Live News

BREAKING NEWS: ಪಾಕಿಸ್ತಾನ ಗುಂಡಿನ ದಾಳಿ ವೇಳೆ ಭಾರತದ ಗಡಿಯೊಳಗೆ ನುಸುಳಿದ 7 ಉಗ್ರರು ಫಿನಿಶ್: ಜೊತೆಗಿದ್ದವರು ಪರಾರಿ

ಶ್ರೀನಗರ: ಜಮ್ಮು ಕಾಶ್ಮೀರದ ಸಾಂಬಾ ಸೆಕ್ಟರ್ ನಲ್ಲಿ 7 ಭಯೋತ್ಪಾದಕರನ್ನು ಬಿಎಸ್ಎಫ್ ಹತ್ಯೆ ಮಾಡಿದೆ. ಭಾರತದೊಳಗೆ…

BREAKING : ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಮತ್ತೆ ಪಾಕ್ ಶೆಲ್ ದಾಳಿ : ಓರ್ವ ಮಹಿಳೆ ಸಾವು

ಜಮ್ಮು-ಕಾಶ್ಮೀರದ ಉರಿಯಲ್ಲಿ ಮತ್ತೆ ಪಾಕ್ ಶೆಲ್ ದಾಳಿ ನಡೆಸಿದ್ದು, ಓರ್ವ ಮಹಿಳೆ ಸಾವುನ್ನಪ್ಪಿದ್ದಾರೆ. ಪಾಪಿ ಪಾಕಿಸ್ತಾನ…

ರದ್ದಾದ ಧರ್ಮಶಾಲಾ IPL ಪಂದ್ಯ: ವಿಮಾನ ನಿಲ್ದಾಣ ಮುಚ್ಚಿದ ಕಾರಣ ಬಿಗಿಭದ್ರತೆಯೊಂದಿಗೆ ವಿಶೇಷ ರೈಲಿನಲ್ಲಿ ಪಂಜಾಬ್, ದೆಹಲಿ ತಂಡಗಳು ಶಿಫ್ಟ್

ನವದೆಹಲಿ: ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಮತ್ತು ದೆಹಲಿ ತಂಡಗಳ ಐಪಿಎಲ್ ಪಂದ್ಯವನ್ನು ಪಾಕಿಸ್ತಾನ ದಾಳಿ ಕಾರಣಕ್ಕೆ…

BIG NEWS : ಸೇವಾನಿರತ ‘OBC’ ಅಭ್ಯರ್ಥಿಗಳಿಗೆ ಕೆನೆಪದರ ಮಿತಿಗೆ ವಿನಾಯಿತಿ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : ಸೇವೆಯಲ್ಲಿರುವ ಹಿಂದುಳಿದ ವರ್ಗಗಳ ಪ್ರವರ್ಗ-2(ಎ), ಪ್ರವರ್ಗ-2(ಬಿ), ಪ್ರವರ್ಗ-3(ಎ) ಹಾಗೂ ಪ್ರವರ್ಗ-3(ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ…

BIG NEWS: ಐತಿಹಾಸಿಕ ತೀರ್ಪು ನೀಡುವ ವೇಳೆ ಕರ್ನಲ್ ಸೋಫಿಯಾ ಖುರೇಷಿ ಸಾಧನೆ ಉಲ್ಲೇಖಿಸಿದ್ದ ಸುಪ್ರೀಂ ಕೋರ್ಟ್

ನವದೆಹಲಿ: ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಕಾಯಂ ನೇಮಕಾತಿ ನೀಡುವ ಕುರಿತಾಗಿ 2020ರಲ್ಲಿ ಸುಪ್ರೀಂಕೋರ್ಟ್ ನಿಂದ ಐತಿಹಾಸಿಕ…

