ಚಿಕ್ಕಬಳ್ಳಾಪುರ: ವಾಣಿಜ್ಯ ಬಳಕೆ ಸಿಲಿಂಡರ್ ಅಭಾವದಿಂದ ಕಂಗೆಟ್ಟಿರುವ ಕೆಲ ಹೋಟೆಲ್ ಮಾಲೀಕರು ಗೃಹ ಬಳಕೆ ಸಿಲಿಂಡರ್ ಗಳನ್ನೇ ಅಕ್ರಮವಾಗಿ ಉಪಯೋಗಿಸುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಗೃಹ ಬಳಕೆಯ ಸಿಲಿಂಡರ್ ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ ಹಿನ್ನೆಲೆಯಲ್ಲಿ 247 ಸಿಲಿಂಡರ್ ಗಳನ್ನು ಜಪ್ತಿ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಬಾಗೇಪಲ್ಲಿಯಲ್ಲಿ 13, ಚಿಕ್ಕಬಳ್ಳಾಪುರದಲ್ಲಿ 71, ಚಿಂತಾಮಣಿಯಲ್ಲಿ 26, ಗೌರಿಬಿದನೂರಿನಲ್ಲಿ 36, ಗುಡಿಬಂಡೆಯಲ್ಲಿ 68, ಶಿಡ್ಲಘಟ್ಟದಲ್ಲಿ 31, ಚೇಳೂರಿನಲ್ಲಿ 2, ಸಿಲಿಂಡರ್ ಗಳನ್ನು ಜಪ್ತಿ ಮಾಡಲಾಗಿದೆ. 214 ಗೃಹಬಳಕೆ ಸಿಲಿಂಡರ್ ಗಳು ಹಾಗೂ 33 ವಾಣಿಜ್ಯ ಸಿಲಿಂದರ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದ್ದಾರೆ.
ಇದೇ ವೇಳೆ ಗೃಹ ಬಳಕೆ ಸಿಲಿಂಡರ್ ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ಶಾಶ್ವತವಾಗಿ ಸಿಲಿಂಡರ್ ಮಂಜೂರಾತಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

