HomeLatest NewsBIG NEWS : 'ಆನ್‌ಲೈನ್ ಗೇಮಿಂಗ್' ನಿಯಮಗಳನ್ನು ಅಧಿಸೂಚಿಸಿದ ಕೇಂದ್ರ : ಮೇ 1 ರಿಂದಲೇ...

BIG NEWS : ‘ಆನ್‌ಲೈನ್ ಗೇಮಿಂಗ್’ ನಿಯಮಗಳನ್ನು ಅಧಿಸೂಚಿಸಿದ ಕೇಂದ್ರ : ಮೇ 1 ರಿಂದಲೇ ಜಾರಿ

ಭಾರತದಲ್ಲಿ ಹಣದ ಬೆಟ್ಟಿಂಗ್ ಒಳಗೊಂಡ ಆನ್‌ಲೈನ್ ಗೇಮ್‌ಗಳನ್ನು ನಿಷೇಧಿಸಲಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಕೆಲವು ತಿಂಗಳ ಹಿಂದೆಯೇ ಕಾನೂನು ತಂದಿತ್ತು. ಇದೀಗ ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಅಧಿಸೂಚಿಸಿದೆ .

ಕಳೆದ ವರ್ಷ ಸಂಸತ್ತಿನಲ್ಲಿ ಅಂಗೀಕಾರಗೊಂಡ **’ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ’**ಯನ್ನು ಜಾರಿಗೆ ತರಲು ಅಗತ್ಯವಿರುವ ನಿಯಮಗಳನ್ನು ಕೇಂದ್ರವು ಪ್ರಕಟಿಸಿದೆ. ಈ ಹೊಸ ಗೇಮಿಂಗ್ ನಿಯಮಗಳು ಮೇ 1, 2026 ರಿಂದ ಜಾರಿಗೆ ಬರಲಿವೆ ಎಂದು ತಿಳಿಸಲಾಗಿದೆ. ಇದರೊಂದಿಗೆ ‘ಆನ್‌ಲೈನ್ ಗೇಮಿಂಗ್ ಅಥಾರಿಟಿ’ಯನ್ನು ಸ್ಥಾಪಿಸುತ್ತಿರುವುದಾಗಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ತಿಳಿಸಿದೆ. ಯಾವ ಗೇಮ್ ಕಾನೂನುಬದ್ಧ ಮತ್ತು ಯಾವುದು ಕಾನೂನುಬಾಹಿರ ಎಂದು ನಿರ್ಧರಿಸುವ ಅಧಿಕಾರ ಈ ಅಥಾರಿಟಿಗೆ ಇರುತ್ತದೆ.

ಐಟಿ ಇಲಾಖೆಯ ಕಾರ್ಯದರ್ಶಿ ಎಸ್. ಕೃಷ್ಣನ್ ಅವರು ಮಾತನಾಡಿ, “ರಿಯಲ್ ಮನಿ (ಹಣದ) ಗೇಮ್‌ಗಳಲ್ಲದಿದ್ದರೆ ಹೆಚ್ಚಿನ ಗೇಮ್‌ಗಳಿಗೆ ಕಡ್ಡಾಯ ನೋಂದಣಿ ಅಗತ್ಯವಿಲ್ಲ. ಆದರೆ ಇ-ಸ್ಪೋರ್ಟ್ಸ್ ಗೇಮ್‌ಗಳು ಮಾತ್ರ ಕಾನೂನಿನ ಪ್ರಕಾರ ನೋಂದಾಯಿಸಿಕೊಳ್ಳಬೇಕಾಗುತ್ತದೆ,” ಎಂದು ಸ್ಪಷ್ಟಪಡಿಸಿದರು. ಒಂದು ಗೇಮ್ ಆನ್‌ಲೈನ್ ಮನಿ ಗೇಮ್ ಆಗಿದೆಯೇ ಅಥವಾ ಸೋಶಿಯಲ್ ಗೇಮ್ ಅಥವಾ ಇ-ಸ್ಪೋರ್ಟ್ಸ್ ಆಗಿದೆಯೇ ಎಂದು ನಿರ್ಧರಿಸುವುದು ಐಚ್ಛಿಕವಾಗಿರುತ್ತದೆ. ಆದರೆ, ಅಥಾರಿಟಿಯು ಸ್ವಯಂ ಪ್ರೇರಿತವಾಗಿ (Suo Moto) ಕ್ರಮ ಕೈಗೊಂಡಾಗ ಅಥವಾ ಕೇಂದ್ರ ಸರ್ಕಾರವು ನಿರ್ದಿಷ್ಟ ಸೋಶಿಯಲ್ ಗೇಮ್‌ಗಳನ್ನು ಅಧಿಸೂಚಿಸಿದಾಗ ಅವುಗಳ ಮಾನ್ಯತೆಯನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆನ್‌ಲೈನ್ ಗೇಮಿಂಗ್ ಅಥಾರಿಟಿ ಹೇಗೆ ಕೆಲಸ ಮಾಡುತ್ತದೆ?

ದೇಶದಲ್ಲಿ ಆನ್‌ಲೈನ್ ಗೇಮಿಂಗ್ ಕ್ಷೇತ್ರವನ್ನು ನಿಯಂತ್ರಿಸಲು ಕೇಂದ್ರವು ಈ ಅಥಾರಿಟಿಯನ್ನು ರಚಿಸಿದೆ. ಇದು ಆರು ಅಧಿಕಾರಿಗಳ ತಂಡದೊಂದಿಗೆ ಕಾರ್ಯನಿರ್ವಹಿಸಲಿದೆ:

ಅಧ್ಯಕ್ಷರು: ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ (ಎಕ್ಸ್ ಅಫಿಶಿಯೊ).

ಸದಸ್ಯರು: ಗೃಹ ಸಚಿವಾಲಯ, ಆರ್ಥಿಕ ವ್ಯವಹಾರಗಳ ಇಲಾಖೆ, ಮಾಹಿತಿ ಮತ್ತು ಪ್ರಸಾರ ಇಲಾಖೆ, ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಹಾಗೂ ನ್ಯಾಯಾಂಗ ಇಲಾಖೆಯ ಜಂಟಿ ಕಾರ್ಯದರ್ಶಿಗಳು ಎಕ್ಸ್ ಅಫಿಶಿಯೊ ಸದಸ್ಯರಾಗಿರುತ್ತಾರೆ.

ಕಳೆದ ವರ್ಷ ಆನ್‌ಲೈನ್ ಗೇಮಿಂಗ್ ನಿರ್ವಹಣೆಯನ್ನು ಅಪರಾಧವೆಂದು ಪರಿಗಣಿಸುವ ಬಿಲ್ ಅನ್ನು ಕೇಂದ್ರವು ಸಂಸತ್ತಿನಲ್ಲಿ ಮಂಡಿಸಿತ್ತು. ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಮಂಡಿಸಿದ ಈ ಬಿಲ್ ಧ್ವನಿ ಮತದ ಮೂಲಕ ಅಂಗೀಕಾರಗೊಂಡಿತ್ತು. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರವು ಈ ಕ್ರಮ ಕೈಗೊಂಡಿದೆ.

ದಂಡ ಮತ್ತು ಶಿಕ್ಷೆ:

ಈ ಬಿಲ್‌ನಲ್ಲಿ ಆನ್‌ಲೈನ್ ಗೇಮ್ಸ್ ಮತ್ತು ಇ-ಸ್ಪೋರ್ಟ್ಸ್ ನಡುವೆ ಸ್ಪಷ್ಟ ವ್ಯತ್ಯಾಸವನ್ನು ತೋರಿಸಲಾಗಿದೆ. ಒಂದು ವೇಳೆ ಗೇಮಿಂಗ್ ವೇದಿಕೆಗಳು ಈ ನಿಯಮಗಳನ್ನು ಉಲ್ಲಂಘಿಸಿದರೆ:3 ವರ್ಷಗಳ ಜೈಲು ಶಿಕ್ಷೆ ಅಥವಾ1 ಕೋಟಿ ರೂಪಾಯಿವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular