HomeKarnatakaBREAKING: ಸಿಇಟಿ 2ನೇ ಸುತ್ತಿನ ಮುಂದುವರೆದ ಸೀಟು ಹಂಚಿಕೆ ಮುಂದೂಡಿಕೆ

BREAKING: ಸಿಇಟಿ 2ನೇ ಸುತ್ತಿನ ಮುಂದುವರೆದ ಸೀಟು ಹಂಚಿಕೆ ಮುಂದೂಡಿಕೆ

ಬೆಂಗಳೂರು: ಯುಜಿಸಿಇಟಿ-2024 ಎರಡನೇ ಮುಂದುವರಿದ ಸುತ್ತು ಅಂತಿಮ ಫಲಿತಾಂಶ ಪ್ರಕಟಣೆ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ.

ದಿನಾಂಕ 07-10-2024 ರಂದು ಎರಡನೇ ಮುಂದುವರಿದ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ ನಂತರ, ಎರಡನೇ ಸುತ್ತಿನಲ್ಲಿ ಶುಲ್ಕ ಪಾವತಿಸಿ ಛಾಯ್ಸ್-2 ಆಯ್ಕೆ ಮಾಡಿದ್ದ ಸುಮಾರು 140 ಅಭ್ಯರ್ಥಿಗಳ ಫಲಿತಾಂಶವು ತಾಂತ್ರಿಕ ಸಮಸ್ಯೆಯಿಂದಾಗಿ ಪ್ರಕಟಣೆಯಾಗಿಲ್ಲದಿರುವುದು ಕಂಡು ಬಂದಿರುತ್ತದೆ.

ಆದ್ದರಿಂದ ಎರಡನೇ ಮುಂದುವರಿದ ಸೀಟು ಹಂಚಿಕೆಯ ಅಂತಿಮ ಫಲಿತಾಂಶವು 08-10-2024 ರಂದು ಪ್ರಕಟವಾಗುವುದಿಲ್ಲ. ಫಲಿತಾಂಶ ಪ್ರಕಟಣೆಯ ದಿನಾಂಕವನ್ನು ಸದ್ಯದಲ್ಲಿಯೇ ತಿಳಿಸಲಾಗುವುದು. ಎರಡನೇ ಮುಂದುವರಿದ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆಯ ನಂತರದ ವೇಳಾಪಟ್ಟಿಯನ್ನು ಮಾರ್ಪಡಿಸಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular