ಬೆಂಗಳೂರು : ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಂದ ಸುಮಾರು ₹16 ಲಕ್ಷ ಕೋಟಿಗೂ ಅಧಿಕ ಮೊತ್ತದ ವಸೂಲಾಗದ ಸಾಲವನ್ನು ‘ರೈಟ್ ಆಫ್’ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್‌ನಲ್ಲಿ ತಿಳಿಸಿದ್ದಾರೆ.
ಈ ಮಾಹಿತಿ ಹೊರಬೀಳುತ್ತಿದ್ದಂತೆ ದೇಶಾದ್ಯಂತ ವ್ಯಾಪಕ ಚರ್ಚೆ ಆರಂಭವಾಗಿದ್ದು, ಕೇವಲ ಬಂಡವಾಳಶಾಹಿಗಳ ಹಿತ ಕಾಯುವ ಕೇಂದ್ರ ಸರ್ಕಾರವು ಸಾಲದ ಸುಳಿಯಲ್ಲಿರುವ ರೈತರನ್ನು ಏಕೆ ಕಡೆಗಣಿಸುತ್ತಿದೆ ಎಂಬ ಪ್ರಶ್ನೆ ಎದ್ದಿದೆ. ಶ್ರೀಮಂತರ ಸಾಲಕ್ಕೆ ನೀಡುವ ಈ ರಿಯಾಯಿತಿ, ದೇಶದ ಬೆನ್ನೆಲುಬಾದ ರೈತರಿಗೆ ಏಕೆ ಸಿಗುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ಕೇವಲ ಶ್ರೀಮಂತರ ಅಭ್ಯುದಯವನ್ನು ಬಯಸುವ ಬಿಜೆಪಿ ಸರ್ಕಾರಕ್ಕೆ ಸಾಮಾನ್ಯ ರೈತರು ಏಕೆ ಕಾಣಿಸುವುದಿಲ್ಲ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ₹16 ಲಕ್ಷ ಕೋಟಿಗೂ ಅಧಿಕ ವಸೂಲಾಗದ ಸಾಲವನ್ನು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಂದ ರೈಟ್ ಆಫ್ ಮಾಡಲಾಗಿದೆ ಎಂದು ಸಂಸತ್‌ನಲ್ಲಿ ಹೇಳಿದ್ದಾರೆ.ಕೇವಲ ಶ್ರೀಮಂತರ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರವು ರೈತರ ಸಾಲವನ್ನು ಕೂಡ ಮನ್ನಾ ಮಾಡಲಿ. ಕೇವಲ ಶ್ರೀಮಂತರ ಅಭ್ಯುದಯವನ್ನು ಬಯಸುವ ಬಿಜೆಪಿ ಸರ್ಕಾರಕ್ಕೆ ಸಾಮಾನ್ಯ ರೈತರು ಏಕೆ ಕಾಣಿಸುವುದಿಲ್ಲ? ಎಂದು ಕಿಡಿಕಾರಿದ್ದಾರೆ.
ಬೆಳಗಾವಿಯನ್ನು ಐಟಿ-ಬಿಟಿ ಹಬ್ ಆಗಿ ಮಾಡುವುದು ನಮ್ಮ ಗುರಿ
ಬೆಳಗಾವಿಗೆ ತಂತ್ರಜ್ಞಾನ ಮತ್ತು ಉತ್ಪಾದನಾ ಕೇಂದ್ರಗಳನ್ನು ತರಲು ಈ ಹಿಂದೆ 750 ಎಕರೆ ಜಾಗವನ್ನು ಗುರುತಿಸಲಾಗಿತ್ತು. ಅದು ರಕ್ಷಣಾ ಇಲಾಖೆಗೆ ಸೇರಿದ ಜಾಗ. ಅದನ್ನು ಹಸ್ತಾಂತರ ಮಾಡುವಂತೆ ಕೋರಿ ಅವರಿಗೆ ನಿರಂತರವಾಗಿ ಪತ್ರ ಬರೆದು ಸ್ಥಿತಿಗತಿ ಬಗ್ಗೆ ಮಾಹಿತಿ ಕೇಳಿದರೂ ಈವರೆಗೂ ಉತ್ತರ ಬಂದಿಲ್ಲ. ಹೀಗಾಗಿ ಬೇರೆ ಜಾಗಕ್ಕೆ ಹುಡುಕಾಟ ನಡೆಸುತ್ತಿದ್ದೇವೆ. ನ್ಯಾನೋ ಜಿಸಿಸಿ, ಲೀಪ್ ಕಾರ್ಯಕ್ರಮಗಳನ್ನು ಬೆಳಗಾವಿ, ಹುಬ್ಬಳ್ಳಿ-ಧಾರವಾಡಗಳಲ್ಲಿ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಲೀಪ್ ಅಡಿ ಬೆಳಗಾವಿಯನ್ನು ಉತ್ಪಾದನೆ ಮತ್ತು ಜಿಸಿಸಿಗಳಿಗೆ ಪರಿಗಣಿಸಿದ್ದೇವೆ. ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಮಾಡಲು ಕಲಾಮಂದಿರವನ್ನು ಗುರುತಿಸಲಾಗಿದೆ. ಆದರೆ ಉದ್ಯಮಗಳಿಗೆ ಅನುಕೂಲವಾಗುವಂತೆ ನಗರ ಕೇಂದ್ರ ಭಾಗದಲ್ಲಿ ಸ್ಥಳವನ್ನು ಹುಡುಕುತ್ತಿದ್ದೇವೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿಯನ್ನು ಐಟಿ-ಬಿಟಿ ಹಬ್ ಆಗಿ ಮಾಡುವುದು ನಮ್ಮ ಗುರಿ. ಈಗಾಗಲೇ ಐಐಐಟಿ ಧಾರವಾಡದಲ್ಲಿ ಎಐ ಮತ್ತು ದೇಶದ ಮೊದಲ ಕ್ವಾಂಟಮ್ ಕಂಪ್ಯೂಟರ್ ಅನ್ನು ತಂದಿದ್ದೇವೆ. ಬೆಳಗಾವಿಯು ಉತ್ಪಾದನೆಗೆ ಬಹಳ ಪೂರಕವಾಗಿರುವುದರಿಂದ ಲೀಪ್ ಅಡಿಯಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಸ್ಥಳೀಯ ಮಟ್ಟದಲ್ಲಿ ಸಹಕಾರ ದೊರೆತರೆ ಇದು ಸಾಧ್ಯವಾಗಲಿದೆ. ಇನ್ನು ಎರಡುಮೂರು ತಿಂಗಳಲ್ಲಿ ಬೆಳಗಾವಿಯೊಂದಕ್ಕೇ ಪ್ರತ್ಯೇಕ ನೀಲನಕ್ಷೆ ನೀಡಲಿದ್ದೇವೆ. ಬೆಳಗಾವಿ ಟ್ಯಾಲೆಂಟ್ ಹಬ್ ಆಗಿ ಬೆಳೆಯುವಂತೆ ಮಾಡಲು ಶ್ರಮಿಸಲಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

