HomeLatest Newsಮೇಲ್ಜಾತಿಯ ಡಿಕೆ ಬಿಟ್ಟು ಆ ಇಬ್ಬರು ದಲಿತರನ್ನು ಸಿಎಂ ಮಾಡಬಹುದಿತ್ತಲ್ಲ, ದಲಿತರೇ ಅಂಬೇಡ್ಕರ್ ಮೇಲೆ ಗೌರವವಿದ್ದರೆ...

ಮೇಲ್ಜಾತಿಯ ಡಿಕೆ ಬಿಟ್ಟು ಆ ಇಬ್ಬರು ದಲಿತರನ್ನು ಸಿಎಂ ಮಾಡಬಹುದಿತ್ತಲ್ಲ, ದಲಿತರೇ ಅಂಬೇಡ್ಕರ್ ಮೇಲೆ ಗೌರವವಿದ್ದರೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬನ್ನಿ; ಛಲವಾದಿ ನಾರಾಯಣಸ್ವಾಮಿ ಆಹ್ವಾನ

ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಬಿರುಗಾಳಿಯೇ ಎದ್ದಿದ್ದು, ಈ ಹಿಂದಿನಿಂದಲೂ ಕೇಳುತ್ತಾ ಬಂದಿದ್ದ ಕಾಂಗ್ರೆಸ್ ಮುಖ್ಯಮಂತ್ರಿ ಬದಲಾವಣೆ ವದಂತಿ ಸತ್ಯವಾಗಿಬಿಟ್ಟಿದೆ.

ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು, ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ.

ಡಿಕೆ ಯಾವಾಗ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನುವ ಮಾಹಿತಿ ಹೊರಬೀಳಬೇಕಿದೆ. ಹೀಗೆ ಮುಖ್ಯಮಂತ್ರಿ ಬದಲಾವಣೆಯಾದದ್ದರ ಕುರಿತು ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ವಿರೋಧ ಪಕ್ಷ ಬಿಜೆಪಿ ಎರಡೂ ಪಾಳಯಗಳಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದ್ದು, ರಾಜಕೀಯ ನಾಯಕರು ಹೇಳಿಕೆಗಳನ್ನು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಸಹ ಈ ಕುರಿತು ಮಾತನಾಡಿದ್ದು, ಕಾಂಗ್ರೆಸ್‌ನ ದಲಿತ ನಾಯಕರಿಗೆ ನಿಮಗೆ ನಿಮ್ಮ ಪಕ್ಷದಲ್ಲಿ ಬೆಲೆ ಹಾಗೂ ಗೌರವ ಇಲ್ಲ, ಹೀಗಾಗಿ ತಮ್ಮ ಬಿಜೆಪಿ ಪಕ್ಷಕ್ಕೆ ಬನ್ನಿ ಎಂದು ಆಹ್ವಾನಿಸಿದ್ದಾರೆ.

ಬೀದರ್‌ನಲ್ಲಿ ನಿನ್ನೆ ( ಮೇ 28 ) ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ‘ಎಂಟು ವರ್ಷಗಳ ಕಾಲ ರಾಜ್ಯವನ್ನು ಆಳಿರುವ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಹೈಕಮಾಂಡ್ ಕೆಟ್ಟದಾಗಿ ನಡೆಸಿಕೊಂಡಿದೆ. ನೀವು ರಾಜೀನಾಮೆ ಕೊಡಲೇಬೇಕು ಎಂದು ತಾಕೀತು ಮಾಡಿ ರಾಹುಲ್ ಗಾಂಧಿಯವರು ರಾಜೀನಾಮೆ ಕೊಡಿಸಿದ್ದಾರೆ, ಅದು ಅವರಿಗೆ ಬೇಸರವನ್ನುಂಟುಮಾಡಿದೆ ಎಂಬುದನ್ನು ಸಿದ್ದರಾಮಯ್ಯ ಅವರ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಎಂದರೆ ಕೇವಲ ಗಾಂಧಿ ಕುಟುಂಬನಾ? ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್ ಅಲ್ಲವೇ? ಹಾಗೆಯೇ ಇನ್ನೊಂದು ವಿಷಯ. ಮಲ್ಲಿಕಾರ್ಜುನ ಖರ್ಗೆಯವರಿಗೆ ಇರುವ ಅನುಭವಕ್ಕೆ ಅವರೇ ಬಂದು ಮುಖ್ಯಮಂತ್ರಿಯಾಗಬೇಕಿತ್ತು. ಏಕೆಂದರೆ ಆ ಎತ್ತರಕ್ಕೆ ಬೆಳೆದಿರುವಂತಹ ದಲಿತರು ಇನ್ಯಾರಿದ್ದಾರೆ? ಎಂಬತ್ತು ವರ್ಷಗಳ ಕಾಲ ಪರಿಶಿಷ್ಟ ಜಾತಿಯವರಿಗೆ ಅನ್ಯಾಯ ಮಾಡುತ್ತಾ ಬಂದಿದೆ. ಈ ಸರಿಯಾದರೂ ದಲಿತ ಮುಖ್ಯಮಂತ್ರಿಯಾಗುತ್ತಾರೆ ಎಂದುಕೊಂಡಿದ್ದೆವು. ಇಷ್ಟು ಮೆಜಾರಿಟಿ ಇರುವ ಸಮಯದಲ್ಲೇ ನೀವು ಮಾಡಲಾಗಲಿಲ್ಲ ಎಂದರೆ ಇನ್ನುಮುಂದೆ ಕರ್ನಾಟಕದಲ್ಲಿ ನೀವು ಅಧಿಕಾರಕ್ಕೆ ಬರಲ್ಲ ಎಂದಮೇಲೆ ಇನ್ಯಾವಾಗ ಅಧಿಕಾರ ಕೊಡುತ್ತೀರಿ? ಇದು ವಂಚನೆ ಅಲ್ಲವೇ? ಮಲ್ಲಿಕಾರ್ಜುನ ಖರ್ಗೆ ಸಾಹೇಬರೇ ಮುಖ್ಯಮಂತ್ರಿಗಳಾಗಿ ಬರಬೇಕಿತ್ತು. ಅದು ಆಗಲಿಲ್ಲ ಎಂದರೆ ಪರಮೇಶ್ವರ್‌ಗೆ ಕೊಡಬೇಕಿತ್ತು, ಇಲ್ಲವೇ ಕೆಎಚ್ ಮುನಿಯಪ್ಪ ಅವರಿಗೆ ಕೊಡಬೇಕಿತ್ತು. ದಲಿತ ಮುಖಂಡರು ಬೇಕಾದಷ್ಟು ಜನರು ಇದ್ದಾರಲ್ಲ. ಇದನ್ನೆಲ್ಲ ಬಿಟ್ಟು ಮೇಲ್ಜಾತಿಯವರನ್ನೇ ಸಿಎಂ ಮಾಡುತ್ತೀರ ಎನ್ನುವುದಾದರೆ ದಲಿತರ ಬಗ್ಗೆ ನೀವು ಚಿಂತೆ ಮಾಡುತ್ತೀರೋ ಇಲ್ಲವೋ? ಹೀಗೆ ಕಾಂಗ್ರೆಸ್ ದಲಿತರಿಗೆ ಮೋಸ ಮಾಡಿದ ಮೇಲೆ ದಲಿತರು ಕಾಂಗ್ರೆಸ್‌ನಲ್ಲಿ ಯಾಕಿರಬೇಕು? ಬಾಬಾ ಸಾಹೇಬ್ ಅಂಬೇಡ್ಕರ್ ಆ ಕಾಲದಲ್ಲೇ ಕಾಂಗ್ರೆಸ್ ಸುಡುವ ಮನೆ ನಿಮಗೆ ಇಲ್ಲಿ ಭವಿಷ್ಯ ಇಲ್ಲ, ಬೇರೆ ಪಕ್ಷಗಳನ್ನು ಹುಡುಕಿಕೊಳ್ಳಿ ಎಂದು ಹೇಳಿದ್ದು ಸದ್ಯವಾಯ್ತಲ್ಲ. ಕಾಂಗ್ರೆಸ್‌ನ ದಲಿತರ ನಾಯಕರಿಗೆ ಇವಾಗಲೂ ಹೇಳುತ್ತೇನೆ. ಇನ್ನೂ ಕಾಲ ಮಿಂಚಿಲ್ಲ, ನಿಮಗೆ ಅಂಬೇಡ್ಕರ್ ಅವರ ಮೇಲೆ ಗೌರವವಿದ್ದರೆ, ನಿಮ್ಮ ಸ್ವಾಭಿಮಾನದ ಬದುಕನ್ನು ಬದುಕಬೇಕು ಎಂದುಕೊಂಡಿದ್ದರೆ ಬಿಜೆಪಿಗೆ ದಯವಿಟ್ಟು ಬನ್ನಿ’ ಎಂದು ಕರೆಕೊಟ್ಟಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular