HomeKarnataka'ಸರ್ವಾಂಗ ಸುಂದರ' ನಾಗಲು ಬಯಸಿ ದೇವರ ಮೊರೆ ಹೋದ ಭಕ್ತ; ಕಾಣಿಕೆ ಹುಂಡಿಯಲ್ಲಿತ್ತು ಬೇಡಿಕೆ ಪತ್ರ....!

‘ಸರ್ವಾಂಗ ಸುಂದರ’ ನಾಗಲು ಬಯಸಿ ದೇವರ ಮೊರೆ ಹೋದ ಭಕ್ತ; ಕಾಣಿಕೆ ಹುಂಡಿಯಲ್ಲಿತ್ತು ಬೇಡಿಕೆ ಪತ್ರ….!

ಇಷ್ಟಾರ್ಥಗಳನ್ನು ನೆರವೇರಿಸುವಂತೆ ಕೋರಿ ದೇವರ ಮೊರೆ ಹೋಗುವುದು ಸಾಮಾನ್ಯ ಸಂಗತಿ. ಅದರಲ್ಲೂ ಸಂಕಷ್ಟಗಳನ್ನು ನಿವಾರಣೆ ಮಾಡುವಂತೆ ಕೋರುವ ಬೇಡಿಕೆಯೇ ಹೆಚ್ಚು. ಇದರ ಮಧ್ಯೆ ನಟನಾಗಲು ಬಯಸಿದ್ದ ವ್ಯಕ್ತಿಯೊಬ್ಬ ಸರ್ವಾಂಗ ಸುಂದರನಾಗಿ ಕಾಣುವಂತೆ ಮಾಡಲು ದೇವರ ಮೊರೆ ಹೋಗಿದ್ದಾನೆ.

ಇಂತಹ ವಿಚಿತ್ರ ಬೇಡಿಕೆ ಇಟ್ಟು ಈ ಭಕ್ತ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಚಿಕ್ಕಮಗಳೂರು ಜಿಲ್ಲೆಯ ಕಳಸದ ಶ್ರೀ ಕಲಶೇಶ್ವರ ದೇವಾಲಯದ ಕಾಣಿಕೆ ಹುಂಡಿಯಲ್ಲಿ ಪತ್ರ ಹಾಕಿದ್ದಾನೆ. ಗುರುವಾರದಂದು ಕಲಶೇಶ್ವರ ಹಾಗೂ ಪರಿವಾರ ದೇವರುಗಳ ಕಾಣಿಕೆ ಹುಂಡಿಯ ಪರ್ಕಾವಣೆ ಮಾಡುವಾಗ ಈ ಬೇಡಿಕೆ ಪತ್ರ ಕಂಡುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪತ್ರದಲ್ಲಿ, ‘ನಾನು ಸರ್ವಾಂಗ ಸುಂದರಿಯಾದ ನಿಮ್ಮ (ಗಿರಿಜಾದೇವಿ) ಆಶೀರ್ವಾದ ಬಯಸುತ್ತಿದ್ದೇನೆ. ನಾನು ಒಬ್ಬ ಉತ್ತಮ ನಟ, ಫ್ಯಾಷನ್ ಮಾಡೆಲ್ ಆಗಬೇಕೆಂದು ಇಚ್ಚಿಸಿದ್ದೇನೆ. ಈ ಕನಸನ್ನು ನನಸು ಮಾಡುವ ಹೊಣೆ ನಿಮ್ಮದು. ನಿಮ್ಮಂತೆ ನಾನು ಸರ್ವಾಂಗ ಸುಂದರನಾಗಬೇಕು ಎಂದು ಈ ಪತ್ರದ ಮೂಲಕ ನಿಮ್ಮ ಆಶೀರ್ವಾದ ಆಶಿಸುತ್ತೇನೆ. ನನ್ನ ಸೌಂದರ್ಯದ ಹೊಣೆ ನಿಮ್ಮದು. ಪ್ರಪಂಚದಲ್ಲಿ ಸರ್ವಾಂಗ ಸುಂದರನೆಂಬ ಪ್ರಖ್ಯಾತಿಯಾಗಬೇಕು ಇದು ನಿಮ್ಮ ಭಕ್ತನ ಬೇಡಿಕೆ’ ಎಂದು ಇದರಲ್ಲಿ ಬರೆಯಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular