alex Certify India | Kannada Dunia | Kannada News | Karnataka News | India News - Part 212
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಬಸ್ ಗೆ ಬೆಂಕಿ ತಗುಲಿ ಘೋರ ದುರಂತ: 10 ಮಂದಿ ಸಜೀವ ದಹನ

ನವದೆಹಲಿ: ಹರಿಯಾಣದ ನುಹ್ ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಶನಿವಾರ ಬಸ್ ಗೆ ಬೆಂಕಿ ತಗುಲಿ ಸುಮಾರು ಹತ್ತು ಜನರು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ನುಹ್ ವೈದ್ಯಕೀಯ ಕಾಲೇಜಿಗೆ Read more…

BIG NEWS: ರಾಹುಲ್ ದ್ರಾವಿಡ್ ಬದಲಿಗೆ ಭಾರತ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಗೌತಮ್ ಗಂಭೀರ್ ಆಯ್ಕೆಗೆ ಬಿಸಿಸಿಐ ಒಲವು

ನವದೆಹಲಿ: ಪ್ರಸ್ತುತ ಐಪಿಎಲ್ 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ಗೆ ಮೆಂಟರ್ ಆಗಿರುವ ಗೌತಮ್ ಗಂಭೀರ್ ಅವರನ್ನು ಭಾರತದ ಮುಖ್ಯ ಕೋಚ್ ಸ್ಥಾನಕ್ಕಾಗಿ ಬಿಸಿಸಿಐ ಸಂಪರ್ಕಿಸಿದೆ ಎಂದು ವರದಿಯಾಗಿದೆ. Read more…

‘ಐಸ್ ಕ್ರೀಮ್ ಮ್ಯಾನ್’ ಖ್ಯಾತಿಯ ರಘುನಂದನ್ ಕಾಮತ್ ವಿಧಿವಶ

ಮುಂಬೈ: ನ್ಯಾಚುರಲ್ ಐಸ್ ಕ್ರೀಮ್ ಸಂಸ್ಥೆ ಮೂಲಕ ಖ್ಯಾತರಾಗಿ ದೇಶದ ಐಸ್ ಕ್ರೀಮ್ ಮ್ಯಾನ್ ಎಂದೇ ಗುರುತಿಸಿಕೊಂಡಿದ್ದ ರಘುನಂದನ್ ಕಾಮತ್ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಮಂಗಳೂರು ಮೂಲದ ರಘನಂದನ್ Read more…

ಫಲ್ಗು ನದಿಯ ದಡದಲ್ಲಿರುವ ಪವಿತ್ರ ಯಾತ್ರಾ ಸ್ಥಳ ‘ಬೋಧಗಯಾ’

ಬಿಹಾರದ ರಾಜಧಾನಿ ಪಾಟ್ನಾದಿಂದ ಸುಮಾರು 100 ಕಿಲೋ ಮೀಟರ್ ದೂರದಲ್ಲಿರುವ, ಗಯಾ, ಬೋಧಗಯಾ ಹಿಂದೂ ಮತ್ತು ಬೌದ್ಧರ ಯಾತ್ರಾ ಸ್ಥಳವಾಗಿವೆ. ಫಲ್ಗು ನದಿಯ ದಡದಲ್ಲಿರುವ ಈ ಸ್ಥಳದ ಸುತ್ತಲೂ Read more…

BREAKING: ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ: ದೆಹಲಿ ಏರ್ ಪೋರ್ಟ್ ನಲ್ಲಿ ಎಮರ್ಜೆನ್ಸಿ ಘೋಷಣೆ

ನವದೆಹಲಿ: ದೆಹಲಿಯಿಂದ ಬೆಂಗಳೂರಿಗೆ ಏರ್ ಇಂಡಿಯಾ ಫ್ಲೈಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ IGI ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತುಸ್ಥಿತಿ ಘೋಷಿಸಲಾಯಿತು. ದೆಹಲಿಯಿಂದ ಬೆಂಗಳೂರಿಗೆ ಏರ್ ಇಂಡಿಯಾ 807 ವಿಮಾನದ Read more…

ತಾವೇಕೆ ʼಪತ್ರಿಕಾಗೋಷ್ಟಿʼ ನಡೆಸುತ್ತಿಲ್ಲ ಎಂಬುದರ ಕುರಿತು ಮನಬಿಚ್ಚಿ ಮಾತನಾಡಿದ ಪ್ರಧಾನಿ; ಇಲ್ಲಿದೆ ಡಿಟೇಲ್ಸ್

ಪ್ರಧಾನಿ ನರೇಂದ್ರ ಮೋದಿ ಇದುವರೆಗೂ ತಮ್ಮ ಆಡಳಿತಾವಧಿಯಲ್ಲಿ ಯಾಕೆ ಪತ್ರಿಕಾಗೋಷ್ಠಿ ನಡೆಸಿಲ್ಲ ಎಂಬ ಮಾತಿಗೆ ಖುದ್ದು ಉತ್ತರಿಸಿದ್ದಾರೆ. ಪತ್ರಿಕಾಗೋಷ್ಠಿ ನಡೆಸುವುದರಿಂದ ದೂರ ಉಳಿದಿರುವ ಪ್ರಧಾನಿ ನರೇಂದ್ರ ಮೋದಿ ಇಂತಹ Read more…

ಪರ ಪುರುಷನೊಂದಿಗೆ ‘ಪತ್ನಿ ವಿನಿಮಯ’ ಕ್ಕೆ ಮುಂದಾದ ಪತಿ; ಒಪ್ಪದ್ದಕ್ಕೆ ಚಿತ್ರಹಿಂಸೆ ನೀಡಿದ ಪಾಪಿ

ವಿದೇಶದಲ್ಲಿ ಹೆಚ್ಚಾಗಿ ಕಂಡುಬರುವ ಪತ್ನಿ ವಿನಿಮಯ (wife swapping ) ಭಾರತಕ್ಕೂ ಕಾಲಿಟ್ಟಿದ್ದು ಸಂಗಾತಿಯನ್ನು ಬಲವಂತವಾಗಿ ಪತ್ನಿ ವಿನಿಮಯ ಮಾಡಿಕೊಳ್ಳುವ ಕೃತ್ಯಕ್ಕೆ ಒತ್ತಾಯಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. Read more…

Viral Video | ಫ್ರಿಡ್ಜ್ ಇಲ್ಲದೇ ನೀರು ತಣ್ಣಗಾಗಲು ಸರಳ ಐಡಿಯಾ; ಗ್ರಾಮೀಣ ಮಹಿಳೆಯ ಯೋಚನೆಗೆ ಫಿದಾ

ಸಾಮಾಜಿಕ ಮಾಧ್ಯಮದಲ್ಲಿ ಹಲವರು ಉಪಯುಕ್ತ ಮತ್ತು ಖರ್ಚಿಲ್ಲದೇ ತುಂಬಾ ಸರಳವಾಗಿ ಮಾಡಬಹುದಾದ ಕೆಲಸಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತಾರೆ. ರೆಫ್ರಿಜರೇಟರ್ ಅಥವಾ ವಿದ್ಯುತ್ ಇಲ್ಲದೆ ನೀರನ್ನು ತಣ್ಣಗಾಗಿಸುವ ಸುಲಭ ಉಪಾಯವನ್ನ ಇನ್ Read more…

ದಾರುಣ ಘಟನೆ: ಗಂಟಲಲ್ಲಿ ಚಾಕಲೇಟ್ ಸಿಲುಕಿ 6 ವರ್ಷದ ಕಂದಮ್ಮ ಸಾವು

ಆರು ವರ್ಷದ ಮಗುವಿನ ಗಂಟಲಲ್ಲಿ ಚಾಕಲೇಚ್ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ ರಾಂಪುರದ ಶಹಾಬಾದ್ ಪ್ರದೇಶದಲ್ಲಿ ನಡೆದಿದೆ. ಪುರಸಭಾ ಸದಸ್ಯರಾದ ಅಂಜುಮ್ ಅವರ ಪುತ್ರ Read more…

ಚಾರ್ ಧಾಮ್ ಯಾತ್ರೆ: ದೇವಾಲಯಗಳ 50 ಮೀಟರ್ ವ್ಯಾಪ್ತಿಯಲ್ಲಿ ರೀಲ್ಸ್ ನಿಷೇಧ: ಮೇ 31 ರವರೆಗೆ ವಿಐಪಿ ದರ್ಶನ ಇಲ್ಲ

ಚಮೋಲಿ(ಉತ್ತರಾಖಂಡ): ಚಾರ್ ಧಾಮ್ ಯಾತ್ರೆ ವೇಳೆ ದೇವಾಲಯಗಳ 50 ಮೀಟರ್ ವ್ಯಾಪ್ತಿಯೊಳಗೆ ‘ರೀಲ್‌ಗಳನ್ನು ತಯಾರಿಸುವುದನ್ನು’ ನಿಷೇಧಿಸಲಾಗಿದೆ.  ಮೇ 31 ರವರೆಗೆ ವಿಐಪಿ ದರ್ಶನ ಇರುವುದಿಲ್ಲ. ಉತ್ತರಾಖಂಡ ಸರ್ಕಾರವು ಗುರುವಾರ Read more…

I.N.D.I.A ಮೈತ್ರಿಕೂಟ ಸೇರ್ಪಡೆ; ಯು ಟರ್ನ್ ಹೊಡೆದ ದೀದಿ…!

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ I.N.D.I.A ಮೈತ್ರಿಕೂಟದ ಜೊತೆ ಸೀಟು ಹೊಂದಾಣಿಕೆ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣ ಮೂಲ ಕಾಂಗ್ರೆಸ್, Read more…

ಮೋದಿಯವರ ಅಭಿವೃದ್ಧಿ ಕಾರ್ಯ ಹೊಗಳಿದ ರಶ್ಮಿಕಾ ಮಂದಣ್ಣ; ವಿಡಿಯೋ ಹಂಚಿಕೊಂಡು ಪ್ರತಿಕ್ರಿಯಿಸಿದ ಪ್ರಧಾನಿ !

ಖ್ಯಾತ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮುಂಬೈನ ಅಟಲ್ ಸೇತುವೆ ಮೇಲೆ ಸಂಚರಿಸಿದ್ದು, ಈ ಕುರಿತಂತೆ ವಿಡಿಯೋ ಒಂದನ್ನು ಮಾಡಿದ್ದರು. ಈ ಸೇತುವೆಯನ್ನು ನರೇಂದ್ರ ಮೋದಿಯವರು ಉದ್ಘಾಟಿಸಿದ್ದು, ತಮ್ಮ Read more…

ವಿಚಾರಣೆ ಹಂತದಲ್ಲಿ ಏಕಾಏಕಿ ಬಂಧಿಸುವಂತಿಲ್ಲ: ಇಡಿ ಅಧಿಕಾರಕ್ಕೆ ಅಂಕುಶ ಹಾಕಿದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆ(PMLA) ಪ್ರಕರಣದಲ್ಲಿ ಸಮನ್ಸ್ ನೀಡಿದ ನಂತರ ಹಾಜರಾಗುವ ಆರೋಪಿಯನ್ನು ನ್ಯಾಯಾಲಯದ ಅನುಮತಿ ಪಡೆಯದೆ ಏಕಾಏಕಿ ಬಂಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ಮಹತ್ವದ Read more…

ಮರಿ ಟಗರು – ದೈತ್ಯ ಗೂಳಿ ನಡುವೆ ಕಾಳಗ; ಗೆದ್ದಿದ್ದು ಯಾರು ? ವಿಡಿಯೋ ನೋಡಿ

ಮರಿ ಟಗರು ಹಾಗೂ ದೈತ್ಯಾಕಾರದ ಬೃಹತ್ ಗೂಳಿ ನಡುವಿನ ಕಾಳಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ತನ್ನ ಪಾಡಿಗೆ ರಸ್ತೆ ಬದಿ ಮೇಯುತ್ತಿದ್ದ ಮರಿ ಟಗರಿಗೆ ದೈತ್ಯಾಕಾರದ Read more…

ದೇಶದ ಜನತೆಗೆ ಗುಡ್ ನ್ಯೂಸ್: ಹೃದ್ರೋಗ, ಬಿಪಿ, ಶುಗರ್ ಸೇರಿ ಇತರೆ ಮಾತ್ರೆ, ಔಷಧಗಳ ದರ ಇಳಿಕೆ

ನವದೆಹಲಿ: ಸಾಮಾನ್ಯವಾಗಿ ಬಳಕೆ ಮಾಡುವ 41 ಔಷಧಗಳು ಹಾಗೂ ಹೃದ್ರೋಗ, ಮಧುಮೇಹ(Diabetes) ಇತರೆ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ 6 ಔಷಧೀಯ ಸಂಯೋಜನೆಗಳ ದರವನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದೆ. Read more…

ರಾಹುಲ್ ಗಾಂಧಿ ಕ್ಷೇತ್ರ ರಾಯಬರೇಲಿಯಲ್ಲಿಂದು ಕಾಂಗ್ರೆಸ್ ನಾಯಕರ ಶಕ್ತಿ ಪ್ರದರ್ಶನ

ರಾಯಬರೇಲಿ: ರಾಯಬರೇಲಿಯ ಐಟಿಐ ಮೈದಾನದಲ್ಲಿ ಇಂದು ಕಾಂಗ್ರೆಸ್ ನಾಯಕರಿಂದ ಶಕ್ತಿ ಪ್ರದರ್ಶನ ನಡೆಯಲಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧೆ ಮಾಡಿರುವ ರಾಯಬರೇಲಿ ಕ್ಷೇತ್ರದಲ್ಲಿ ಇಂದು ಸೋನಿಯಾ ಗಾಂಧಿ, Read more…

ಸ್ವದೇಶಿ ಕೋವ್ಯಾಕ್ಸಿನ್ ಲಸಿಕೆಯಿಂದಲೂ ಅಡ್ಡ ಪರಿಣಾಮ: ಜನರಲ್ಲಿ ಆರೋಗ್ಯ ಸಮಸ್ಯೆ

ನವದೆಹಲಿ: ಬ್ರಿಟನ್ ಮೂಲದ ಅಸ್ಟ್ರಾಜೆನಿಕಾ ಕಂಪನಿ ತಯಾರಿಸಿದ ಮತ್ತು ಭಾರತದಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಮಾರಾಟ ಮಾಡಿದ ಕೋವಿಶೀಲ್ಡ್ ಲಸಿಕೆಯಲ್ಲಿ ಅಪರೂಪದ ಅಡ್ಡ ಪರಿಣಾಮ ಇರುವುದನ್ನು ಸ್ವತಃ ಕಂಪನಿಯೇ ಒಪ್ಪಿಕೊಂಡಿದೆ. Read more…

ಸಿಡಿಲು ಬಡಿದು 11 ಮಂದಿ ಸಾವು: ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ದುರಂತ

ಕೊಲ್ಕತ್ತ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಸಿಡಿಲು ಬಡಿದು ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಮಾನ್ಸೂನ್ ಪ್ರಾರಂಭವಾಗುವ ಮುನ್ನ ಗುರುವಾರ ಗುಡುಗು ಸಿಡಿಲಿನ Read more…

ಮತ್ತೆ ಮುಸ್ಲಿಂ, ಕಾಂಗ್ರೆಸ್ ಬಗ್ಗೆ ಪ್ರಸ್ತಾಪಿಸಿದ ಮೋದಿ ಭಾಷಣಕ್ಕೆ ಆಕ್ಷೇಪ: ಅದಿರಲಿ ಈರುಳ್ಳಿ ಸಮಸ್ಯೆ, ಅಗತ್ಯ ವಸ್ತು ಬೆಲೆ ಏರಿಕೆ ಬಗ್ಗೆ ಮಾತಾಡಿ ಎಂದ ಯುವಕರು | VIDEO

ಮಹಾರಾಷ್ಟ್ರದ ನಾಸಿಕ್ ನಲ್ಲಿ ಪ್ರಧಾನಿ ಮೋದಿ ಅವರ ಭಾಷಣದ ವೇಳೆ ಯುವಕರು ಈರುಳ್ಳಿ ಬೆಲೆ ಬಗ್ಗೆ ಮಾತನಾಡಿ ಎಂದು ಹೇಳಿದ ಘಟನೆ ನಡೆದಿದೆ. ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ Read more…

ಹೃದಯ ವಿದ್ರಾವಕ ಘಟನೆ: ಲಾಕ್ ಮಾಡಿದ ಕಾರ್ ನಲ್ಲಿ ಮಗಳನ್ನು ಮರೆತು ಮದುವೆಗೆ ಹೋದ ದಂಪತಿ; ಉಸಿರುಗಟ್ಟಿ ಮೃತಪಟ್ಟ 3 ವರ್ಷದ ಮಗು

ಮೂರು ವರ್ಷದ ಬಾಲಕಿಯನ್ನು ಲಾಕ್ ಮಾಡಿದ ಕಾರ್ ನಲ್ಲಿ ಪೋಷಕರು ಮರೆತು ಬಿಟ್ಟುಹೋದ ಪರಿಣಾಮ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಪೋಷಕರು ಮರೆತು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋದ ಕಾರಣ Read more…

ಚುನಾವಣಾ ಕಾವಿನಲ್ಲೂ ತಣ್ಣಗಾಗಿರೋದ್ಯಾಕೆ RSS; ಕುತೂಹಲ ಕೆರಳಿಸುವಂತಿದೆ UP ಯಲ್ಲಿನ ಈ ಬೆಳವಣಿಗೆ…!

ಉತ್ತರ ಪ್ರದೇಶದ ಲಕ್ನೋದಲ್ಲಿ ಚುನಾವಣಾ ಕಾವು ತೀವ್ರಗೊಂಡಿದ್ದು, ಮತದಾನಕ್ಕೆ ಕೆಲವೇ ಸಮಯ ಉಳಿದಿದೆ. ಈ ವೇಳೆ ರಾಜಕೀಯದಲ್ಲಿ ಸಕ್ರಿಯವಾಗಿ ಇರಬೇಕಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆ ಕಾಣುತ್ತಿಲ್ಲ. ಇದರ Read more…

ಹೆಲಿಕಾಪ್ಟರ್ ನಲ್ಲಿ ಸಿಎಂ ಶಿಂಧೆ ಹಣ ಸಾಗಿಸಿದ ಆರೋಪ: ಲಗೇಜ್ ಪರಿಶೀಲಿಸಿದ ಚುನಾವಣಾಧಿಕಾರಿಗಳು | VIDEO

ಮುಂಬೈ: ನಾಸಿಕ್‌ ನ ಪಂಚವಟಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಲಗೇಜ್ ಅನ್ನು ಚುನಾವಣಾ ಆಯೋಗದ ಅಧಿಕಾರಿಗಳು ಗುರುವಾರ ಪರಿಶೀಲಿಸಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಶಿಂಧೆ ಅವರು ಹಣ ತುಂಬಿದ Read more…

Video | ‘ಜುಗಾಡ್’ ಗೆ ಫಿದಾ; ತಾತ್ಕಾಲಿಕ ಟ್ರೆಡ್ ಮಿಲ್ ಸೃಷ್ಟಿಸಿದ ಯುವಕನ ಐಡಿಯಾಗೆ ಬಹುಪರಾಕ್

ಭಾರತದಲ್ಲಿ ಜುಗಾಡ್ ಐಡಿಯಾಗಳಿಗೇನೂ ಕಮ್ಮಿಯಿಲ್ಲ. ಜನರನ್ನು ಅಚ್ಚರಿಗೊಳಿಸುವಂತಹ ಹಲವಾರು ಬುದ್ಧಿವಂತಿಕೆಯ ಐಡಿಯಾಗಳು ಗಮನ ಸೆಳೆಯುತ್ತಿರುತ್ತವೆ. ಅಂತಹ ಐಡಿಯಾವೊಂದು ನೆಟ್ಟಿಗರ ಮೆಚ್ಚುಗೆ ಗಳಿಸಿದೆ. ವ್ಯಕ್ತಿಯೊಬ್ಬ ತಯಾರಿಸಿದ ತಾತ್ಕಾಲಿಕ ಟ್ರೆಡ್‌ಮಿಲ್‌ ವಿಡಿಯೋ Read more…

ಮಹಿಳೆ ಕೂದಲು ಬಾಚುತ್ತಿರುವ ಬಿಜೆಪಿ ಮಾಜಿ ಶಾಸಕ; ವೈರಲ್ ವಿಡಿಯೋ ಬಗ್ಗೆ ಹೇಳಿದ್ದೇನು ಗೊತ್ತಾ ?

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಉತ್ತರಾಖಂಡ ಬಿಜೆಪಿಯ ಮಾಜಿ ಶಾಸಕ ಸುರೇಶ್ ರಾಥೋಡ್ ಮಹಿಳೆಯ ಕೂದಲನ್ನು ಬಾಚುತ್ತಿದ್ದಾರೆ. ಸುರೇಶ್ ರಾಥೋಡ್ ತನ್ನ ತಲೆ ಬಾಚುತ್ತಿರುವುದನ್ನ ಮಹಿಳೆ ಸ್ವತಃ Read more…

