ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ ಅನಾರೋಗ್ಯ, ಗಂಭೀರ ಕಾಯಿಲೆಯಿಂದ ಬಳಲಿದ್ದಾರೆ ದಕ್ಷಿಣದ ಸ್ಟಾರ್‌ಗಳು…!

ಕೆಲವೊಂದು ಮಾರಕ ಗಂಭೀರ ಕಾಯಿಲೆಗಳು ಜನಸಾಮಾನ್ಯರು ಮಾತ್ರವಲ್ಲ ಸೆಲೆಬ್ರಿಟಿಗಳನ್ನೂ ಕಂಗೆಡಿಸಿವೆ. ಅದರಲ್ಲೂ ಚಿತ್ರರಂಗದ ಸ್ಟಾರ್‌ ನಟ ನಟಿಯರು ಸಹ ಇಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ನಟ-ನಟಿಯರ ಐಷಾರಾಮಿ ಜೀವನ ಶೈಲಿಯ ಜೊತೆಗೆ ಇಂತಹ ಕಾಯಿಲೆಗಳು ಕೂಡ ಜನರಲ್ಲಿ ಕುತೂಹಲ ಹುಟ್ಟುಹಾಕುತ್ತಿವೆ.

ಈ ಸೆಲೆಬ್ರಿಟಿಗಳಲ್ಲಿ ಅನೇಕರು ತಮ್ಮ ಗಂಭೀರ ಆರೋಗ್ಯ ಪರಿಸ್ಥಿತಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇನ್ನು ಕೆಲವರು ಅದನ್ನು ಗೌಪ್ಯವಾಗಿ ಇಟ್ಟಿರಬಹುದು. ಗಂಭೀರ ಕಾಯಿಲೆಗಳಿಗೆ ತುತ್ತಾಗಿರುವ ದಕ್ಷಿಣ ಭಾರತದ ತಾರೆಗಳು ಯಾರ್ಯಾರು ಅನ್ನೋದನ್ನು ನೋಡೋಣ.

ಶ್ರುತಿ ಹಾಸನ್

ದಕ್ಷಿಣದ ನಟಿ ಶ್ರುತಿ ಹಾಸನ್ ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ಗೆ(ಪಿಸಿಓಎಸ್‌) ತುತ್ತಾಗಿದ್ದರು. 2022ರ ಜೂನ್‌ನಲ್ಲಿ ಶ್ರುತಿ ಇದನ್ನು ಬಹಿರಂಗಪಡಿಸಿದ್ದರು. ಸರಿಯಾದ ಆಹಾರ, ವ್ಯಾಯಾಮ ಮತ್ತು ನಿದ್ದೆಯ ಕಡೆಗೆ ಗಮನಹರಿಸುತ್ತಿರುವುದಾಗಿ ಹೇಳಿದ್ದರು.

ಸಮಂತಾ ರುತ್ ಪ್ರಭು

ಪುಷ್ಪಾ ಸಿನೆಮಾ ಖ್ಯಾತಿಯ ನಟಿ ಸಮಂತಾ ರುತ್ ಪ್ರಭು ಕೂಡ ಆಟೋಇಮ್ಯೂನ್‌ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಯೋಸೈಟಿಸ್ ಎಂಬ ಅಪರೂಪದ ಸ್ವಯಂ ನಿರೋಧಕ ಅಸ್ವಸ್ಥತೆಯನ್ನು ಹೊಂದಿರುವುದಾಗಿ ಖುದ್ದು ಸಮಂತಾ ಹೇಳಿಕೊಂಡಿದ್ದರು.

ಕಲ್ಪಿಕಾ ಗಣೇಶ್

ಕಲ್ಪಿಕಾ ಗಣೇಶ್ ತಮ್ಮ ವೃತ್ತಿಜೀವನದಲ್ಲಿ ‘ಯಶೋದಾ’ ಮತ್ತು ‘ಪ್ರಯಾಣಂ’ ನಂತಹ ಮರೆಯಲಾಗದ ಚಿತ್ರಗಳಲ್ಲಿ ಅಭಿನಯಿಸಿ ಹೆಸರು ಮಾಡಿದ್ದಾರೆ. ಸಮಂತಾರಂತೆಯೇ ತಾವು ಕೂಡ ಮೆಯೋಸೈಟಿಸ್‌ ಕಾಯಿಲೆಯಿಂದ ಬಳಲುತ್ತಿರುವುದಾಗಿ ಕಲ್ಪಿಕಾ ಹೇಳಿದ್ದರು.

ಮಮತಾ ಮೋಹನ್ ದಾಸ್

ದಕ್ಷಿಣದ ನಟಿ ಮಮತಾ ಮೋಹನ್ ದಾಸ್, 2023ರಲ್ಲಿ ಆಟೋಇಮ್ಯೂನ್ ಡಿಸಾರ್ಡರ್ ವಿಟಲಿಗೋದಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು. 2009ರಲ್ಲಿ ಅವರಿಗೆ ಹಾಡ್ಗ್ಕಿನ್ಸ್ ಲಿಂಫೋಮಾ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡದ ಹಲವು ಚಿತ್ರಗಳಲ್ಲಿ ಮಮತಾ ನಟಿಸಿದ್ದಾರೆ.

ರಾಣಾ ದಗ್ಗುಬಾಟಿ

‘ಬಾಹುಬಲಿ’ ಚಿತ್ರದ ‘ಭಲ್ಲಾಳದೇವ’ ಖ್ಯಾತಿಯ ತೆಲುಗು ನಟ ರಾಣಾ ದಗ್ಗುಬಾಟಿ ಕೂಡ ಸಾಕಷ್ಟು ಅನಾರೋಗ್ಯ ಎದುರಿಸಿದ್ದಾರೆ. ಅವರು ಮೂತ್ರಪಿಂಡ ಮತ್ತು ಕಾರ್ನಿಯಾ ಕಸಿ ಮಾಡಿಸಿಕೊಂಡಿದ್ದಾರೆ. ಇಂತಹ ಆರೋಗ್ಯ ಸಮಸ್ಯೆಗಳೊಂದಿಗೆ ಜೀವನ ನಡೆಸುವುದು ಕಷ್ಟವೆಂದು ರಾಣಾ ಅಳಲು ತೋಡಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read