HomeLatest NewsBREAKING: ಬೆಂಗಳೂರಲ್ಲಿ ಆಘಾತಕಾರಿ ಘಟನೆ: ತೃತೀಯ ಲಿಂಗಿ ತಲೆ ಬೋಳಿಸಿ ಹಿಗ್ಗಾಮುಗ್ಗಾ ಥಳಿತ

BREAKING: ಬೆಂಗಳೂರಲ್ಲಿ ಆಘಾತಕಾರಿ ಘಟನೆ: ತೃತೀಯ ಲಿಂಗಿ ತಲೆ ಬೋಳಿಸಿ ಹಿಗ್ಗಾಮುಗ್ಗಾ ಥಳಿತ

ಬೆಂಗಳೂರು: ಬೆಂಗಳೂರಿನಲ್ಲಿ ತೃತೀಯ ಲಿಂಗಿ ತಲೆ ಬೋಳಿಸಿ ಮನಸ್ಸೋ ಇಚ್ಛೆ ಹಲ್ಲೆ ನಡೆಸಲಾಗಿದೆ. ಬೊಮ್ಮನಹಳ್ಳಿಯ ವಿರಾಟ ನಗರದಲ್ಲಿ ತೃತೀಯ ಲಿಂಗಿ ಸುಕನ್ಯಾ ಮೇಲೆ ಹಲ್ಲೆ ಮಾಡಲಾಗಿದೆ.

ಬೇರೆ ತಂಡದ ಜೊತೆಗೆ ಹೋಗಿದ್ದಕ್ಕೆ ಆಟೋದಲ್ಲಿ ಅಪಹರಣ ಮಾಡಿ ಹಲ್ಲೆ ಮಾಡಲಾಗಿದೆ. ತೃತೀಯ ಲಿಂಗಿಗಳಾದ ಪ್ರೀತಿ, ಚಿನ್ನಿ ಮತ್ತು ತಂಡದವರು ಕೃತ್ಯವೆಸಗಿದ್ದಾರೆ. ಹಿಟ್ಟಿನ ದೊಣ್ಣೆ, ಸೌಟು, ಕೈಗೆ ಸಿಕ್ಕ ವಸ್ತುಗಳು ಮತ್ತು ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ.

ಕೆಆರ್ ಪುರಂನಿಂದ ಅಪಹರಣ ಮಾಡಿ ಬೊಮ್ಮನಹಳ್ಳಿಗೆ ಕರೆದೊಯ್ದು ಥಳಿಸಲಾಗಿದೆ. ಕೈ ಮುಗಿದು ಬೇಡಿಕೊಂಡರೂ ತೃತೀಯ ಲಿಂಗಿ ಸುಕನ್ಯಾ ಮೇಲೆ ಹಲ್ಲೆ ನಡೆಸಲಾಗಿದೆ. ವಿಡಿಯೋ ಕಾಲ್ ಮಾಡಿ ಮತ್ತೊಬ್ಬ ತೃತೀಯ ಲಿಂಗಿಗೆ ಇದನ್ನು ತೋರಿಸಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಬೊಮ್ಮನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು 7 ಜನ ತೃತೀಯ ಲಿಂಗಿಗಳನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular