HomeLatest Newsಜಾನುವಾರು ಮಾಲೀಕರೇ ಗಮನಿಸಿ: ಬೀಡಾಡಿ ದನಗಳ ಸ್ಥಳಾಂತರ, ಯಾವುದೇ ಕಾರಣಕ್ಕೂ ವಾಪಸ್ ಕೊಡಲ್ಲ…!

ಜಾನುವಾರು ಮಾಲೀಕರೇ ಗಮನಿಸಿ: ಬೀಡಾಡಿ ದನಗಳ ಸ್ಥಳಾಂತರ, ಯಾವುದೇ ಕಾರಣಕ್ಕೂ ವಾಪಸ್ ಕೊಡಲ್ಲ…!

ಬಳ್ಳಾರಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬೀಡಾಡಿ ದನಗಳ ಮಾಲೀಕರು ತಮ್ಮ ದನ-ಕರುಗಳನ್ನು ಮನೆಯಲ್ಲಿಯೇ ಕಟ್ಟಿಕೊಳ್ಳಬೇಕು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಬೀಡಾಡಿ ದನಗಳು ಸಾರ್ವಜನಿಕ ರಸ್ತೆಗÀಳು ಹಾಗೂ ನಗರದ ಮುಖ್ಯ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಲಾಗಿ ತಿರುಗಾಡುವುದು ಹಾಗೂ ಮಲಗಿರುವುದು ಕಂಡುಬಂದಿದ್ದು, ಇವುಗಳಿಂದ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಂದರೆಯಾಗಿ ಅಪಘಾತಗಳಿಗೆ ಕಾರಣವಾಗುತ್ತಿವೆ ಹಾಗೂ ಬೀಡಾಡಿ ದನಗಳಿಗೂ ಸಹ ತೊಂದರೆ ಉಂಟಾಗುತ್ತಿದೆ. ಪಾಲಿಕೆಯು ಗಂಭೀರವಾಗಿ ಪರಿಗಣಿಸಿದೆ.

ಹಾಗಾಗಿ ಎಲ್ಲಾ ಬೀಡಾಡಿ ದನಗಳ ಮಾಲೀಕರು ತಮ್ಮ ತಮ್ಮ ದನಕರುಗಳನ್ನು ತಮ್ಮ ಸುಪರ್ದಿಯಲ್ಲಿಯೇ ಕಟ್ಟಿಕೊಳ್ಳಬೇಕು. ತಪ್ಪಿದಲ್ಲಿ ಪಾಲಿಕೆಯಿಂದ ಕಾರ್ಯಾಚರಣೆ ನಡೆಸಿ ಎಲ್ಲಾ ಬೀಡಾಡಿ ದನಗಳನ್ನು ಹಿಡಿದು ನಿಯಮಾನುಸಾರ ನಗರದಿಂದಾಚೆಗೆ ಸ್ಥಳಾಂತರಿಸಲಾಗುವುದು. ಯಾವುದೇ ಕಾರಣಕ್ಕೂ ಸಹ ಮರಳಿ ನೀಡಲಾಗುವುದಿಲ್ಲ ಹಾಗೂ ಅಂತಹ ಮಾಲೀಕರನ್ನು ಗುರುತಿಸಿ ಸಾರ್ವಜನಿಕ ಉಪದ್ರವದಡಿ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular