ವಾಷಿಂಗ್ ಮೆಷಿನ್ ನಲ್ಲಿ 5 ಅಡಿ ಉದ್ದದ ನಾಗರಹಾವು ಪತ್ತೆ: ಬೆಚ್ಚಿ ಬಿದ್ದ ಮನೆಯವರು | SHOCKING VIDEO

ರಾಜಸ್ಥಾನದ ಕೋಟಾದಲ್ಲಿ ವಾಷಿಂಗ್ ಮೆಷಿನ್‌ ನೊಳಗೆ 5 ಅಡಿ ಉದ್ದದ ನಾಗರಹಾವು ಪತ್ತೆಯಾಗಿದೆ. ದೊಡ್ಡ ಗಾತ್ರದ ಹಾವನ್ನು ಕಂಡ ಮನೆಯವರು ಬೆಚ್ಚಿಬಿದ್ದಿದ್ದಾರೆ. ಕುಟುಂಬಸ್ಥರು ಈ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಜನರಿಗೆ ಮಾಹಿತಿ ನೀಡಿದ್ದಾರೆ. ನಂತರ ಹಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಯಿತು.

ಮನೆಯ ವ್ಯಕ್ತಿಯೊಬ್ಬರು ವಾಷಿಂಗ್ ಮೆಷಿನ್ ಬಳಸಲು ಹೋದಾಗ ಅದರೊಳಗೆ ನಾಗರಹಾವು ಕಂಡುಬಂದಿದೆ. ಕೋಟಾದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದಾರೆ.

ಕೋಟಾದ ಶಂಭುದಯಾಳ್ ಅವರ ಮನೆಯಲ್ಲಿ ಘಟನೆ ನಡೆದಿದೆ. ಅವರು ವಾಷಿಂಗ್ ಮೆಷಿನ್ ಆಫ್ ಮಾಡಿ ಹಾವು ಹಿಡಿಯುವವರಿಗೆ ಕರೆ ಮಾಡಿದ್ದಾರೆ. ಈ ಪ್ರದೇಶದಲ್ಲಿ ಹಾವು ಹಿಡಿಯುವ ಗೋವಿಂದ ಶರ್ಮಾ ಅವರು ಹಾವನ್ನು ಸುರಕ್ಷಿತವಾಗಿ ಹಿಡಿದು ಲಾಡ್ಪುರ ಅರಣ್ಯಕ್ಕೆ ಬಿಡಲಾಯಿತು.

https://twitter.com/thevocalnews/status/1826097654356652141

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read