ನೀವು ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯ ಉದ್ಯೋಗಿಯೇ? ಹಾಗಿದ್ದರೆ ನಿಮ್ಮ ಭವಿಷ್ಯದ ಆರ್ಥಿಕ ಭದ್ರತೆಗೆ ಇರುವ ಅತಿ ದೊಡ್ಡ ಆಸರೆ ಎಂದರೆ ಅದು ನೌಕರರ ಭವಿಷ್ಯ ನಿಧಿ (EPF). ಕೇಂದ್ರ ಸರ್ಕಾರದ ಕಾರ್ಮಿಕರ ಭವಿಷ್ಯ ನಿಧಿ ಪ್ರಾಧಿಕಾರವು (EPFO) ನಿರ್ವಹಿಸುವ ಈ ಯೋಜನೆ, ಇಂದು ಕೋಟ್ಯಂತರ ಉದ್ಯೋಗಿಗಳ ಬದುಕಿಗೆ ಭದ್ರತೆ ನೀಡುತ್ತಿದೆ.
ಏನಿದು ಇಪಿಎಫ್?
ಪ್ರತಿ ತಿಂಗಳು ನಿಮ್ಮ ಸಂಬಳದಲ್ಲಿ ಸಣ್ಣ ಮೊತ್ತದ ಹಣ ಕಡಿತವಾಗಿ ಇಪಿಎಫ್ ಖಾತೆಗೆ ಜಮೆಯಾಗುತ್ತದೆ. ಅಷ್ಟೇ ಮೊತ್ತದ ಹಣವನ್ನು ನಿಮ್ಮ ಕಂಪನಿಯೂ ಸಹ ಹೂಡಿಕೆ ಮಾಡುತ್ತದೆ. ನಿಮ್ಮ ನಿವೃತ್ತಿಯ ನಂತರ ಅಥವಾ ತುರ್ತು ಸಂದರ್ಭಗಳಲ್ಲಿ ದೊಡ್ಡ ಮೊತ್ತದ ಹಣ ನಿಮ್ಮ ಕೈ ಸೇರುವಂತೆ ಮಾಡುವುದೇ ಈ ಯೋಜನೆಯ ಮುಖ್ಯ ಉದ್ದೇಶ.
ಡಿಜಿಟಲ್ ಕ್ರಾಂತಿಯತ್ತ ಇಪಿಎಫ್‌ಒ
ಒಂದು ಕಾಲದಲ್ಲಿ ಪಿಎಫ್ ಹಣದ ಮಾಹಿತಿ ತಿಳಿಯಲು ಕಚೇರಿಗಳಿಗೆ ಅಲೆಯಬೇಕಿತ್ತು. ಆದರೆ ಈಗ ಕಾಲ ಬದಲಾಗಿದೆ. ದೇಶದ ಅತಿದೊಡ್ಡ ಹಣಕಾಸು ನಿರ್ವಹಣಾ ಸಂಸ್ಥೆಯಾದ ಇಪಿಎಫ್‌ಒ ತನ್ನ ಸದಸ್ಯರಿಗೆ ಸ್ಮಾರ್ಟ್ ಸೇವೆಗಳನ್ನು ನೀಡುತ್ತಿದೆ.
ಸರಳ ಸೇವೆ: ಇಂಟರ್ನೆಟ್ ಇಲ್ಲದೆಯೂ ಬ್ಯಾಲೆನ್ಸ್ ತಿಳಿಯುವ ಸೌಲಭ್ಯ.
ಪಾರದರ್ಶಕತೆ: ನಿಮ್ಮ ಖಾತೆಗೆ ಹಣ ಜಮೆಯಾದ ತಕ್ಷಣ ಮಾಹಿತಿ ಪಡೆಯುವ ಅವಕಾಶ.
ಯಾರಿಗೆಲ್ಲ ಈ ಸೌಲಭ್ಯ?
ಯಾವುದೇ ಸಂಸ್ಥೆಯಲ್ಲಿ ನಿಯಮಿತ ಉದ್ಯೋಗಿಯಾಗಿ (Regular Employee) ನೇಮಕವಾದ ಪ್ರತಿಯೊಬ್ಬರಿಗೂ ಈ ಯೋಜನೆ ಅನ್ವಯಿಸುತ್ತದೆ. ಇದು ಕೇವಲ ಉಳಿತಾಯವಲ್ಲ, ನಿಮ್ಮ ನಿವೃತ್ತಿ ನಂತರದ ಗೌರವಯುತ ಬದುಕಿಗೆ ಕೇಂದ್ರ ಸರ್ಕಾರ ನೀಡಿರುವ ದೊಡ್ಡ ಕೊಡುಗೆ.
ಮಿಸ್ಡ್ ಕಾಲ್ ಮೂಲಕ EPF ಬ್ಯಾಲೆನ್ಸ್ ಪರಿಶೀಲನೆ:
ನಿಮ್ಮ EPF ಖಾತೆಗೆ ಯುಎಎನ್ (UAN) ಸಂಪರ್ಕಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.9966044425 ನಂಬರ್‌ಗೆ ಮಿಸ್ಡ್ ಕಾಲ್ ಮಾಡಿ.ನಂತರ, EPFO ನಿಮ್ಮ ನೊಂದಾಯಿತ ಮೊಬೈಲ್ ನಂಬರ್‌ಕ್ಕೆ SMS ಮೂಲಕ ನಿಮ್ಮ EPF ಬ್ಯಾಲೆನ್ಸ್ ವಿವರಗಳನ್ನು ಕಳುಹಿಸಲಿದೆ.ಆದರೆ, ಈ ಸೇವೆಗಾಗಿ ನೀವು ತಮ್ಮ ಯುಎಎನ್, ಆಧಾರ್, ಪಾನ್ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಕಂಪನಿಯ ಮೂಲಕ EPFO ನಲ್ಲಿ ನೊಂದಾಯಿಸಿರಬೇಕು.ಈ ಸುಲಭ ವಿಧಾನದಿಂದ, EPF ಸದಸ್ಯರು ತಮ್ಮ ಪಿಎಫ್ ಖಾತೆಯ ಬ್ಯಾಲೆನ್ಸ್ ಮೊತ್ತವನ್ನು ಪ್ರತಿ ಸಮಯದಲ್ಲಿ ತ್ವರಿತವಾಗಿ ತಿಳಿದುಕೊಳ್ಳಬಹುದು.
EPF ಬ್ಯಾಲೆನ್ಸ್ ಚೆಕ್ ಮಾಡಲು EPFO ಪಾಸ್‌ಬುಕ್ ವೆಬ್‌ಸೈಟ್:
EPFO ಪಾಸ್‌ಬುಕ್ ಪೋರ್ಟಲ್‌ಗೆ ಹೋಗಿ https://passbook.epfindia.gov.in/MemberPassBook/Login,
ಲಾಗಿನ್ ಮಾಡಲು:UAN ನಂಬರ್ (UAN ನಂಬರ್) ನಮೂದಿಸಿ.ಪಾಸ್ವರ್ಡ್ ನಮೂದಿಸಿ.ಕ್ಯಾಪ್ಚಾ ವರ್ಸನ್ಸ್ ಅನ್ನು ಸರಿಯಾಗಿ ನಮೂದಿಸಿ.
ನೀವು ಲಾಗಿನ್ ಆದ ಮೇಲೆ, ನಿಮ್ಮ EPF ಖಾತೆಯ ಬ್ಯಾಲೆನ್ಸ್ ಮತ್ತು ಇತರೆ ವಿವರಗಳನ್ನು ಪಾಸ್‌ಬುಕ್‌ನಲ್ಲಿ ನೋಡಬಹುದು.
ನೀವು PDF ರೂಪದಲ್ಲಿ ಪಾಸ್‌ಬುಕ್ ಡೌನ್‌ಲೋಡ್ ಮಾಡಿಕೊಂಡು, ಅದರ ಪ್ರಿಂಟ್‌ಔಟ್ ತೆಗೆದು ನಿಮ್ಮ ದಾಖಲೆಯಾಗಿ ಫೈಲ್ ಮಾಡಿಕೊಳ್ಳಬಹುದು.
ಈ ವಿಧಾನವು EPF ಖಾತೆಯ ಎಲ್ಲ ವಿವರಗಳನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ಪರಿಶೀಲಿಸಲು ಸಹಾಯಕವಾಗಿದೆ.
SMS ಮೂಲಕ
SMS ಮೂಲಕ ತಿಳಿದುಕೊಳ್ಳಲು, ನೀವು 7738299899 ಸಂಖ್ಯೆಗೆ EPFOHO ಎಂದು ಟೈಪ್ ಮಾಡಿ, ಒಂದು ಸ್ಪೇಸ್ ಬಿಟ್ಟು UAN ಸಂಖ್ಯೆಯನ್ನು ನಮೂದಿಸಬೇಕು. ಇಲ್ಲಿಯೂ ಸಹ, ನೀವು ಪಿಎಫ್ ಬ್ಯಾಲೆನ್ಸ್‌ನಂತಹ ವಿವರಗಳನ್ನು ಸಂದೇಶದ ರೂಪದಲ್ಲಿ ಪಡೆಯಬಹುದು.

