HomeCrimeಗೆಳತಿಯೊಂದಿಗೆ ಹೋಗುವಾಗಲೇ ನಡೆದಿತ್ತು ದುರಂತ; ಕಟ್ಟಡ ಉರುಳಿ ಮಹಿಳಾ ಟೆಕ್ಕಿ ಸಾವು

ಗೆಳತಿಯೊಂದಿಗೆ ಹೋಗುವಾಗಲೇ ನಡೆದಿತ್ತು ದುರಂತ; ಕಟ್ಟಡ ಉರುಳಿ ಮಹಿಳಾ ಟೆಕ್ಕಿ ಸಾವು

ಮಹಿಳಾ ಟೆಕ್ಕಿಯೊಬ್ಬರು ತಮ್ಮ ಗೆಳತಿಯೊಂದಿಗೆ ಹೋಗುವಾಗಲೇ ಘೋರ ದುರಂತವೊಂದು ನಡೆದಿದೆ. ಏಕಾಏಕಿ ಕಟ್ಟಡ ಉರುಳಿ ಬಿದ್ದ ಪರಿಣಾಮ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮಧುರೈ ಮೂಲದ ಪದ್ಮಪ್ರಿಯ (22 ವರ್ಷ) ಮೃತಪಟ್ಟಿದ್ದಾರೆ.

ಚೆನ್ನೈನ ಥೌಸಂಡ್ ಲೈಟ್ಸ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪದ್ಮಪ್ರಿಯ ತಮ್ಮ ಗೆಳತಿ ಜೊತೆ ಮೆಟ್ರೋ ಸ್ಟೇಷನ್ ಕಡೆ ನಡೆದುಕೊಂಡು ಹೋಗುವಾಗ ರಸ್ತೆ ಪಕ್ಕದ ಕಟ್ಟಡ ಉರುಳಿ ಬಿದ್ದಿದೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ಬಳಿಕ ಅವಶೇಷಗಳಡಿಯಿಂದ ಪದ್ಮಪ್ರಿಯ ಅವರನ್ನು ಹೊರ ತೆಗೆಯಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಅವರನ್ನು ಆಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ಕಟ್ಟಡ ಕೆಡವುವ ಕಾರ್ಯ ನಡೆಯುತ್ತಿದ್ದು, ಈ ವೇಳೆ ಯಂತ್ರಗಳ ಕಂಪನದಿಂದ ಗೋಡೆ ಉರುಳಿ ಬಿದ್ದಿರಬಹುದು ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular