HomeLatest Newsಪಕ್ಕದ ಮನೆಯ ವ್ಯಕ್ತಿಯಿಂದ ಪತ್ನಿಯ ಮೊಬೈಲ್ ಗೆ ಬಂತು ಸಂದೇಶ: ಅಕ್ರಮ ಸಂಬಂಧದ ಅನುಮಾನಕ್ಕೆ ಆತ್ಮಹತ್ಯೆಗೆ...

ಪಕ್ಕದ ಮನೆಯ ವ್ಯಕ್ತಿಯಿಂದ ಪತ್ನಿಯ ಮೊಬೈಲ್ ಗೆ ಬಂತು ಸಂದೇಶ: ಅಕ್ರಮ ಸಂಬಂಧದ ಅನುಮಾನಕ್ಕೆ ಆತ್ಮಹತ್ಯೆಗೆ ಶರಣಾದ ಪತಿ

ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಪಕ್ಕದ ಮನೆಯವನ ಜೊತೆಯೇ ಅಕ್ರಮ ಸಂಬಂಧ ಹೊಂದಿದ್ದ ಬಗ್ಗೆ ಅನುಮಾನಗೊಂಡ ಪತಿ ಮಹಾಶಯ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವೃತ್ತಿಯಲ್ಲಿ ಚಾಲಕನಾಗಿದ್ದ ಮನು ಆತ್ಮಹತ್ಯೆಗೆ ಶರಣಾದವನು. ಸಖರಾಯಪಟ್ಟಣ ಮೂಲದ ಹರಿಣಿ ಎಂಬಾಕೆಯನ್ನು ಪ್ರೀತಿಸಿ ಏಳು ವರ್ಷಗಳ ಹಿಂದೆ ಮನು ಮದುವೆಯಾಗಿದ್ದ. ಪತಿ-ಪತ್ನಿ ಚನ್ನಾಗಿಯೇ ಇದ್ದರು. ಇತ್ತೀಚೆಗೆ ಪತ್ನಿ ಹರಿಣಿಗೆ ಪಕ್ಕದ ಮನೆಯ ಅಶೋಕ್ ಎಂಬಾತನ ಜೊತೆ ಸ್ನೇಹ ಬೆಳೆದಿದೆ.

ಪತ್ನಿ ಜೊತೆ ಪಕ್ಕದ ಮನೆಯವನ ಸ್ನೇಹ, ಸಲುಗೆ ಮನುಗೆ ಸಾಕಷ್ಟು ಅನುಮಾನ ಮೂಡಿಸಿತ್ತು. ಕಳೆದ ರಾತ್ರಿ ಮನು ತನ್ನ ಪತ್ನಿಯ ಮೊಬೈಲ್‌ನಲ್ಲಿ ಅಶೋಕ್ ಕಳುಹಿಸಿದ್ದ ಸಂದೇಶಗಳನ್ನು ನೋಡಿದ್ದ. ತನ್ನ ಪತ್ನಿಗೆ ನೀನ್ಯಾಕೆ ಮೆಸೇಜ್ ಕಳುಹಿಸಿದ್ದೀಯಾ ಎಂದು ಮನು ಅಶೋಕ್ ನನ್ನು ಪ್ರಶ್ನಿಸಿದ್ದಾನೆ. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೇಳೆ ಅಶೋಕ್, ನಿನ್ನ ಪತ್ನಿ ಜೊತೆ ನನಗೆ ಸಂಬಂಧ ಇರುವುದು ನಿಜ ಎಂದು ಹೇಳಿ ಮನುಗೆ ಅವಮಾನ ಮಾಡಿದ್ದಾನಂತೆ. ಇಬ್ಬರ ಗಲಾಟೆಯ ಬೆನ್ನಲ್ಲೇ ಪತ್ನಿ ಹರಿಣಿ, ಗಂಡ ಮನು ವಿರುದ್ಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳು. ಪತಿ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಳು. ಪೊಲೀಸರು ವಿಚಾರಣೆಗೆ ಕರೆದಾಗ, ಇಡೀ ಊರಿನ ಮುಂದೆ ತನ್ನ ಮರ್ಯಾದೆ ಹೋಯಿತು ಎಂದು ಮನು ಮನನೊಂದಿದ್ದ.

ಇದರಿಂದ ಬೇಸತ್ತ ಮನು ಆತ್ಮಹತ್ಯೆಗೆ ಶರಣಾಗಿದ್ದಾನೆ. ನನ್ನ ಮಗನ ಸಾವಿಗೆ ಆತನ ಪತ್ನಿ ಹರಿಣಿ ಮತ್ತು ಅಶೋಕ್ ಅವರೇ ನೇರ ಕಾರಣ. ಅವರಿಬ್ಬರ ಅಕ್ರಮ ಸಂಬಂಧವೇ ಈ ದುರಂತಕ್ಕೆ ನಾಂದಿ ಹಾಡಿದೆ ಎಂದು ಮನುವಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಮನು ಪೋಷಕರ ದೂರಿನ ಮೇರೆಗೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular