SHOCKING: ಕುಟುಂಬದ 5 ಮಂದಿ ಬರ್ಬರವಾಗಿ ಕೊಚ್ಚಿ ಕೊಲೆಗೈದ ಆರೋಪಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ರಾಯಪುರ: ಛತ್ತೀಸ್‌ ಗಢದ ಸಾರಂಗಢ್-ಬಿಲೈಗಢ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಒಂದೇ ಕುಟುಂಬದ ಐವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದ್ದು, ಶಂಕಿತ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದ್ದಾನೆ.

ರಾಯ್‌ಪುರದಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಸಲಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ಥರ್ಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರು ಅಪರಾಧದ ಬಗ್ಗೆ ಮಾಹಿತಿ ನೀಡಿದ ನಂತರ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ವಿವರಗಳನ್ನು ವಿವರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಷ್ಕರ್ ಶರ್ಮಾ, ಸಂತ್ರಸ್ತರನ್ನು ಹೇಮಲಾಲ್ ಸಾಹು(55), ಅವರ ಪತ್ನಿ ಜಗಮೋತಿ ಸಾಹು(50), ಅವರ ಪುತ್ರಿಯರಾದ ಮೀರಾ ಸಾಹು(30), ಮಮತಾ ಸಾಹು(35), ಮತ್ತು ಅವರ ಮೊಮ್ಮಗ ಆಯುಷ್ (5) ಎಂದು ಗುರುತಿಸಲಾಗಿದೆ. ಅವರನ್ನು ಮನೋಜ್ ಸಾಹು ಕೊಂದು ಹಾಕಿದ್ದು, ಆತನ ಶವವೂ ಮನೆ ಆವರಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಎಲ್ಲಾ ಐದು ದೇಹಗಳ ಮೇಲೆ ಕೊಡಲಿಯಿಂದ ಹೊಡೆದ ಗಾಯಗಳಾಗಿದ್ದು, ಆರಂಭಿಕ ಸಾಂದರ್ಭಿಕ ಪುರಾವೆಗಳು ಮನೋಜ್ ಆತ್ಮಹತ್ಯೆಗೆ ಮೊದಲು ಕುಟುಂಬ ಸದಸ್ಯರನ್ನು ಕೊಂದಿರಬಹುದು ಎಂದು ಎಸ್ಪಿ ತಿಳಿಸಿದ್ದಾರೆ.

ಫೋರೆನ್ಸಿಕ್ ತಂಡವನ್ನು ಸ್ಥಳಕ್ಕೆ ಕರೆಸಲಾಗಿದೆ. ಅಪರಾಧದ ಹಿಂದಿನ ಘಟನೆ ಮತ್ತು ಉದ್ದೇಶಗಳ ನಿಖರವಾದ ಕಾರಣ ಖಚಿತಪಡಿಸಿಕೊಳ್ಳಲು ಸಂಪೂರ್ಣ ತನಿಖೆ ನಡೆಯುತ್ತಿದೆ. ಮೃತದೇಹಗಳನ್ನೂ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read