ನಮ್ಮ ಅಜ್ಜಿ-ತಾತನ ಕಾಲದಿಂದಲೂ ಮನೆಯಲ್ಲಿ ಸದಾ ಇರುತ್ತಿದ್ದ ಹರಳೆಣ್ಣೆ (Castor Oil), ಇಂದಿನ ಮಾಡರ್ನ್ ಯುಗದಲ್ಲೂ ತನ್ನ ಪ್ರಾಮುಖ್ಯತೆ ಉಳಿಸಿಕೊಂಡಿದೆ. ಕೇವಲ ಕೂದಲಿಗೆ ಮಾತ್ರವಲ್ಲದೆ, ಇಡೀ ದೇಹದ ಆರೋಗ್ಯಕ್ಕೆ ಹರಳೆಣ್ಣೆ ಒಂದು ವರದಾನ. ಹರಳೆಣ್ಣೆಯನ್ನು ಸರಿಯಾಗಿ ಬಳಸಿದರೆ ಏನೆಲ್ಲಾ ಲಾಭಗಳಿವೆ? ಇಲ್ಲಿದೆ ನೋಡಿ ಡಿಟೇಲ್ಸ್:
ಕೂದಲಿನ ಸರ್ವ ರೋಗಕ್ಕೂ ಇದೇ ಮದ್ದು
ನೀಳವಾದ, ದಟ್ಟವಾದ ಕೂದಲು ನಿಮ್ಮದಾಗಬೇಕೆ? ಹಾಗಿದ್ದರೆ ಹರಳೆಣ್ಣೆಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ.
ತೇವಾಂಶದ ಕವಚ: ಇದರಲ್ಲಿರುವ ರಿಸಿನೋಲಿಕ್ ಆಮ್ಲ ಮತ್ತು ಒಮೆಗಾ ಕೊಬ್ಬಿನಾಮ್ಲಗಳು ಕೂದಲಿಗೆ ನೈಸರ್ಗಿಕ ಕಂಡೀಷನರ್ ಆಗಿ ಕೆಲಸ ಮಾಡುತ್ತವೆ.
ಹೊಳೆಯುವ ಕೂದಲು: ಕೂದಲಿನ ಎಳೆಗಳನ್ನು ಬಲಪಡಿಸಿ, ಕೂದಲು ಒಡೆಯುವುದನ್ನು ತಡೆಯುತ್ತದೆ. ವಾರಕ್ಕೆ 2-3 ಬಾರಿ ಹಚ್ಚುವುದರಿಂದ ನೆತ್ತಿಯ ರಕ್ತ ಪರಿಚಲನೆ ಸುಧಾರಿಸಿ ಕೂದಲು ಸೊಂಪಾಗಿ ಬೆಳೆಯುತ್ತದೆ.
ಸೋಂಕಿನಿಂದ ಮುಕ್ತಿ: ಆಂಟಿಮೈಕ್ರೋಬಿಯಲ್ ಗುಣಗಳು ಇರುವುದರಿಂದ ನೆತ್ತಿಯ ತುರಿಕೆ ಮತ್ತು ಶಿಲೀಂಧ್ರಗಳ ಸೋಂಕನ್ನು ಇದು ದೂರವಿಡುತ್ತದೆ.
ನಾಭಿ ಚಿಕಿತ್ಸೆ: ಹೊಕ್ಕಳಿಗೆ ಹರಳೆಣ್ಣೆ ಹಚ್ಚಿದರೆ ಏನಾಗುತ್ತೆ?
ಸಾವಿರಾರು ವರ್ಷಗಳ ಹಿಂದಿನ ಈ ಪದ್ಧತಿ ಇಂದಿಗೂ ಮ್ಯಾಜಿಕ್ ಮಾಡಬಲ್ಲದು.
ಜೀರ್ಣಶಕ್ತಿ ಹೆಚ್ಚಳ: ಹೊಕ್ಕಳಿನ ಭಾಗದಲ್ಲಿ ಹರಳೆಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ ಮತ್ತು ಮಲಬದ್ಧತೆ ನಿವಾರಣೆಯಾಗುತ್ತದೆ.
ಚರ್ಮದ ಕಾಂತಿ: ಇದು ದೇಹಕ್ಕೆ ತೇವಾಂಶ ನೀಡಿ ಚರ್ಮವನ್ನು ಮೃದುವಾಗಿಸುತ್ತದೆ.
ಇತರೆ ಅಚ್ಚರಿಯ ಆರೋಗ್ಯ ಪ್ರಯೋಜನಗಳು:
ಧ್ವನಿ ಗಡಸಾಗಿದ್ದರೆ: ಗಂಟಲಿಗೆ ಪ್ರತಿದಿನ ಹರಳೆಣ್ಣೆ ಸವರಿಕೊಳ್ಳುತ್ತಿದ್ದರೆ, ಧ್ವನಿಪೆಟ್ಟಿಗೆಯ ಗಂಟು ಕರಗಿ ಧ್ವನಿ ಮೃದುವಾಗುತ್ತದೆ.
ಮಲಬದ್ಧತೆಗೆ ರಾಮಬಾಣ: ಒಂದು ಕಪ್ ಬೆಚ್ಚಗಿನ ಹಾಲಿಗೆ ಅರ್ಧ ಚಮಚ ಹರಳೆಣ್ಣೆ ಬೆರೆಸಿ ಕುಡಿದರೆ ಮಲಬದ್ಧತೆ ಸಮಸ್ಯೆ ಮಾಯ!
ಕಿಡ್ನಿ ಕಲ್ಲುಗಳಿಗೆ ಮುಕ್ತಿ?: ಆರೋಗ್ಯ ತಜ್ಞರಾದ ಬರ್ಬರ ಓನೈಲ್ ಅವರ ಪ್ರಕಾರ, ಹರಳೆಣ್ಣೆಯ ಬಳಕೆಯಿಂದ ಕಿಡ್ನಿ ಕಲ್ಲುಗಳನ್ನು ಮತ್ತು ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಾಧ್ಯ

