HomeLatest Newsತಮಿಳುನಾಡಿಗೆ ನೀರು ಹರಿಸಲಿರುವ ಕಾಂಗ್ರೆಸ್ ಸರ್ಕಾರ, ಫೋಟೋ ಶೂಟ್ ಗಾಗಿ ಸಭೆ: ಪ್ರತಿಪಕ್ಷ ನಾಯಕ ಆರ್.ಅಶೋಕ

ತಮಿಳುನಾಡಿಗೆ ನೀರು ಹರಿಸಲಿರುವ ಕಾಂಗ್ರೆಸ್ ಸರ್ಕಾರ, ಫೋಟೋ ಶೂಟ್ ಗಾಗಿ ಸಭೆ: ಪ್ರತಿಪಕ್ಷ ನಾಯಕ ಆರ್.ಅಶೋಕ

ಮಂಡ್ಯ-ತಮಿಳುನಾಡು ಸರ್ಕಾರದ ಸೂಚನೆಯಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಎರಡು ದಿನ ಕಾವೇರಿ ನೀರು ಹರಿಸಲಿದೆ. ನಂತರ ಕಾಟಾಚಾರಕ್ಕಾಗಿ ಹಾಗೂ ಫೋಟೋ ಶೂಟ್ ಗಾಗಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.

ಕೆಆರ್ ಎಸ್ ಜಲಾಶಯದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ, ಮಂಗಳವಾರ ನೀರು ಬಿಡಿ, ನಂತರ ನಾನು ಸರ್ವಪಕ್ಷ ಸಭೆ ನಡೆಸುತ್ತೇನೆಂದು ಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈಗ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರನ್ನು ಚರ್ಚೆಗೆ ಆಹ್ವಾನಿಸಲಾಗಿದೆ. ಈಗಾಗಲೇ ಅವರು ಕಾವೇರಿ ನೀರು ಪಡೆಯದೇ ಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಮೇಕೆದಾಟು ಯೋಜನೆ ಜಾರಿಯಾಗಲು ಬಿಡುವುದಿಲ್ಲ ಎಂದು ನಿರ್ಣಯ ಕೈಗೊಳ್ಳಲಾಗಿದೆ. ಅವರು ಈ ತೀರ್ಮಾನದಿಂದ ಹಿಂದೆ ಸರಿಯುವುದಿಲ್ಲ. ಆದರೂ ಅವರನ್ನು ಕರೆಸಲು ರಾಜ್ಯ ಸರ್ಕಾರ 15 ಕೋಟಿ ರೂ. ಅನಗತ್ಯ ವೆಚ್ಚ ಮಾಡುತ್ತಿದೆ. ಕೇವಲ ಫೋಟೋ ಶೂಟ್ ಮಾಡಲು ಈ ಸಭೆ ನಡೆಯುತ್ತಿದೆ ಎಂದು ದೂರಿದರು.

ರಾಹುಲ್ ಗಾಂಧಿ ಮೇಲೆ ಒತ್ತಡ ಹೇರಬೇಕು

ಕಾವೇರಿ ನೀರು ಹಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಲು ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗಬೇಕು. ತಮಿಳುನಾಡಿನಲ್ಲಿ ಕಾಂಗ್ರೆಸ್ ನ ಮಿತ್ರಪಕ್ಷ ಅಧಿಕಾರದಲ್ಲಿದೆ. ರಾಜ್ಯದ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯವರಿಂದ ಒಂದು ಮಾತು ಹೇಳಿಸಿದರೆ ಕೂಡಲೇ ತಮಿಳುನಾಡು ಸರ್ಕಾರ ತನ್ನ ತೀರ್ಮಾನ ಬದಲಿಸಿಕೊಳ್ಳಬಹುದು. ಆದ್ದರಿಂದ ರಾಹುಲ್ ಗಾಂಧಿಯವರನ್ನು ಈಗ ಪ್ರಶ್ನೆ ಮಾಡಬೇಕಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಂದ್ ಗೆ ಬೆಂಬಲ, ಕಲಾವಿದರಿಗೆ ಕರೆ

ಕಾವೇರಿ ನೀರು ಹಂಚಿಕೆಯಲ್ಲಿ ಕನ್ನಡ ಸಂಘಟನೆಗಳು ಬಂದ್ ಗೆ ಕರೆ ನೀಡಿರುವುದು ಉತ್ತಮ ವಿಚಾರ. ಕನ್ನಡ ಚಿತ್ರರಂಗದ ಕಲಾವಿದರು ಬೀದಿಗಿಳಿದು ಹೋರಾಟ ಮಾಡಬೇಕು. ಇಲ್ಲವಾದರೆ ಜನರು ಕೂಡ ಕಲಾವಿದರಿಗೆ ಬುದ್ಧಿ ಕಲಿಸುತ್ತಾರೆ. ನಾವು ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular