HomeKarnatakaBREAKING NEWS: ನೂತನ ಪಿಡಿಒ ಗಳಿಗೆ ಬಿಗ್ ಶಾಕ್: 20 ಪಿಡಿಒ ಗಳ ನೇಮಕಾತಿ ಆದೇಶ...

BREAKING NEWS: ನೂತನ ಪಿಡಿಒ ಗಳಿಗೆ ಬಿಗ್ ಶಾಕ್: 20 ಪಿಡಿಒ ಗಳ ನೇಮಕಾತಿ ಆದೇಶ ರದ್ದುಗೊಳಿಸಿದ ಸರ್ಕಾರ

ಬೆಂಗಳೂರು: ಚನ್ನಪಟ್ಟಣ ಕ್ಷೇತ್ರಕ್ಕೆ ಹೆಚ್ಚುವರಿ ಪಿಡಿಒಗಳ ನಿಯೀಜನೆ ಆದೇಶವನ್ನು ರಾಜ್ಯ ಸರ್ಕಾರ ರದ್ದುಗೊಲಿಸಿದೆ.

ರಾಮನಗರ ಜಿಲ್ಲೆಯ ಚನ್ನಪಟ್ತನ ವಿಧನಸಭಾ ಕ್ಷೇತ್ರಕ್ಕೆ ಹೆಚ್ಚುವರಿ 20 ಪಿಡಿಒಗಳನ್ನು ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿತ್ತು. ಈ ಆದೇಶವನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ.

ಸರ್ಕಾರದಿಂದ ಅನುಮೋದನೆ ಪಡೆಯದೇ ನಿಯೋಜನೆ ಮಾಡಿದ್ದ ಹಿನ್ನೆಲೆಯಲ್ಲಿ ಹಾಗೂ ನಿಯೋಜನೆಗೂ ಮುನ್ನ ಇಲಾಖೆ ಆಯುಕ್ತರಿಂದ ಒಪ್ಪಿಗೆ ಪಡೆಯಬೇಕಿದ್ದ ಹಿನ್ನೆಲೆಯಲ್ಲಿ ಹೆಚ್ಚುವರಿ ಪಿಡಿಒ ನೇಮಕಾತಿ ಆದೇಶ ರದ್ದುಗೊಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಿಸಿಎಂ ಡಿ.ಕೆ.ಶಿವಕುಮಾರ್ ಪತ್ರ ಬರೆದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಜಿಲ್ಲಾಮಟ್ಟದ ಸಿಇಒ ಹಂತದಲ್ಲಿ 20 ಪಿಡಿಒ ನೇಮಕ ಮಾಡಲಾಗಿತ್ತು . ಇದೀಗ ಆದೇಶಕ್ಕೆ ತಡೆ ನೀಡಿ ಆರ್ ಡಿ ಪಿ ಆರ್ ಆಯುಕ್ತೆ ಅರುಂಧತಿ ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ

 

For Latest News Updates, Join Our Whatsapp Community🚩
RELATED ARTICLES

Most Popular