HomeEntertainmentಚಂದನ ಗೌಡ ಅವರ ಪಾತ್ರದ ಪರಿಚಯ ಮಾಡಿದ 'ಸೋಮು ಸೌಂಡ್ ಇಂಜಿನಿಯರ್' ಚಿತ್ರತಂಡ

ಚಂದನ ಗೌಡ ಅವರ ಪಾತ್ರದ ಪರಿಚಯ ಮಾಡಿದ ‘ಸೋಮು ಸೌಂಡ್ ಇಂಜಿನಿಯರ್’ ಚಿತ್ರತಂಡ

ಶ್ರೇಷ್ಠ ಅಭಿನಯದ ‘ಸೋಮ ಸೌಂಡ್ ಇಂಜಿನಿಯರ್’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ‘ಸೋಮು ಸೌಂಡ್ ಇಂಜಿನಿಯರ್’ ಚಿತ್ರ ತಂಡ ಇಂದು ಚಂದನ ಗೌಡ ಅವರ ಪಾತ್ರವನ್ನು ರಿವೀಲ್ ಮಾಡಿದೆ. ಚಂದನ k ಗೌಡ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದು, ಮಂಜುಳಾ ಎಂಬ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಅಭಿ ನಿರ್ದೇಶನದ ಈ ಚಿತ್ರವನ್ನು ಕ್ರಿಸ್ತೋಪರ್ ಕಿನಿ ನಿರ್ಮಾಣ ಮಾಡಿದ್ದು, ಶ್ರೇಷ್ಠ ಸೇರಿದಂತೆ ನಿವಿಷ್ಕಾ ಪಾಟೀಲ್, ಜಹಾಂಗೀರ್, ಗಿರೀಶ್ ಜಟ್ಟಿ, ಅಪೂರ್ವ, ಯಶ್ ಶೆಟ್ಟಿ, ಚಂದನ್ ಗೌಡ ತೆರೆ ಹಂಚಿಕೊಂಡಿದ್ದಾರೆ. ವಿನೋದ್ ಹಾಗೂ ಜಾಲಿ ಬಸ್ಟಿನ್ ಸಾಹಸ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ, ಶಿವಸೇನಾ ಛಾಯಾಗ್ರಹಣ, ಮಾಸ್ತಿ ಮತ್ತು ಅಭಿ ಡೈಲಾಗ್ ಬರೆದಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular