ಚೈತ್ರ ನವರಾತ್ರಿ: ಕೇವಲ ಎರಡು ಚಮಚ ನೀರು, ಮೊಸರು ಸೇವಿಸುತ್ತಾ ಒಂಬತ್ತು ದಿನ ಧ್ಯಾನೋಪವಾಸ ಮಾಡಿದ ಆದಿಶಕ್ತಿ ಮಾತೆಯ ಭಕ್ತ

ಚೈತ್ರ ನವರಾತ್ರಿ ಇನ್ನೇನು ಅಂತ್ಯವಾಗಲಿದೆ. ಈ ಅವಧಿಯಲ್ಲಿ ಆದಿಶಕ್ತಿ ಮಾತೆಯನ್ನು ಸೂಕ್ತವಾಗಿ ಪೂಜಿಸುವ ಮಂದಿಗೆ ದೇವಿ ಹರಸುತ್ತಾಳೆ ಎಂಬ ನಂಬಿಕೆ ಇದೆ. ಪ್ರತಿಯೊಬ್ಬ ಭಕ್ತನಿಗೂ ದೇವರನ್ನು ಪೂಜಿಸುವ ತನ್ನದೇ ಮಾರ್ಗವಿದೆ.

ಆದಿಶಕ್ತಿ ಮಾತೆಯ ಪರಮ ಭಕ್ತನಾದ 32 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಒಂಬತ್ತು ದಿನಗಳ ಮಟ್ಟಿಗೆ ಕಠಿಣ ಉಪವಾಸದ ನೇಮ ಪಾಲಿಸಿದ್ದಾರೆ. ಪ್ರತಿನಿತ್ಯ ಕೇವಲ ಎರಡು ಚಮಚ ನೀರು ಹಾಗೂ ಎರಡು ಚಮಚ ಮೊಸರನ್ನು ಮಾತ್ರ ಸೇವನೆ ಮಾಡಿಕೊಂಡು ಕಾಲ ಕಳೆದುಕೊಂಡು ಬಂದಿದ್ದಾರೆ.

ಕಮಲೇಶ್ ಕುರ್ಮಿ ಹೆಸರಿನ ಈ ವ್ಯಕ್ತಿ ಮಧ್ಯ ಪ್ರದೇಶದ ಬುಂಡೇಲ್ಖಾಂಡ್‌ ಪ್ರದೇಶದ ದೇವೋರಿ ಬ್ಲಾಕ್‌ನ ಸುನಾ ಗ್ರಾಮದವರಾಗಿದ್ದಾರೆ. ತಮ್ಮ 9 ದಿನಗಳ ಉಪವಾಸದ ತಯಾರಿಯನ್ನು 15 ದಿನಗಳ ಹಿಂದೆಯೇ ಆರಂಭಿಸಿದ್ದಾರೆ ಕಮಲೇಶ್. ಹಂತಹಂತವಾಗಿ ತಮ್ಮ ಆಹಾರ ಸೇವನೆಯನ್ನು ಕಡಿಮೆಗೊಳಿಸುತ್ತಾ ಸಾಗಿದ ಕಮಲೇಶ್, ಚೈತ್ರ ನವರಾತ್ರಿ ಆರಂಭಗೊಳ್ಳುವ ಐದು ದಿನಗಳ ಮುಂಚೆ ಸಂಪೂರ್ಣವಾಗಿ ಅನ್ನಾಹಾರ ತ್ಯಜಿಸಿದ್ದಾರೆ.

ಚೈತ್ರ ನವರಾತ್ರಿಯ ಅಮವಾಸ್ಯೆ ಹಾಗೂ ಪ್ರತಿಪದಾದದ ದಿನಗಳಂದು ಮರದ ಕುರ್ಚಿಯೊಂದರ ಮೇಲೆ ಕುಳಿತ ಕಮ್ಲೇಶ್, ದುರ್ಗಾ ಮಾತೆಯ ಪ್ರತಿಮೆ ಮುಂದೆ ಕುಳಿತು ಧ್ಯಾನ ಮಾಡಿದ್ದಾರೆ. ಕಮ್ಲೇಶರ ಆಳವಾದ ಧ್ಯಾನಾಸಕ್ತತೆಯನ್ನು ನೋಡಲು ಗ್ರಾಮದ ಜನರು ಅವರ ಮನೆಗೆ ಮುಗಿಬಿದ್ದಿದ್ದರು.

ಕಳೆದ ವರ್ಷದಿಂದ ಈ ರೀತಿಯ ಕಠಿಣ ಧ್ಯಾನ ಹಾಗೂ ಉಪವಾಸದ ಆಚರಣೆಯನ್ನು ಆರಂಭಿಸಿದ್ದಾರೆ ಕಮ್ಲೇಶ್.

ವೃತ್ತಿಯಲ್ಲಿ ಶಿಲ್ಪಿಯಾಗಿರುವ ಕಮ್ಲೇಶ್, ದುರ್ಗಾ ಮಾತೆಯ ಮೂರ್ತಿಯನ್ನು ರಚಿಸಿ ತಮ್ಮ ಮುಂದೆ ಇಟ್ಟುಕೊಂಡು ಧ್ಯಾನ ಮಾಡುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read