HomeEntertainment'ಚಿಲ್ಲಿ ಚಿಕನ್' ಚಿತ್ರದ ಟೀಸರ್ ರಿಲೀಸ್

‘ಚಿಲ್ಲಿ ಚಿಕನ್’ ಚಿತ್ರದ ಟೀಸರ್ ರಿಲೀಸ್

ಪ್ರತೀಕ್ ಪ್ರಜೋಶ್ ನಿರ್ದೇಶನದ ಬಹುನಿರೀಕ್ಷಿತ ‘ಚಿಲ್ಲಿ ಚಿಕನ್’ ಚಿತ್ರದ ಟೀಸರ್ ಅನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. ಈ ಟೀಸರ್ ಬಿಡುಗಡೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಭರ್ಜರಿ ವೀಕ್ಷಣೆ ಕಂಡಿದ್ದು, ನೋಡುಗರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ,

ಈ ಚಿತ್ರದಲ್ಲಿ ಬಿವಿ ಶೃಂಗಾ ಸೇರಿದಂತೆ ನಿತ್ಯಶ್ರೀ, ಪದ್ಮಜ ರಾವ್, ಬಿಜೌ ತಂಗ್ಜಮ್, ರಿನಿ ಬಣ್ಣ ಹಚ್ಚಿದ್ದು, ಮೆಟಾ ನೋಯ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ದೀಪ್  ಭೀಮಾಜಿಯಾನಿ ಮತ್ತು ಸುಧಾ ನಂಬೈರ್ ನಿರ್ಮಾಣ ಮಾಡಿದ್ದಾರೆ.

ಸಿದ್ದಾರ್ಥ್ ಕೆಎಸ್ ಸಂಗೀತ ಸಂಯೋಜನೆ ನೀಡಿದ್ದು, ಆಶಿಕ್ ಕುಸುಗೋಳಿ ಸಂಕಲನ, ತ್ರಿಲೋಕ ತ್ರಿವಿಕ್ರಮ ಅವರ ಸಂಭಾಷಣೆ ಮತ್ತು ಶ್ರೀಶ್ ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular