ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯ (Youths) ಮಧ್ಯೆ ಸಂಖ್ಯಾಶಾಸ್ತ್ರ ಅಥವಾ ಅಂಕರೇಖಾ ಶಾಸ್ತ್ರ (Numerology) ಸಖತ್ ಚರ್ಚೆಯ ವಿಷಯವಾಗಿದೆ. ಆದರೆ ಹೆಸರಿಗೂ ಮತ್ತು ಸಂಖ್ಯೆಗಳಿಗೂ ಇರೋ ಕನೆಕ್ಷನ್ ಏನು? ಇದು ನಮ್ಮ ಲೈಫ್ ಮೇಲೆ ಹೇಗೆ ಎಫೆಕ್ಟ್ ಮಾಡುತ್ತೆ ಅಂತ ನಿಮಗೆ ಗೊತ್ತಾ?ಅದೆಷ್ಟೋ ಜನ ಜ್ಯೋತಿಷಿಗಳು ಅಥವಾ ಸಂಖ್ಯಾಶಾಸ್ತ್ರಜ್ಞರನ್ನು ಕನ್ಸಲ್ಟ್ ಮಾಡಿದ ಮೇಲೆ ತಮ್ಮ ಹೆಸರಿನ ಸ್ಪೆಲ್ಲಿಂಗ್ ಬದಲಾಯಿಸಿಕೊಳ್ಳೋದನ್ನು ನೀವು ನೋಡಿರ್ತೀರಾ. ಹೆಸರಿನ ಮಧ್ಯೆ ಒಂದು ಎಕ್ಸ್‌ಟ್ರಾ ಅಕ್ಷರ ಸೇರಿಸುವುದರಿಂದ ಹಿಡಿದು, ಉಚ್ಚಾರಣೆಯನ್ನು ಕೊಂಚ ಬದಲಾಯಿಸಿಕೊಳ್ಳುವವರೆಗೆ ಈ ಸಣ್ಣ ಬದಲಾವಣೆ ತಮ್ಮ ಅದೃಷ್ಟ, ಯಶಸ್ಸು ಮತ್ತು ಜೀವನದ ಹಾದಿಯನ್ನೇ ಬದಲಾಯಿಸುತ್ತದೆ ಎಂದು ಹಲವರು ಬಲವಾಗಿ ನಂಬುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರ ನಿಜವಾಗಿಯೂ ಇದನ್ನು ಒಪ್ಪುತ್ತಾ? ಇದರ ಹಿಂದಿನ ಲೆಕ್ಕಾಚಾರ ಏನು?
ಜ್ಯೋತಿಷ್ಯ ತಜ್ಞರ ಪ್ರಕಾರ ಹೆಸರಿನ ತಿದ್ದುಪಡಿ ಎಂಬುದು ಕೇವಲ ಹುಟ್ಟಿದ ದಿನಾಂಕವನ್ನು (Date of Birth) ಮಾತ್ರ ಅವಲಂಬಿಸಿರುವುದಿಲ್ಲ. ಇದರೊಂದಿಗೆ ವ್ಯಕ್ತಿಯ ರಾಶಿ (Rashi), ಜನ್ಮ ನಕ್ಷತ್ರ ಮತ್ತು ಜನ್ಮ ಕುಂಡಲಿಯಲ್ಲಿರುವ ಗ್ರಹಗಳ ಸ್ಥಾನವನ್ನು (Planetary Positions) ಕೂಡ ಸೂಕ್ಷ್ಮವಾಗಿ ಲೆಕ್ಕ ಹಾಕಲಾಗುತ್ತದೆ.
ಹೆಸರಿನ ಮೊದಲ ಅಕ್ಷರಕ್ಕಿರುತ್ತೆ ಬಿಗ್ ಪವರ್
ಜ್ಯೋತಿಷ್ಯದಲ್ಲಿ ಎಲ್ಲದಕ್ಕಿಂತ ಹೆಚ್ಚಾಗಿ ಹೆಸರಿನ ಮೊದಲ ಅಕ್ಷರಕ್ಕೆ ಅತ್ಯಂತ ಪ್ರಮುಖ ಸ್ಥಾನ ನೀಡಲಾಗಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯ ಹೆಸರಿನ ಮೊದಲ ಅಕ್ಷರವು ಆತ ಹುಟ್ಟಿದ ಸಮಯದಲ್ಲಿ ಚಂದ್ರನು ಇದ್ದ ನಕ್ಷತ್ರದ ಪಾದ ಮತ್ತು ಸ್ಥಾನಕ್ಕೆ ನೇರವಾಗಿ ಲಿಂಕ್ ಆಗಿರುತ್ತದೆ.
ಜ್ಯೋತಿಷಿಗಳ ಪ್ರಕಾರ, ಈ ಚಂದ್ರನ ಸ್ಥಾನದ ಆಧಾರದ ಮೇಲೆ ಹೆಸರನ್ನು ಇಡುವುದರಿಂದ ಅಥವಾ ತಿದ್ದುಪಡಿ ಮಾಡುವುದರಿಂದ ಈ ಕೆಳಗಿನ ಪ್ರಯೋಜನಗಳಿವೆ:
ಭಾವನಾತ್ಮಕ ಸಮತೋಲನ: ವ್ಯಕ್ತಿಯ ಎಮೋಷನಲ್ ಬ್ಯಾಲೆನ್ಸ್ ಸುಧಾರಿಸುತ್ತದೆ.
ಒತ್ತಡ ಮುಕ್ತಿ: ನಿರಂತರವಾಗಿ ಕಾಡುವ ಮಾನಸಿಕ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ.
ಮನಸ್ಸಿಗೆ ಶಾಂತಿ: ಮನಸ್ಸಿಗೆ ನೆಮ್ಮದಿ ಮತ್ತು ಸ್ಥಿರತೆಯನ್ನು ತಂದುಕೊಡುತ್ತದೆ.( ಜ್ಯೋತಿಷ್ಯದಲ್ಲಿ ಚಂದ್ರನನ್ನು ಮನಸ್ಸಿಗೆ ಕಾರಕ ಎಂದು ಕರೆಯಲಾಗುತ್ತದೆ, ಹಾಗಾಗಿ ಈ ಕನೆಕ್ಷನ್ ತುಂಬಾನೇ ಇಂಪಾರ್ಟೆಂಟ್)
ಗ್ರಹ ದೋಷಗಳನ್ನು ಕಡಿಮೆ ಮಾಡುತ್ತಾ ಹೆಸರಿನ ಮ್ಯಾಜಿಕ್?
ಕೆಲವು ಜ್ಯೋತಿಷಿಗಳ ನಂಬಿಕೆಯ ಪ್ರಕಾರ, ಕುಂಡಲಿಗೆ ಪೂರಕವಾಗಿ ಸರಿಯಾಗಿ ಜೋಡಿಸಲಾದ ಹೆಸರುಗಳು ಜನ್ಮ ಜಾತಕದಲ್ಲಿರುವ ಸಣ್ಣಪುಟ್ಟ ಗ್ರಹಗಳ ಅಸಮತೋಲನ ಅಥವಾ ಕುಂಡಲಿ ದೋಷಗಳ ಪ್ರಭಾವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದು ದೋಷಗಳಿಗೆ ಮಾಡುವ ಸಂಪೂರ್ಣ ಪರಿಹಾರವಲ್ಲದಿದ್ದರೂ, ಜೀವನದಲ್ಲಿ ಪದೇ ಪದೇ ಎದುರಾಗುವ ಅಡೆತಡೆಗಳನ್ನು ಕಡಿಮೆ ಮಾಡಲು ಮತ್ತು ಬದುಕಿನಲ್ಲಿ ಒಂದು ಪಾಸಿಟಿವ್ ಹಾರ್ಮೋನಿ (ಸಾಮರಸ್ಯ) ಸೃಷ್ಟಿಸಲು ಒಂದು ಸೂಕ್ಷ್ಮ ಮಾರ್ಗವಾಗಿ ಕೆಲಸ ಮಾಡುತ್ತದೆ.
ಜ್ಯೋತಿಷ್ಯದ ಮತ್ತೊಂದು ಪ್ರಮುಖ ನಂಬಿಕೆಯೆಂದರೆ, ನಿಮ್ಮ ಹೆಸರನ್ನು ಇತರರು ಹೇಗೆ ಉಚ್ಚರಿಸುತ್ತಾರೆ (Pronounce) ಎಂಬುದು ಕೂಡ ಅಷ್ಟೇ ಮುಖ್ಯ. ನಿಮ್ಮ ಹೆಸರನ್ನು ಸರಿಯಾಗಿ ಮತ್ತು ಸಕಾರಾತ್ಮಕವಾಗಿ ಉಚ್ಚರಿಸಿದಾಗ, ಅದು ನಿಮ್ಮ ಸುತ್ತಲೂ ಒಂದು ಅದ್ಭುತವಾದ ಪಾಸಿಟಿವ್ ಎನರ್ಜಿ ಫೀಲ್ಡ್ (ಶಕ್ತಿ ವಲಯ) ಅನ್ನು ಸೃಷ್ಟಿಸುತ್ತದೆ. ಇದು ನಿಧಾನವಾಗಿ ನಿಮ್ಮೊಳಗಿನ ನೆಗೆಟಿವಿಟಿಯನ್ನು ದೂರ ಮಾಡಿ, ನಿಮ್ಮ ಆತ್ಮವಿಶ್ವಾಸವನ್ನು ರಾಕೆಟ್ ವೇಗದಲ್ಲಿ ಹೆಚ್ಚಿಸಲು ಬೂಸ್ಟರ್ ಆಗಿ ಕೆಲಸ ಮಾಡುತ್ತದೆ.

