HomeKarnatakaBIG NEWS: ಪಬ್-ಬಾರ್ ಮೇಲೆ ದಾಳಿ ಪ್ರಕರಣ; ಅಪ್ರಾಪ್ತರಿಗೂ ಧೂಮಪಾನಕ್ಕೆ ಅವಕಾಶ ನೀಡಿದ್ದು ಪತ್ತೆ; ಬಾಲಾಪರಾಧ...

BIG NEWS: ಪಬ್-ಬಾರ್ ಮೇಲೆ ದಾಳಿ ಪ್ರಕರಣ; ಅಪ್ರಾಪ್ತರಿಗೂ ಧೂಮಪಾನಕ್ಕೆ ಅವಕಾಶ ನೀಡಿದ್ದು ಪತ್ತೆ; ಬಾಲಾಪರಾಧ ಕಾಯ್ದೆಯಡಿ ಕ್ರಮ

ಬೆಂಗಳೂರು: ಬೆಂಗಳೂರು ಸಿಸಿಬಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಪಬ್ ಹಾಗೂ ಬಾರ್ ಗಳಲ್ಲಿ ಅಪ್ರಾಪ್ತರಿಗೂ ಧೂಮಪಾನಕ್ಕೆ ಅವಕಾಶ ಮಾಡಿಕೊಟ್ಟಿರುವುದು ಪತ್ತೆಯಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಬಿ.ದಯಾನಂದ್, ತಡ ರಾತ್ರಿ ಸಿಸಿಬಿ ಪೊಲೀಸರು ನಗರದ ಹಲವು ಪಬ್, ಹುಕ್ಕಾ ಬಾರ್ ಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಅಪ್ರಾಪ್ತರು ನಕಲಿ ಆಧಾರ್ ಕಾರ್ಡ್ ಬಳಸಿ ಪಬ್, ಬಾರ್ ಗಳಿಗೆ ಹೋಗಿರುವುದು ಗೊತ್ತಾಗಿದೆ. ಕೆಲವೆಡೆಗಳಲ್ಲಿ ಮದ್ಯಪಾನ ನಿಯಮ ಉಲ್ಲಂಘನೆಯಾಗಿದೆ. ಅಲ್ಲದೇ ಅಪ್ರಾಪ್ತರಿಗೂ ಧೂಮಪಾನಕ್ಕೆ ಅವಕಾಶ ನೀಡಿರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾಳಿ ವೇಳೆ ಹಲವರನ್ನು ವಶಕ್ಕೆ ಪಡೆಯಲಾಗಿದೆ. ಅಪ್ರಾಪ್ತರಿಗೂ ಧೂಮಪಾನಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಬಾಲಾಪರಾಧ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular