೇಜು ಫೀಸ್ ಕಟ್ಟಲು ಹಣ ಬೇಕಾಗಿರುವುದರಿಂದ ಚಲಿಸುತ್ತಿದ್ದ ಸರ್ಕಾರಿ ಬಸ್ ನಡಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದರು. ಅಪಘಾತದಲ್ಲಿ ಮೃತಪಟ್ಟರೆ ಆಕೆಯ ಕುಟುಂಬಕ್ಕೆ 45,000 ರೂ. ಸಿಗುವುದಾಗಿ ಯಾರೋ ದಾರಿ ತಪ್ಪಿಸಿದ್ದರಿಂದ ಮಹಿಳೆ ಬಸ್ ನಡಿಗೆ ಬಿದ್ದು ಸಾವಿಗೀಡಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ತೆಲಂಗಾಣದಲ್ಲಿ ಮಹಿಳೆಯೊಬ್ಬರು ಇದೇ ರೀತಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ.
ತೆಲಂಗಾಣದ ಮೆಟಪಲ್ಲಿಯಲ್ಲಿ ಮಹಿಳೆಯೊಬ್ಬರು ತನ್ನ ಜೀವನವನ್ನು ಅಂತ್ಯಗೊಳಿಸಲು ಬಸ್‌ನ ಹಿಂಬದಿಯ ಟೈರ್‌ನ ಕೆಳಗೆ ಹಾರಿದ್ದಾರೆ. ಆದರೆ, ಬಸ್ ಚಾಲಕ ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕಿದ ಪರಿಣಾಮ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ, ಸರ್ಕಾರಿ ಬಸ್ ವೊಂದು ನಿಲ್ದಾಣದಲ್ಲಿ ಬಂದು ನಿಂತಿದೆ. ಪ್ರಯಾಣಿಕರೆಲ್ಲರೂ ಬಸ್ ಹತ್ತಿದ ಬಳಿಕ ಬಸ್ ಚಲಿಸಿದೆ. ಈ ವೇಳೆ ಮಹಿಳೆಯೊಬ್ಬರು ಹಿಂಬದಿಯ ಟೈರ್ ನಡಿಗೆ ಹಾರಿದ್ದಾರೆ. ಕೂಡಲೇ ಚಾಲಕ ಬಸ್ ಗೆ ಬ್ರೇಕ್ ಹಾಕಿದ್ದರಿಂದ ಅನಾಹುತ ತಪ್ಪಿದೆ.
ಸದ್ಯ, ಸ್ಥಳೀಯ ಪೊಲೀಸರು ಮಹಿಳೆಯನ್ನು ವಿಚಾರಣೆ ನಡೆಸುತ್ತಿದ್ದು, ಆತ್ಮಹತ್ಯೆಗೆ ಪ್ರಯತ್ನಿಸಲು ಕಾರಣವೇನೆಂದು ತನಿಖೆ ನಡೆಸುತ್ತಿದ್ದಾರೆ.
https://twitter.com/TeluguScribe/status/1682344329850007553?ref_src=twsrc%5Etfw%7Ctwcamp%5Etweetembed%7Ctwterm%5E1682344329850007553%7Ctwgr%5Ed87e0fe2578714c59838cff80631c9b786865c78%7Ctwcon%5Es1_&ref_url=https%3A%2F%2Fwww.freepressjournal.in%2Findia%2Fwatch-woman-throws-herself-under-moving-bus-in-telangana-saved