HomeLatest Newsರೈತರಿಗೆ ಮುಖ್ಯ ಮಾಹಿತಿ : ಬೆಂಬಲ ಬೆಲೆ ಯೋಜನೆಯಡಿ ಹೆಸರು, ಉದ್ದಿನಕಾಳು ಖರೀದಿಗೆ ಕೇಂದ್ರಗಳ ಆರಂಭ

ರೈತರಿಗೆ ಮುಖ್ಯ ಮಾಹಿತಿ : ಬೆಂಬಲ ಬೆಲೆ ಯೋಜನೆಯಡಿ ಹೆಸರು, ಉದ್ದಿನಕಾಳು ಖರೀದಿಗೆ ಕೇಂದ್ರಗಳ ಆರಂಭ

ಧಾರವಾಡ : 2025-26 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಹೆಸರು ಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಾಲ್ಗೆ 8,768 ಹಾಗೂ ಉದ್ದಿನಕಾಳು ಉತ್ಪನ್ನವನ್ನು ರೂ.7,800 ರಂತೆಧಾರವಾಡ ಜಿಲ್ಲೆಯ ರೈತರಿಂದ ಮಾತ್ರ ಖರೀದಿಸಲು ಸರ್ಕಾರದಿಂದ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಹೆಸರುಕಾಳು ಮತ್ತು ಉದ್ದಿನಕಾಳು ಉತ್ಪನ್ನವನ್ನು ಖರೀದಿಸಲು ರೈತರ ನೋಂದಣಿಯು80 ದಿನಗಳವರೆಗೆ (ಸೆಪ್ಟಂಬರ್ 25, 2025 ರಿಂದ ಡಿಸೆಂಬರ್ 13, 2025) ನಡೆಯಲಿದ್ದು, ಖರೀದಿ ಅವಧಿ 90 ದಿನಗಳವರೆಗೆ (ಸೆಪ್ಟಂಬರ್ 25, 2025 ರಿಂದ ಡಿಸೆಂಬರ್ 23, 2025) ರವರಿಗೆ ನಡೆಯುತ್ತದೆ. ಎಂದು ಅವರು ತಿಳಿಸಿದ್ದಾರೆ.

ಹೆಸರುಕಾಳು ಖರೀದಿ ಕೇಂದ್ರದ ವಿವರ: ಧಾರವಾಡ
ತಾಲೂಕಿನ ಧಾರವಾಡ ಟಿ.ಎ.ಪಿ.ಸಿ.ಎಮ್.ಎಸ್ ಖರೀದಿ ಸಂಸ್ಥೆ (9916259625), ಉಪ್ಪಿನ ಬೆಟಗೇರಿ ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ (9620048221),
ಹೆಬ್ಬಳ್ಳಿ, ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ (9448424876) ಖರೀದಿ ಕೇಂದ್ರಗಳಾಗಿವೆ.
ಹುಬ್ಬಳ್ಳಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಾಲೂಕಿನ ಹುಬ್ಬಳ್ಳಿ ಟಿ.ಎ.ಪಿ.ಸಿ.ಎಮ್.ಎಸ್ ಖರೀದಿ ಸಂಸ್ಥೆ ( 6360506861), ಬ್ಯಾಹಟ್ಟಿ ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ ( 9986211378), ಹೆಬಸೂರ ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ (9945894870), ಕೋಳಿವಾಡ ನಂ-1 ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ (9945846878), ನೂಲ್ವಿ ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ (9743836535) ಖರೀದಿ ಕೇಂದ್ರಗಳಾಗಿವೆ.
ನವಲಗುಂದ

ತಾಲೂಕಿನ ಹೆಬ್ಬಾಳ ಪಿ.ಕೆ.ಪಿ.ಎಸ್ (9449065613), ತಿರ್ಲಾಪೂರ ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ (8494801475), ಆರೇಕುರಹಟ್ಟಿ ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ(9845822903), ಶಿರೂರ, ಮೊರಬ ಎಫ್.ಪಿ.ಓ ಖರೀದಿ ಸಂಸ್ಥೆ (9900189128), ಮೊರಬ ಕೆ.ಎಸ್.ಎಫ್.ಪಿ.ಓ ಖರೀದಿ ಸಂಸ್ಥೆ ( 9620107330), ಮೊರಬ ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ (8431012192), ಹಾಲಕುಸುಗಲ್ ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ ( 8123836380), ನವಲಗುಂದ ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ ( 9886491644), ಅಣ್ಣಿಗೇರಿ ಟಿ.ಎ.ಪಿ.ಸಿ.ಎಮ್.ಎಸ್ ನವಲಗುಂದ ಖರೀದಿ ಸಂಸ್ಥೆ( 8861008191), ಶಿರಕೋಳ ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ ( 8150834048) ಖರೀದಿ ಕೇಂದ್ರಗಳಾಗಿವೆ.

ಅಣ್ಣಿಗೇರಿ
ತಾಲೂಕಿನ ಅಣ್ಣಿಗೇರಿ ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ (7760184669), ಅಣ್ಣಿಗೇರಿ ಟಿ.ಎ.ಪಿ.ಸಿ.ಎಮ್.ಎಸ್ ಖರೀದಿ ಸಂಸ್ಥೆ ( 8861008191) ಖರೀದಿ ಕೇಂದ್ರಗಳಾಗಿವೆ.

ಕುಂದಗೋಳ
ತಾಲೂಕಿನ ಯಳಿವಾಳ ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ ( 9945163891), ಕುಂದಗೋಳನ ಯರಗುಪ್ಪಿ ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ ( 9845169206). ಖರೀದಿ ಕೇಂದ್ರಗಳಾಗಿವೆ.

ಉದ್ದಿನಕಾಳು ಖರೀದಿ ಕೇಂದ್ರದ ವಿವರ:
ಧಾರವಾಡ
ತಾಲೂಕಿನ ಧಾರವಾಡ ಟಿ.ಎ.ಪಿ.ಸಿ.ಎಮ್.ಎಸ್ ಖರೀದಿ ಸಂಸ್ಥೆ (9916259625),
ಉಪ್ಪಿನಬೇಟಗೇರಿ ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ ( 9620048221).
ಹುಬ್ಬಳ್ಳಿ
ತಾಲೂಕಿನ ಹುಬ್ಬಳ್ಳಿ ಟಿ.ಎ.ಪಿ.ಸಿ.ಎಮ್.ಎಸ್ ಖರೀದಿ ಸಂಸ್ಥೆ ( 6360506861).
ಕುಂದಗೋಳ
ತಾಲೂಕಿನ ಯರಗುಪ್ಪಿ ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ ( 9845169206).
ನವಲಗುಂದ
ತಾಲೂಕಿನ ನವಲಗುಂದ ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ (9886491644), ಅಣ್ಣಿಗೇರಿ ಟಿ.ಎ.ಪಿ.ಸಿ.ಎಮ್.ಎಸ್ ಖರೀದಿ ಸಂಸ್ಥೆ (8861008191).

ಹೆಸರುಕಾಳು ಹಾಗೂ ಉದ್ದಿನಕಾಳು ಖರೀದಿಸಲು ಅಗತ್ಯವಿರುವ ದಾಖಲೆಗಳು: ಆಧಾರ ಗುರುತಿನ ಚೀಟಿಯ ಮೂಲ ಪ್ರತಿ ಹಾಗೂ ಅದರ ನಕಲು ಪ್ರತಿ. ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ನಕಲು ಪ್ರತಿ.

ಹೆಸರುಕಾಳು ಹಾಗೂ ಉದ್ದಿನಕಾಳು ಖರೀದಿಸಲು ಅನುಸರಿಸುವ ಕ್ರಮಗಳು: ಚೆನ್ನಾಗಿ ಒಣಗಿರಬೇಕು, ತೇವಾಂಶವು ಶೇ.12 ಕ್ಕಿಂತ ಕಡಿಮೆ ಇರಬೇಕು. ಹೆಸರು ಕಾಲು ಉತ್ಪನ್ನವು ಗುಣಮಟ್ಟದ ಗಾತ್ರ, ಬಣ್ಣ ಮತ್ತು ಆಕಾರವನ್ನು ಹೊಂದಿರಬೇಕು. ಗಟ್ಟಿಯಾಗಿರಬೇಕು ಮತ್ತು ಮಣ್ಣಿನಿಂದ ಬೇರ್ಪಡಿಸಲ್ಪಟ್ಟು ಸ್ವಚ್ಛವಾಗಿರಬೇಕು, ಸಾಣಿಗೆಯಿಂದ ಸ್ವಚ್ಛಗೊಳಿಸಿರಬೇಕು. ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು.

ರೈತರಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಸಂಸ್ಥೆಯವರು ನೀಡುವ ಗೋಣಿ ಚೀಲದಲ್ಲಿ 50 ಕೆ.ಜಿ. ಪ್ರಮಾಣದಲ್ಲಿ ತುಂಬಬೇಕು. ಹೆಸರುಕಾಳು ಪ್ರತಿ ಎಕರೆಗೆ 3 ಕ್ವಿಂಟಾಲ್ನಂತೆ ಹಾಗೂ ಪ್ರತಿ ರೈತರಿಂದ ಗರಿಷ್ಟ 15 ಕ್ವಿಂಟಾಲ್ ವರೆಗೆ ಖರೀದಿ ಪ್ರಮಾಣ ನಿಗದಿಪಡಿಸಿ ಖರೀದಿಸಲಾಗುವುದು. ಸರ್ಕಾರದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ಗೆ 8,768 ಹಾಗೂ ಉದ್ದಿನಕಾಳು ರೂ.7,800 ರಂತೆ ಖರೀದಿಸಲಾಗುವುದು.
ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಮಾತ್ರ ಖರೀದಿಸಲಾಗುವುದು.

ಯಾವುದೇ ಸಂದರ್ಭದಲ್ಲಿ ರೈತರು ಮಧ್ಯವರ್ತಿಗಳ ಮೊರೆ ಹೋಗಬಾರದು. ಇದರ ಉಪಯೋಗವನ್ನು ರೈತರೇ ನೇರವಾಗಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಧಾರವಾಡ, ಹುಬ್ಬಳ್ಳಿ, ಕುಂದಗೋಳ, ಅಣ್ಣಿಗೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯವರನ್ನು ಹಾಗೂ ಶಾಖಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ (ಕೆಎಸ್ಸಿಎಮ್ಎಫ್) ಹುಬ್ಬಳ್ಳಿ (ದೂರವಾಣಿ ಸಂಖ್ಯೆ: 0836-2004419) ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಟಾಸ್ಕಪೋರ್ಸ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular