HomeEntertainmentಪ್ರೇಮಿಗಳ ದಿನಾಚರಣೆಗೆ ‘ಯುಐʼ ಹಾಡಿನ ಪ್ರೋಮೊ ಔಟ್ : ಮತ್ತೆ ಮೆದುಳಿಗೆ ಕೈ ಹಾಕಿದ ಉಪ್ಪಿ

ಪ್ರೇಮಿಗಳ ದಿನಾಚರಣೆಗೆ ‘ಯುಐʼ ಹಾಡಿನ ಪ್ರೋಮೊ ಔಟ್ : ಮತ್ತೆ ಮೆದುಳಿಗೆ ಕೈ ಹಾಕಿದ ಉಪ್ಪಿ

ಬೆಂಗಳೂರು : ಪ್ರೇಮಿಗಳ ದಿನಾಚರಣೆಗೆ ‘ಯುಐ’ ಚಿತ್ರದ ಚೀಪ್ ಸಾಂಗ್ ಪ್ರೋಮೋ ರಿಲೀಸ್ ಆಗಿದ್ದು, ಉಪ್ಪಿ ವಿಚಿತ್ರ ಹಾಡಿಗೆ ಫ್ಯಾನ್ಸ್ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ.

ಎಲ್ಲ ಚೀಪ್ ಚೀಪ್. ನಂದು ತುಂಬ ದೊಡ್ಡದು. ಅವನಿಗಿಂತ ನಿಂದು ಚಿಕ್ಕದು. ನಿಂದು ತುಂಬ ಚಿಕ್ಕದು. ಇವನಿಗಿಂತ ಅವನ್ದು ದೊಡ್ಡದು. ಎಲ್ಲ ಚೀಪ್ ಚೀಪ್..’ ಎಂಬ ಸಾಲುಗಳು ಈ ಹಾಡಿನಲ್ಲಿದ್ದು, ಸಾಂಗ್ ಕೇಳಿದ ಅಭಿಮಾನಿಗಳು ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ಉಪ್ಪಿ..ಅಂದರೆ ಡಿಫರೆಂಟ್..ಬಿಡಿ..ಸಿನಿಮಾ ಆಗಲಿ ಹಾಡು ಆಗಲಿ ಅವರು ಯಾವಾಗಲೂ ಡಿಫರೆಂಟ್ ಆಗಿ ಕೊಡೋದು ಎಂದು ಅಭಿಮಾನಿಗಳು ಹೇಳ್ತಿದ್ದಾರೆ. ಅಜನೀಶ್ ಬಿ. ಲೋಕನಾಥ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.

ಟೀಸರ್ ಮೂಲಕವೇ ‘ಯುಐ’ ಸಿನಿಮಾ ಬಹಳ ನಿರೀಕ್ಷೆ ಮೂಡಿದ್ದು, ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿದೆ. ನಟ ಉಪೇಂದ್ರ ಅವರೇ ಈ ಸಿನಿಮಾವನ್ನು ನಿರ್ದೇಶಿಸಿ ನಟಿಸುತ್ತಿದ್ದು, ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಮೂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular