HomeIndiaಹದಗೆಟ್ಟ ರಸ್ತೆಯಲ್ಲೇ ಕೆಟ್ಟು ನಿಂತ ಆಂಬುಲೆನ್ಸ್; ಕೈಯಲ್ಲೇ ಮಗುವಿನ ಶವ ಹೊತ್ತು ಸಾಗಿದ ತಾಯಿ

ಹದಗೆಟ್ಟ ರಸ್ತೆಯಲ್ಲೇ ಕೆಟ್ಟು ನಿಂತ ಆಂಬುಲೆನ್ಸ್; ಕೈಯಲ್ಲೇ ಮಗುವಿನ ಶವ ಹೊತ್ತು ಸಾಗಿದ ತಾಯಿ

ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಅಲ್ಲೇರಿ ಗ್ರಾಮದಲ್ಲಿ ಮಹಿಳೆಯೊಬ್ಬರು ತನ್ನ ಅಂಬೆಗಾಲಿಡುವ ಮಗಳ ಮೃತದೇಹವನ್ನು ಕೈಯಲ್ಲಿಡುದುಕೊಂಡ ಸಾಗಿಸಿದ್ದಾರೆ.

ರಸ್ತೆ ಸೌಕರ್ಯಗಳು ಹಾಳಾಗಿದ್ದರಿಂದ ಆಂಬ್ಯುಲೆನ್ಸ್ ಕೆಟ್ಟು ಹೋಗಿ ಈ ಘಟನೆ ನಡೆದಿದೆ. 18 ತಿಂಗಳ ಅಂಬೆಗಾಲಿಡುವ ತನುಷ್ಕಾ ತನ್ನ ಪೋಷಕರೊಂದಿಗೆ ತನ್ನ ನಿವಾಸದ ಹೊರಗೆ ಮಲಗಿದ್ದಾಗ ಹಾವು ಕಚ್ಚಿದೆ. ಮಗುವಿಗೆ ಏನೋ ಆಗಿದೆ ಎಂದು ತಿಳಿದ ನಂತರ, ತಂದೆ ವಿಜಿ ಮತ್ತು ತಾಯಿ ಪ್ರಿಯಾ ಮಗುವನ್ನು ಆನೈಕಟ್ಟು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರಿಯಾದ ರಸ್ತೆ ಸೌಕರ್ಯ ಇಲ್ಲದ ಕಾರಣ ಆಸ್ಪತ್ರೆಗೆ ತಲುಪಲು ಬಹಳ ಸಮಯ ಹಿಡಿದಿದೆ. ಆಸ್ಪತ್ರೆ ತಲುವುದು ತಡವಾಗಿದ್ದರಿಂದ ವಿಷವು ಮಗುವಿನ ದೇಹದಾದ್ಯಂತ ಹರಡಿ ಸಾವನ್ನಪ್ಪಿದೆ. ಆಸ್ಪತ್ರೆಗೆ ತಲುಪಿದ ನಂತರ ವೈದ್ಯರು ಮಗು ಮೃತಪಟ್ಟಿರುವ ಬಗ್ಗೆ ಘೋಷಿಸಿದ್ದಾರೆ.

ಆನೈಕಟ್ಟೆ ಪೊಲೀಸರು ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಮಗುವಿನ ಶವವನ್ನು ಅಂತ್ಯಕ್ರಿಯೆಗಾಗಿ ಪೋಷಕರಿಗೆ ಹಸ್ತಾಂತರಿಸಲಾಯಿತು, ನಂತರ ಆಂಬ್ಯುಲೆನ್ಸ್‌ ನಲ್ಲಿ ಕೊಂಡೊಯ್ಯಲಾಗಿದೆ. ವೆಲ್ಲೂರಿನಲ್ಲಿ ಹದಗೆಟ್ಟ ರಸ್ತೆಗಳಿಂದಾಗಿ, ಪೋಷಕರು ಮತ್ತು ಮೃತ ಮಗುವನ್ನು ಹೊತ್ತೊಯ್ಯುತ್ತಿದ್ದ ಆಂಬ್ಯುಲೆನ್ಸ್ ಕೆಟ್ಟುಹೋಗಿದೆ. ನಂತರ ತಾಯಿ ಪ್ರಿಯಾ ಮಣ್ಣು, ಕೆಸರುಮಯವಾದ ರಸ್ತೆಯಲ್ಲಿ ಮಗುವನ್ನು ಹೊತ್ತುಕೊಂಡು ತಮ್ಮ ಗ್ರಾಮಕ್ಕೆ ಹೋಗಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular