HomeLatest News‘ಸಿಲಿಂಡರ್’ನಲ್ಲಿ ಗ್ಯಾಸ್ ಎಷ್ಟಿದೆ ಅಂತ ಚೆಕ್ ಮಾಡೋದು ಬಹಳ ಸುಲಭ ! ಇಲ್ಲಿದೆ ಸಿಂಪಲ್ ಟ್ರಿಕ್ಸ್...

‘ಸಿಲಿಂಡರ್’ನಲ್ಲಿ ಗ್ಯಾಸ್ ಎಷ್ಟಿದೆ ಅಂತ ಚೆಕ್ ಮಾಡೋದು ಬಹಳ ಸುಲಭ ! ಇಲ್ಲಿದೆ ಸಿಂಪಲ್ ಟ್ರಿಕ್ಸ್ |WATCH VIDEO

ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಅಕಸ್ಮಾತ್ತಾಗಿ ಗ್ಯಾಸ್ ಖಾಲಿಯಾದರೆ ಆಗುವ ಕಿರಿಕಿರಿ ಅಷ್ಟಿಷ್ಟಲ್ಲ. ಅದರಲ್ಲೂ ಅತಿಥಿಗಳು ಬಂದಾಗ ಅಥವಾ ತುರ್ತಾಗಿ ಅಡುಗೆ ಮಾಡುವಾಗ ಗ್ಯಾಸ್ ನಿಂತುಹೋದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಕಬ್ಬಿಣದ ಸಿಲಿಂಡರ್‌ಗಳು ಪಾರದರ್ಶಕವಾಗಿಲ್ಲದ ಕಾರಣ, ಒಳಗೆ ಅನಿಲ ಎಷ್ಟಿದೆ ಎಂದು ತಿಳಿಯುವುದು ಹರಸಾಹಸವೇ ಸರಿ. ಆದರೆ ಇನ್ನು ಮುಂದೆ ನೀವು ಚಿಂತಿಸಬೇಕಿಲ್ಲ; ಸಿಲಿಂಡರ್ ಒಳಗೆ ಎಷ್ಟು ಗ್ಯಾಸ್ ಬಾಕಿ ಇದೆ ಎಂಬುದನ್ನು ಕೇವಲ 2 ನಿಮಿಷಗಳಲ್ಲಿ ಪತ್ತೆಹಚ್ಚಲು ಸೋಶಿಯಲ್ ಮೀಡಿಯಾದಲ್ಲಿ ಅದ್ಭುತವೊಂದು ಟ್ರಿಕ್ ವೈರಲ್ ಆಗುತ್ತಿದೆ. ಬರೀ ಒಂದು ಹಸಿ ಬಟ್ಟೆಯನ್ನು ಬಳಸಿ ನಿಮ್ಮ ಸಿಲಿಂಡರ್‌ನ ಗ್ಯಾಸ್ ಮಟ್ಟವನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು.

ಹಸಿ ಬಟ್ಟೆಯ ಮ್ಯಾಜಿಕ್ ಟ್ರಿಕ್

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿರುವ ಒಂದು ಸಣ್ಣ ಉಪಾಯದ ಮೂಲಕ ಕೆಲವೇ ನಿಮಿಷಗಳಲ್ಲಿ ಗ್ಯಾಸ್ ಮಟ್ಟವನ್ನು ತಿಳಿಯಬಹುದು:

  • ಮೊದಲಿಗೆ ಒಂದು ಬಟ್ಟೆಯನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿ, ಸಿಲಿಂಡರ್‌ನ ಸುತ್ತಲೂ ತೇವಗೊಳಿಸಿ.
  • ಎರಡು ನಿಮಿಷಗಳ ನಂತರ ಸಿಲಿಂಡರ್ ಅನ್ನು ಗಮನಿಸಿ.
  • ಸಿಲಿಂಡರ್‌ನ ಮೇಲ್ಭಾಗವು ಬೇಗನೆ ಒಣಗುತ್ತದೆ, ಆದರೆ ಗ್ಯಾಸ್ ಇರುವ ಭಾಗವು ಮಾತ್ರ ತೇವವಾಗಿಯೇ ಇರುತ್ತದೆ.
  • ಸಿಲಿಂಡರ್ ಒಳಗೆ ಗ್ಯಾಸ್ ದ್ರವರೂಪದಲ್ಲಿದ್ದು ತುಂಬಾ ತಂಪಾಗಿರುತ್ತದೆ. ಹಾಗಾಗಿ ಗ್ಯಾಸ್ ಇರುವ ಭಾಗದ ತೇವಾಂಶವು ಬೇಗನೆ ಆರುವುದಿಲ್ಲ. ಎಲ್ಲಿ ನೀರು ಆರಿ ಒಣಗಿದಂತೆ ಕಾಣಿಸುತ್ತದೆಯೋ, ಅಲ್ಲಿ ಗ್ಯಾಸ್ ಇಲ್ಲ ಎಂದು ಅರ್ಥ.

ಮತ್ತೆ ಕೆಲವು ಸುಲಭ ಮಾರ್ಗಗಳು

  • ಬಿಸಿ ನೀರಿನ ಪ್ರಯೋಗ: ಒಂದು ಗ್ಲಾಸ್ ಬಿಸಿ ನೀರನ್ನು ಸಿಲಿಂಡರ್ ಮೇಲ್ಭಾಗದಿಂದ ನಿಧಾನವಾಗಿ ಸುರಿಯಿರಿ. ಆ ನಂತರ ಸಿಲಿಂಡರ್ ಅನ್ನು ಮೇಲಿನಿಂದ ಕೆಳಕ್ಕೆ ಕೈಯಿಂದ ಮುಟ್ಟಿ ನೋಡಿ. ಮೇಲೆ ಬಿಸಿಯಾಗಿದ್ದರೂ, ಎಲ್ಲಿ ತಂಪಾಗಿ ಅನಿಸುತ್ತದೆಯೋ ಅಲ್ಲಿ ಗ್ಯಾಸ್ ಇದೆ ಎಂದು ಅರ್ಥ.
  • ತೂಕದ ಪರೀಕ್ಷೆ: ಗ್ಯಾಸ್ ಸಿಲಿಂಡರ್ ಮೇಲೆ ಅದರ ಖಾಲಿ ತೂಕವನ್ನು ಮುದ್ರಿಸಲಾಗಿರುತ್ತದೆ. ಉದಾಹರಣೆಗೆ ಖಾಲಿ ಸಿಲಿಂಡರ್ ತೂಕ 15.5 ಕೆ.ಜಿ. ಎಂದುಕೊಳ್ಳೋಣ. ನೀವು ತೂಕ ಮಾಡಿದಾಗ 20 ಕೆ.ಜಿ. ಬಂದರೆ ಅದರಲ್ಲಿ ಸುಮಾರು 4.5 ಕೆ.ಜಿ. ಗ್ಯಾಸ್ ಇದೆ ಎಂದು ಅರ್ಥ. ಸಾಮಾನ್ಯವಾಗಿ ಹೊಸ ಸಿಲಿಂಡರ್‌ನಲ್ಲಿ 14.2 ಕಿಲೋ ಗ್ಯಾಸ್ ಇರುತ್ತದೆ.

ಗಮನಿಸಿ: ಸಿಲಿಂಡರ್ ಮಟ್ಟವನ್ನು ತಪಾಸಣೆ ಮಾಡುವಾಗ ರೆಗ್ಯುಲೇಟರ್ ಆಫ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ. ಗ್ಯಾಸ್ ಮುಗಿಯುವ ಕನಿಷ್ಠ ಎರಡು-ಮೂರು ದಿನಗಳ ಮುಂಚೆಯೇ ಈ ವಿಧಾನಗಳ ಮೂಲಕ ಪರೀಕ್ಷಿಸಿದರೆ, ಮುಂಚಿತವಾಗಿ ಸಿಲಿಂಡರ್ ಬುಕ್ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಅಡುಗೆಯ ಮಧ್ಯೆ ಉಂಟಾಗುವ ಅಡಚಣೆಯನ್ನು ತಪ್ಪಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

View this post on Instagram

A post shared by Ashish Salve (@salve_6717)

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular