HomeLatest Newsಸಂಸದ ಚಂದ್ರಶೇಖರ್ ಆಜಾದ್ ಗೆ ಕೊಲೆ ಬೆದರಿಕೆ: FIR ದಾಖಲು

ಸಂಸದ ಚಂದ್ರಶೇಖರ್ ಆಜಾದ್ ಗೆ ಕೊಲೆ ಬೆದರಿಕೆ: FIR ದಾಖಲು

ಲಖನೌ: ಆಜಾದ್ ಸಮಾಜ್ ಪಕ್ಷದ ಅಧ್ಯಕ್ಷ, ಉತ್ತರ ಪ್ರದೇಶದ ನಗಿನಾ ಲೋಕಸಭಾ ಸಂಸದ ಚಂದ್ರಶೇಖರ್ ಆಜಾದ್ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ.

ಹತ್ತು ದಿನಗಳಲ್ಲಿ ಹತ್ಯೆ ಮಾಡುವುದಾಗಿ ವಾಟ್ಸಾಪ್ ಮೂಲಕ ಕೊಲೆ ಬೆದರಿಕೆ ಸಂದೇಶ ಬಂದಿದ್ದು, ಈ ಹಿನ್ನೆಲೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಪಕ್ಷದ ಸಹಾಯವಾಣಿ ವಾಟ್ಸಪ್ ಸಂಖ್ಯೆಗೆ ಬೆದರಿಕೆ ಸಂದೇಶ ಬಂದಿರುವುದಾಗಿ ಕಾರ್ಯಕರ್ತ ಶೇಕ್ ಪರ್ವೇಜ್ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗಿನಾ ಠಾಣೆಯಲ್ಲಿ ಅಪರಿಚಿತ ವ್ಯಕ್ತಿ ವಿರುದ್ಧ ವಿವಿಧ ಸೆಕ್ಷಣ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular