ನಕಲಿ ವೈದ್ಯನಿಂದ ಮಕ್ಕಳ ಮಾರಾಟ ಕೇಸ್: ರಕ್ಷಿಸಲ್ಪಟ್ಟಿದ್ದ 30 ದಿನಗಳ ಕಂದಮ್ಮ ಸಾವು

ಬೆಳಗಾವಿ: ನಕಲಿ ವೈದ್ಯನಿಂದ ಮಗು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಿಸಲ್ಪಟ್ಟಿದ್ದ ನವಜಾತ ಶಿಸು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಮಕ್ಕಳ ಮಾರಾಟ ಪ್ರಕರಣದಲ್ಲಿ 30 ದಿನಗಳ ಹೆಣ್ಣುಮಗುವನ್ನು ರಕ್ಷಿಸಲಾಗಿತ್ತು. ಬೆಳವಣಿಗೆ ಕುಂಠಿತ, ತೂಕ ಹೆಚ್ಚಳವಾಗದೇ ಅನಾರೋಗ್ಯದಿಂದ ಬಳಲುತ್ತಿದ್ದ ಕಂದಮ್ಮನನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ತಡರಾತ್ರಿ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ 30 ದಿನಗಳ ಹೆಣ್ಣುಮಗು ಮೃತಪಟ್ಟಿದೆ.

ಕಿತ್ತೂರು ಮೂಲದ ನಕಲಿ ವೈದ್ಯ ಅಬ್ದುಲ್ ಗಾಫರ್ ಲಡಾಖಾನ್ ನಿಂದ ಮಗು ಖರೀದಿಸಿದ್ದ ನರ್ಸ್ ಮಹಾದೇವಿ, ಬೆಳಗಾವಿಗೆ ಬಂದು ಮಾರುವಾಗ ಸಿಕ್ಕಿಬಿದ್ದಿದ್ದಳು. ಮಗುವನ್ನು ರಕ್ಷಿಸಿದ್ದ ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಆರೈಕೆ ಮಾಡಿಸಿದ್ದರು. ಆದರೀಗ ಮಗು ಮೃತಪಟ್ಟಿದ್ದು, ಮಗುವಿನ ತಂದೆ-ತಾಯಿ ಸಮ್ಮುಖದಲ್ಲಿ ಬೆಳಗವೈ ರುದ್ರಭೂಮಿಯಲ್ಲಿ ಪೊಲೀಸರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read