ಅತ್ಯಾಧುನಿಕ ವಾಹನ ಸ್ಕ್ರ್ಯಾಪಿಂಗ್ ಘಟಕವನ್ನು ಉದ್ಘಾಟಿಸಿದ ʼಟಾಟಾ ಮೋಟಾರ್ಸ್ʼ

ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಕೋಲ್ಕತ್ತಾದಲ್ಲಿ ತಮ್ಮ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಘಟಕವನ್ನು (ಆರ್ ವಿ ಎಸ್ ಎಫ್) ಉದ್ಘಾಟಿಸಿದೆ. ಈ ಅತ್ಯಾಧುನಿಕ ಘಟಕವು ಟಾಟಾ ಕಂಪನಿಯು ಈ ದೇಶದಲ್ಲಿ ಹೊಂದಿರುವ ಎಂಟನೇ ವಾಹನ ಸ್ಕ್ರ್ಯಾಪಿಂಗ್ ಘಟಕವಾಗಿದೆ. 'ರೀ.ವೈ.ರ್ – ರೀಸೈಕಲ್ ವಿತ್ ರೆಸ್ಪೆಕ್ಟ್' ಎಂಬ ಹೆಸರಿನ ಈ ಅತ್ಯಾಧುನಿಕ ಘಟಕವು ವರ್ಷಕ್ಕೆ 21,000 ಜೀವಿತಾವಧಿ ಮುಗಿದ ವಾಹನಗಳನ್ನು ಸುಸ್ಥಿರವಾಗಿ ಮತ್ತು ಸುರಕ್ಷಿತವಾಗಿ ಸ್ಕ್ರ್ಯಾಪ್ ಮಾಡುವ ಸಾಮರ್ಥ್ಯ ಹೊಂದಿದೆ. ಈ ಘಟಕವನ್ನು ಟಾಟಾ ಮೋಟಾರ್ಸ್‌ ನ ಪಾಲುದಾರ ಸಂಸ್ಥೆಯಾದ ಸೆಲ್ಲಡೇಲ್ ಸಿನರ್ಜೀಸ್ ಇಂಡಿಯಾ ಪ್ರೈ. ಲಿಮಿಟೆಡ್ ನಿರ್ವಹಿಸಲಿದ್ದು, ಇದು ಎಲ್ಲಾ ಬ್ರಾಂಡ್‌ ಗಳ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳು ಸೇರಿದಂತೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಕೂಡ ಸ್ಕ್ರ್ಯಾಪ್ ಮಾಡಲಿದೆ. ರೀ.ವೈ.ರ್ ಘಟಕವನ್ನು ಪಶ್ಚಿಮ ಬಂಗಾಳ ಸರ್ಕಾರದ ಸಾರಿಗೆ ಸಚಿವ ಸ್ನೇಹಾಸಿಸ್ ಚಕ್ರವರ್ತಿ ಉದ್ಘಾಟಿಸಿದರು. ಕೋಲ್ಕತ್ತಾದ ಮೇಯರ್ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಗರಾಭಿವೃದ್ಧಿ ಮತ್ತು ಪೌರ ವ್ಯವಹಾರಗಳ ಸಚಿವ ಫಿರ್ಹಾದ್ ಹಕೀಂ ಈ ಸಮಾರಂಭದಲ್ಲಿ ವರ್ಚುವಲ್ ಆಗಿ ಭಾಗವಹಿಸಿದರು. ಪಶ್ಚಿಮ ಬಂಗಾಳ ಸರ್ಕಾರದ ಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ. ಸೌಮಿತ್ರ ಮೋಹನ್, ಐಎಎಸ್ ಮತ್ತು ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ಟ್ರಕ್ಸ್ ವಿಭಾಗದ ಉಪಾಧ್ಯಕ್ಷ ಮತ್ತು ಬಿಸಿನೆಸ್ ಹೆಡ್ ರಾಜೇಶ್ ಕೌಲ್ ಉಪಸ್ಥಿತರಿದ್ದರು. ಅವರೆಲ್ಲರ ಜೊತೆಗೆ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಟಾಟಾ ಮೋಟಾರ್ಸ್‌ ನ ಗಣ್ಯರು ಭಾಗವಹಿಸಿದ್ದರು. ಈ ಘಟಕ ಉದ್ಘಾಟನೆಯ ಮೂಲಕ ಟಾಟಾ ಕಂಪನಿಯು ಇದೀಗ ಕೋಲ್ಕತ್ತಾ, ಜೈಪುರ, ಭುವನೇಶ್ವರ, ಸೂರತ್, ಚಂಡೀಗಢ, ದೆಹಲಿ ಎ ಸಿ ಆರ್, ಪುಣೆ ಮತ್ತು ಗುವಾಹಟಿಯಲ್ಲಿ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಘಟಕಗಳನ್ನು ಹೊಂದಿದಂತಾಗಿದೆ. ಕೋಲ್ಕತ್ತಾದ ಘಟಕವು ಪೂರ್ವ ಭಾರತದಲ್ಲಿನ ಮೂರನೇ ರೀ.ವೈ.ರ್ ಘಟಕವಾಗಿದ್ದು, ಈ ಪ್ರದೇಶದ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲಿದೆ.

ಭಾರತದ ಡ್ರೋನ್ ದಾಳಿಯಿಂದ ಹಾನಿಯಾದ ರಾವಲ್ಪಿಂಡಿ ಸ್ಟೇಡಿಯಂ: PSL ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಿದ ಪಾಕಿಸ್ತಾನ

ರಾವಲ್ಪಿಂಡಿ ಕ್ರೀಡಾಂಗಣವು ಡ್ರೋನ್ ದಾಳಿಯಿಂದ ಹಾನಿಗೊಳಗಾದ ನಂತರ ಉಳಿದ ಕ್ರಿಕೆಟ್ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸಲಾಗಿದೆ. ಮೇ…

ಡಿನ್ನರ್ ಡೇಟ್‌ನಲ್ಲಿ ವಿರಾಟ್-ಅನುಷ್ಕಾ: ಆ ಒಂದು ಕ್ಷಣದ ವಿಡಿಯೋ ವೈರಲ್ | Watch

ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಭೋಜನಕೂಟದಲ್ಲಿ ಕಾಣಿಸಿಕೊಂಡಿದ್ದು, ಈ ವೇಳೆ…

ಪಾಕ್ ದುಸ್ಸಾಹಸಕ್ಕೆ ಭಾರತದ ದಿಟ್ಟ ಉತ್ತರ ; ಕ್ಷಿಪಣಿಗಳನ್ನು ಹೊಡೆದುರುಳಿಸಿದ ಸೇನೆ | Watch Video

ಜಮ್ಮು ಮತ್ತು ಕಾಶ್ಮೀರದ ಗಡಿ ಭಾಗದಲ್ಲಿ ಪಾಕಿಸ್ತಾನದ ಕಡೆಯಿಂದ ಉಂಟಾದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ, ಭಾರತೀಯ…