ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ವಿಶ್ವದ ಅತಿ ಎತ್ತರದ ರೈಲ್ವೆ ಬ್ರಿಡ್ಜ್; ಮೈ ನವಿರೇಳಿಸುವ ವಿಡಿಯೋ ವೈರಲ್

ವಿಶ್ವದ ಅತಿ ಎತ್ತರದ ರೈಲ್ವೆ ಬ್ರಿಡ್ಜ್ ಎಂಬ ಹೆಗ್ಗಳಿಕೆ ಹೊಂದಿರುವ ಜಮ್ಮು ಕಾಶ್ಮೀರದ ಚೆನಾಬ್ ಸೇತುವೆ ಈ ವರ್ಷಾಂತ್ಯದ ವೇಳೆಗೆ ಉದ್ಘಾಟನೆಗೊಳ್ಳಲಿದೆ. ಈಗಾಗಲೇ ಸೇತುವೆ ಮೇಲೆ ಪರೀಕ್ಷಾರ್ಥ ರೈಲು ಸಂಚಾರ ಆರಂಭವಾಗಿದ್ದು, ಇದರ ಮೈನವಿರೇಳಿಸುವ ದೃಶ್ಯದ ವಿಡಿಯೋ ವೈರಲ್ ಆಗಿದೆ.

ಉದಂಪುರ್ – ಶ್ರೀನಗರ – ಬಾರಮುಲ್ಲಾ ನಡುವೆ ಸಂಚರಿಸುವ ಈ ರೈಲು ಜಮ್ಮು ಕಾಶ್ಮೀರವನ್ನು ಭಾರತದ ಇತರ ಪ್ರದೇಶಗಳಿಗೆ ಸಂಪರ್ಕಿಸಲಿದೆ. ಈ ರೈಲ್ವೆ ಸೇತುವೆ ಪ್ಯಾರಿಸ್ ನಲ್ಲಿರುವ ಪ್ರಸಿದ್ಧ ಐಫೆಲ್ ಟವರ್ ಗಿಂತ 35 ಮೀಟರ್ ಎತ್ತರವಿದೆ ಎಂದರೆ ನಿಮಗೆ ಅಂದಾಜು ಸಿಗಬಹುದು.

ಒಟ್ಟು 1 ಪಾಯಿಂಟ್ ಮೂರು ಕಿಲೋಮೀಟರ್ ಉದ್ದವಿರುವ ಈ ಸೇತುವೆ ಕಾಟ್ರಾದಿಂದ ಬನಿಹಾಲ್ ವರೆಗೆ 111 ಕಿಲೋಮೀಟರ್ ಸಂಚಾರಕ್ಕೆ ಸಂಪರ್ಕವಾಗಲಿದೆ. 2023 ಡಿಸೆಂಬರ್ ಅಥವಾ ಜನವರಿ 2024 ರಿಂದ ಇಲ್ಲಿ ರೈಲು ಸಂಚಾರ ಅಧಿಕೃತವಾಗಿ ಆರಂಭವಾಗಲಿದ್ದು, ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಹ ಸಂಚರಿಸಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read