I.N.D.I.A ಕೂಟ ಅಧಿಕಾರಕ್ಕೆ ಬಂದರೆ ಟಿಎಂಸಿಯಿಂದ ಬಾಹ್ಯ ಬೆಂಬಲ; ಮಮತಾ ಬ್ಯಾನರ್ಜಿ ಸುಳಿವು

ಈ ಬಾರಿಯ ಲೋಕಸಭಾ ಚುನಾವಣೆ ಮತದಾನ 7 ಹಂತಗಳಲ್ಲಿ ನಡೆಯುತ್ತಿದ್ದು, ಈಗಾಗಲೇ ನಾಲ್ಕು ಹಂತದ ಮತದಾನ ಪೂರ್ಣಗೊಂಡಿದೆ. ಜೂನ್ ನಾಲ್ಕರಂದು ಫಲಿತಾಂಶ ಪ್ರಕಟಗೊಳ್ಳಲಿದ್ದು, ಯಾರಿಗೆ ಅಧಿಕಾರ ಸಿಗಲಿದೆ ಎಂಬ Read more…

Viral Video: ಲೈವ್ ಕಾರ್ಯಕ್ರಮದಲ್ಲೇ ಗಾಯಕನನ್ನು ಬಿಗಿದಪ್ಪಿ ಚುಂಬಿಸಿದ ಲೇಡಿ ಕಾನ್ಸ್ ಟೇಬಲ್…!

ಬಾಲಿವುಡ್ ನ ಖ್ಯಾತ ಹಿನ್ನೆಲೆ ಗಾಯಕ ಜುಬೀನ್ ಗಾರ್ಗ್ ಇತ್ತೀಚಿಗೆ ಸಾರ್ವಜನಿಕ ವೇದಿಕೆಯೊಂದರಲ್ಲಿ ಮುಜುಗರಕ್ಕೊಳಗಾದ ಘಟನೆ ನಡೆದಿದ್ದು, ಅವರನ್ನು ಅಪ್ಪಿಕೊಂಡು ಮುತ್ತು ಕೊಟ್ಟ ಮಹಿಳಾ ಕಾನ್ಸ್ ಟೇಬಲ್ ರನ್ನು Read more…

BREAKING NEWS: ವಿಶೇಷ ನ್ಯಾಯಾಲಯ ಮನಿ ಲಾಡ್ರಿಂಗ್ ದೂರು ಪರಿಗಣಿಸಿದ ಬಳಿಕ PMLA ಅಡಿ ‘ಇಡಿ’ ಬಂಧಿಸುವಂತಿಲ್ಲ; ‘ಸುಪ್ರೀಂ’ ಮಹತ್ವದ ಆದೇಶ

ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ವಿಶೇಷ ನ್ಯಾಯಾಲಯವು ದೂರು ಪರಿಗಣನೆಗೆ ತೆಗೆದುಕೊಂಡ ಬಳಿಕ ಆ ಪ್ರಕರಣದ ಆರೋಪಿಗಳನ್ನು ಜಾರಿ ನಿರ್ದೇಶನಾಲಯ ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ Read more…

‘ಜೆಟ್ ಏರ್ವೇಸ್’ ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ಕ್ಯಾನ್ಸರ್ ನಿಂದ ಸಾವು

ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರ ಪತ್ನಿ ಅನಿತಾ ಗೋಯಲ್ ಇಂದು ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ದೀರ್ಘ ಕಾಲದಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು, ಮುಂಬೈನ ಆಸ್ಪತ್ರೆಯಲ್ಲಿ Read more…

ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಿದ್ದ ಹಾಸ್ಯನಟ ಶ್ಯಾಮ್ ರಂಗೀಲಾ ನಾಮಪತ್ರ ತಿರಸ್ಕೃತ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಹಾಸ್ಯನಟ ಶ್ಯಾಮ್ ರಂಗೀಲಾ ಅವರು ಸಲ್ಲಿಸಿದ್ದ ಅಫಿಡವಿಟ್ ಅನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಬುಧವಾರ ತಿರಸ್ಕರಿಸಿದೆ. Read more…

ಮೋದಿ ಸೇರಿದಂತೆ ಈ ಘಟಾನುಘಟಿ ನಾಯಕರ ಬಳಿ ಇಲ್ಲ ಒಂದೇ ಒಂದು ಸ್ವಂತ ಕಾರು…!

ಪ್ರಸ್ತುತ ಲೋಕಸಭೆ ಚುನಾವಣೆ 2024 ರಲ್ಲಿ ಘಟಾವುಘಟಿಗಳೆಲ್ಲಾ ಈಗಾಗಲೇ ನಾಮಪತ್ರ ಸಲ್ಲಿಸಿದ್ದು ಜೂನ್ 4 ರ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಘಟಾನುಘಟಿ ನಾಯಕರು ಸಲ್ಲಿಸಿರುವ ಅಫಿಡವಿಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...