HomeLatest NewsBIG NEWS: ಬೈಕ್ ಸವಾರನ ಮೇಲೆಯೇ ಹರಿದುಹೋದ ಟಿಪ್ಪರ್ ಲಾರಿ: ವ್ಯಕ್ತಿ ಸ್ಥಳದಲ್ಲೇ ಸಾವು

BIG NEWS: ಬೈಕ್ ಸವಾರನ ಮೇಲೆಯೇ ಹರಿದುಹೋದ ಟಿಪ್ಪರ್ ಲಾರಿ: ವ್ಯಕ್ತಿ ಸ್ಥಳದಲ್ಲೇ ಸಾವು

ಚಿಕ್ಕಬಳ್ಳಾಪುರ: ಬೈಕ್ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಯಲಗಲಹಳ್ಳಿಯಲ್ಲಿ ನಡೆದಿದೆ.

ಯಲಗಲಹಳ್ಳಿ ಕ್ರಷರ್ ಝೋನ್ ಬಳಿಯೇವ್ ಈ ದುರಂತ ಸಂಭವಿಸಿದೆ. ಕಸವುಗುಟ್ಟಹಳ್ಳಿ ಗ್ರಾಮದ ನಿವಾಸಿ ವೆಂಕಟೇಶ್ವರ ಕ್ರಷರ್ ರೈಟರ್ ವೆಂಕಟೇಶ್ (40) ಮೃತ ದುರ್ದೈವಿ.

ಟಿಪ್ಪರ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಬೈಕ್ ಸವಾರನ ಮೇಲೆಯೇ ಟಿಪ್ಪರ್ ಹರಿದು ಹೋಗಿದೆ. ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular