ಚಿಕ್ಕಮಗಳೂರು: ವೈದ್ಯ ಡಾ.ಮಹೇಂದ್ರ ರೆಡ್ಡಿ ವೈದ್ಯೆಯಾಗಿದ್ದ ಪತ್ನಿ ಡಾ.ಕೃತ್ತಿಕಾ ರೆಡ್ಡಿಯನ್ನು ಕೊಲೆಗೈದುರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ನಡುವೆ ಚಿಕ್ಕಮಗಳೂರಿನಲ್ಲಿಯೂ ಇಂತದ್ದೇ ಘಟನೆ ನಡೆದಿದೆ. ಪತಿ ಮಹಾಶಯನೇ ಪತ್ನಿಯನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಚಿಕ್ಕನಾವಂಗಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನು (25) ಕೊಲೆಯಾದ ಮಹಿಳೆ. ರಮೇಶ್ ಪತ್ನಿಯನ್ನೇ ಕೊಂದ ಗಂಡ. ರಮೇಶ್ ಹಾಗೂ ತನು 7 ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ ಮಗನಿದ್ದಾನೆ. ಪತಿ ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು.
ತಡರಾತ್ರಿ ಕಡಿದು ಬಂದ ಪತಿ ರಮೇಶ್ ಪತ್ನಿಯನ್ನು ಬರ್ಬರವಾಗಿ ಕೊಲೆಗೈದಿದ್ದಾನೆ. ಮನೆಯ ರೂಮ್ ನಲ್ಲಿ ರಕ್ತದ ಮಡುವಲ್ಲಿ ಪತ್ನಿ ತನು ಶವವಾಗಿ ಪತ್ತೆಯಾಗಿದ್ದಾಳೆ. ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.